Nikhil Gowda: ನಿಖಿಲ್ ಗೆ ಕಾಲ್ ಮಾಡಿದ ಡಿ.ಕೆ ಶಿವಕುಮಾರ್, ನಿಖಿಲ್ ಗೆ ಈ ರೀತಿ ಧೈರ್ಯ ಹೇಳಿದ D.K ಶಿವಕುಮಾರ್.

ನಿಖಿಲ್ ಕುಮಾರಸ್ವಾಮಿಗೆ ಕರೆಮಾಡಿ ಸಮಾಧಾನ ಮಾಡಿದ ಡಿ. ಕೆ ಶಿವಕುಮಾರ್.

D.K Shivakumar And Nikhil Kumaraswamy: ಕರ್ನಾಟಕ ವಿಧಾಸಭಾ ಚುನಾವಣೆ (Karnataka Assembly Election) ಮೇ 10 ರಂದು ನೆರವೇರಿದ್ದು ಮೇ 13 ರಂದು ಫಲಿತಾಂಶ ಪ್ರಕಟವಾಗಿದೆ. ಹಲವು ಕ್ಷೇತ್ರಗಳಲ್ಲಿ ವಿವಿಧ ಅಭ್ಯರ್ಥಿಗಳು ಶಾಸಕರ ಸ್ಥಾನದಲ್ಲಿ ನಿಂತಿದ್ದರು.

ಇನ್ನು ಕಾಂಗ್ರೆಸ್ ಪಕ್ಷ ಬರೋಬ್ಬರಿ 135 ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ. ಮುಂದಿನ ಮುಖ್ಯಮಂತ್ರಿಯ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಕಾಯುತ್ತಿದ್ದಾರೆ.

D.K Shivakumar And Nikhil Kumaraswamy
Image Credit: ndtv

ರಾಮನಗರ ಚುನಾವಣೆಯಲ್ಲಿ ಸೋಲು ಕಂಡ ನಿಖಿಲ್ ಕುಮಾರಸ್ವಾಮಿ
ಇನ್ನು ರಾಮನಗರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷದ ಕಡೆಯಿಂದ ನಟ ನಿಖಿಲ್ ಕುಮಾರ್ ಸ್ವಾಮಿ (Nikhil Kumaraswamy) ಚುನಾವಣೆಗೆ ನಿಂತಿದ್ದರು. ಆದರೆ ಈ ಬಾರಿ ಕೂಡ ನಿಖಿಲ್ ಕುಮಾರ ಸ್ವಾಮಿ ಸೋಲು ಅನುಭವಿಸಿದ್ದಾರೆ. ರಾಮನಗರ ಚುನಾವಣೆಯಲ್ಲಿ ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ.

ಇದೀಗ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್  (D.K Shivakumar) ನಿಖಿಲ್ ಅವರಿಗೆ ಕರೆ ಮಾಡಿ ಸಾಂತ್ವನ ಮಾಡಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಅವರಿಗೆ ಡಿಕೆಶಿ ಯಾವ ರೀತಿ ಸಮಾಧಾನದ ಮಾತುಗಳನ್ನಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ನಿಖಿಲ್ ಗೆ ಕರೆ ಮಾಡಿ ಸಾಂತ್ವನ ಹೇಳಿದ ಡಿಕೆಶಿ
ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಸತತ ಎರಡನೇ ಬಾರಿ ಕೂಡ ನಿಖಿಲ್ ಅವರು ರಾಜಕೀಯದಲ್ಲಿ ಗೆಲುವು ಕಾಣಲಿಲ್ಲ. ಈ ಬಾರಿ ಕೂಡ ಸೋಲು ಅನುಭವಿಸಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಕೆರೆ ಮಾಡಿ ಸಮಾಧಾನದ ಮಾತುಗಳನ್ನಾಡಿದ್ದಾರೆ.

Join Nadunudi News WhatsApp Group

D.K Shivakumar called and consoled Nikhil Kumaraswamy who lost the election.
Image Credit: socialnews

“ಈ ಸೋಲಿನಿಂದ ಕೆಂಗೆಡಬೇಡ. ಕ್ಷೇತ್ರದಲ್ಲಿ ಓಡಾಟ ನಡೆಸಿ ಜನರ ಜೊತೆ ನಿಲ್ಲಬೇಕು. ಸೋಲಿನಿಂದ ಹತಾಶನಾಗಬೇಡ ರಾಜಕೀಯದಲ್ಲಿ ಏಳು- ಬೀಳು ಸಹಜ. ಮುಂದಿನ ದಿನಗಳಲ್ಲಿ ನಿನಗೆ ರಾಜಕೀಯ ಭವಿಷ್ಯ ಇದೆ” ಎಂದು ಡಿ ಕೆ ಶಿವಕುಮಾರ್ ಅವರು ನಿಖಿಲ್ ಅವರಿಗೆ ಕರೆ ಮಾಡಿ ಸಾಂತ್ವನದ ಮಾತುಗಳನ್ನಾಡಿದ್ದಾರೆ.

Join Nadunudi News WhatsApp Group