Loan Waiver: ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ರೈತರ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ

ರೈತರ ಸಾಲವನ್ನು ಮನ್ನಾ ಮಾಡುವ ಕುರಿತು ಸರ್ಕಾರದ ಮಹತ್ವದ ನಿರ್ಧಾರ

Farmers Crop Loan Waiver: ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ವಿಶೇಷವಾಗಿ ಯೋಜನೆಗಳನ್ನು ಪರಿಚಯಿಸುತ್ತಿದೆ. ರೈತರ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸದ್ಯ ಸರ್ಕಾರ ರೈತರಿಗೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಭರ್ಜರಿ ಸುದ್ದಿಯೊಂದನ್ನು ನೀಡಿದೆ. ರೈತರ ಸಾಲವನ್ನು ಮನ್ನಾ ಮಾಡುವ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Crop Loan Waiver
Image Credit: Forbesindia

ರೈತರಿಗೆ ಭರ್ಜರಿ ಗುಡ್ ನ್ಯೂಸ್
ತೆಲಂಗಾಣದಲ್ಲಿ ಹೊಸ ಸರ್ಕಾರ ಅಧಿಕಾರವನ್ನು ಪಡೆದ ಸಮಯದಿಂದ ಅನೇಕ ಹೊಸ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಸದ್ಯ ತೆಲಂಗಾಣ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ರೈತರ ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರೈತರ ಸಾಲ ಮನ್ನಾ ವಿಚಾರವಾಗಿ ಸರ್ಕಾರ ಮಹತ್ವದ ಘೋಷಣೆ ಮಾಡಲಿದೆ. ತೆಲಂಗಾಣ ಸರ್ಕಾರ ಈ ನಿರ್ಧಾರವನ್ನ ತಗೆದುಕೊಂಡಿದ್ದು ನಮ್ಮ ಕರ್ನಾಟಕದ ಸರ್ಕಾರ ಕೂಡ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ.

ರೈತರ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ
ಚುನಾವಣಾಯಲ್ಲಿ ನೀಡಿರುವ ಭರವಸೆಯಂತೆ ತೆಲಂಗಾಣದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ವರದಿಗಳ ಪ್ರಕಾರ ರೇವಂತ್ ರೆಡ್ಡಿ ಸರ್ಕಾರ ಈಗ ಕೃಷಿ ಸಾಲ ಮನ್ನಾ ವಿಷಯದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸಿದೆ.

Crop Loan Waiver In Karnataka
Image Credit: The Hindu

ರಾಜ್ಯದಲ್ಲಿ ರೈತರ ಸಾಲ ಮನ್ನಾಕ್ಕೆ ವಿಶೇಷ ನಿಗಮ ಸ್ಥಾಪಿಸಲು ರೇವಂತ್ ರೆಡ್ಡಿ ಸರ್ಕಾರ ನಿರ್ಧರಿಸಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ತೆಲಂಗಾಣದ ಸುಮಾರು 30 ಲಕ್ಷ ರೈತರಿಗೆ ಅನುಕೂಲವಾಗುವಂತೆ ರೂ.32 ಸಾವಿರ ಕೋಟಿ ಬೆಳೆ ಸಾಲವನ್ನು ಮನ್ನಾ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ವರದಿಗಳು ಸೂಚಿಸುತ್ತಿವೆ.

ಇದೇ ವಿಚಾರವಾಗಿ ಬ್ಯಾಂಕರ್‌ ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಎಲ್ಲಾ ಸಾಲಗಳನ್ನು ಒಂದೇ ಬಾರಿಗೆ ಮನ್ನಾ ಮಾಡುವಂತೆ ಬ್ಯಾಂಕ್‌ ಗಳಿಗೆ ಮನವಿ ಮಾಡಲಾಗಿದೆ. ರೈತರ ಸಾಲ ಮನ್ನಾ ಹಣವನ್ನು ಬ್ಯಾಂಕ್‌ ಗಳಿಗೆ ವಿಶೇಷ ನಿಗಮದ ಮೂಲಕ ಇಎಂಐ ಮೋಡ್ ಮೂಲಕ ಪಾವತಿಸಲು ಸರ್ಕಾರ ಮುಂದಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ.

Join Nadunudi News WhatsApp Group

Join Nadunudi News WhatsApp Group