CSK Record: ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡ ಕೂಡ ಮಾಡದ ಐತಿಹಾಸಿಕ ದಾಖಲೆ ಮಾಡಿದ CSK, ಧೋನಿ ನಿಜಕ್ಕೂ ಗ್ರೇಟ್.

ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡ ಕೂಡ ಮಾಡದ ರೆಕಾರ್ಡ್ ಕ್ರಿಯೇಟ್ ಮಾಡಿದ CSK

CSK New Record In IPL 2024: ಪ್ರಸ್ತುತ ಕ್ರಿಕೆಟ್ ಪ್ರಿಯರ ನೆಚ್ಚಿನ IPL ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ IPL !7 ನೇ ಆವೃತ್ತಿಯಲ್ಲೂ ರೋಚಕ ಪಂದ್ಯಗಳು ನಡೆಯುತ್ತಿದೆ. ಈ ಬಾರಿ ಕಪ್ ಗೆಲ್ಲುವ ಸಲುವಾಗಿ ವಿವಿಧ ತಂಡಗಳ ಬಾರಿ ಪೈಪೋಟಿ ನಡೆಸುತ್ತಿವೆ.

IPL ನಲ್ಲಿ ನಡೆದ ಹಲವು ಪಂದ್ಯದಲ್ಲಿ ಹೆಚ್ಚಿನ ಗೆಲುವುಗಳೊಂದಿಗೆ ಕೆಲ ತಂಡಗಳು ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರ ಸ್ಥಾನವನ್ನು ಪದ್ದುಕೊಂಡಿದೆ. ಬಲಿಷ್ಠ ತಂಡಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ಎಲ್ಲ ತಂಡಗಳು ಕೂಡ ಮೈದಾನದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಅದರಲ್ಲ ಮೊನ್ನೆ ನಡೆದ CSK v /s SRH ಪಂದ್ಯದಲ್ಲಿ CSK ತಂಡ ವಿಶ್ವ ದಾಖಲೆ ಬರೆದಿದೆ.

CSK New Record In IPL 2024
Image Credit: Moneycontrol

ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡ ಕೂಡ ಮಾಡ ಐತಿಹಾಸಿಕ ದಾಖಲೆ ಮಾಡಿದ CSK
ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 78 ರನ್‌ ಗಳಿಂದ ಜಯಗಳಿಸಿದ್ದು, ಈ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದೆ. ಸನ್‌ ರೈಸರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮತ್ತೊಂದೆಡೆ ರುತುರಾಜ್ ಗಾಯಕ್‌ ವಾಡ್ (98 ರನ್) ಮತ್ತು ಡೆರಿಲ್ ಮಿಚೆಲ್ (52 ರನ್) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ ಗಳಲ್ಲಿ 212 ರನ್ ಗಳಿಸಿತು.

ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಟಿ20 ಕ್ರಿಕೆಟ್‌ ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ 35 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆಯನ್ನು ಸಾಮರ್ ಸೆಟ್ ತಂಡ 34 ಬಾರಿ ಹೊಂದಿತ್ತು. ಭಾರತ ಕ್ರಿಕೆಟ್ ತಂಡ ಟಿ20 ಕ್ರಿಕೆಟ್‌ ನಲ್ಲಿ 32 ಬಾರಿ 200ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 31 ಬಾರಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

CSK IPL 2024
Image Credit: Timesnownews

Join Nadunudi News WhatsApp Group

Join Nadunudi News WhatsApp Group