DA Update 2024: ಸರ್ಕಾರೀ ನೌಕರರ ಖಾತೆಗೆ ಬರಲಿದೆ 2.18 ಲಕ್ಷ ರೂಪಾಯಿ ಹೆಚ್ಚುವರಿ ಹಣ, ಕೇಂದ್ರದಿಂದ ಗುಡ್ ನ್ಯೂಸ್.

ಸರ್ಕಾರೀ ನೌಕರರ ಖಾತೆಗೆ ಬರಲಿದೆ 2.18 ಲಕ್ಷ ರೂಪಾಯಿ ಹೆಚ್ಚುವರಿ ಹಣ

DA Arears Latest Update: ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯುತ್ತಿದೆ. ಇಲ್ಲಿಯವರೆಗೆ ಮೂರು ಹಂತದ ಮತದಾನ ಪೂರ್ಣಗೊಂಡಿದ್ದು, ಇನ್ನೂ ನಾಲ್ಕು ಹಂತದ ಮತದಾನ ನಡೆಯಬೇಕಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದ್ದು, ನಂತರ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ವೇತನದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ಕೇಂದ್ರ ನೌಕರರು ಡಿಎ ಬಾಕಿ ಹಣವನ್ನು ಪಡೆದರೆ ಹೆಚ್ಚಿನ ವೇತನವನ್ನು ಪಡೆಯಬವುದಾಗಿದೆ. ಇನ್ನು ಸರ್ಕಾರೀ ನೌಕರಇಗೆ ಡಿಎ ಬಾಕಿ ಸಿಕ್ಕರೆ ಅವರ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

DA Arrears Latest Update
Image Credit: Zeebiz

ಕೇಂದ್ರ ನೌಕರರಿಗೆ ಕೇಂದ್ರದಿಂದ ಗುಡ್ ನ್ಯೂಸ್
18 ತಿಂಗಳ ಬಾಕಿ ಇರುವ ಡಿಎ ಬಾಕಿಯನ್ನು ಕೇಂದ್ರ ನೌಕರರಿಗೆ ಪಾವತಿಸಿದರೆ ನೌಕರರ ವೇತನದಲ್ಲಿ ಬಾರಿ ಹೆಚ್ಚಳ ಆಗಲಿದೆ. ಒಂದು ಲೆಕ್ಕಾಚಾರದ ಪ್ರಕಾರ ನೌಕರರು ಸುಮಾರು 2 ಲಕ್ಷ 18 ಸಾವಿರ ರೂ. ವೇತನವನ್ನು ಪಡೆಯಲಿದ್ದಾರೆ. ಕರೋನ ವೈರಸ್ ಸೋಂಕಿನ ಅವಧಿಯಲ್ಲಿ ಕೇಂದ್ರ ಸರ್ಕಾರವು ಜನವರಿ 1, 2020 ರಿಂದ ಜೂನ್ 30, 2021 ರ ವರೆಗೆ ಡಿಎ ಬಾಕಿ ಹಣವನ್ನು ಕಳುಹಿಸಲಿಲ್ಲ. ನಂತರ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಕೇಂದ್ರ ನೌಕರರ ಖಾತೆಗೆ ಸುಮಾರು 2 ಲಕ್ಷದ 18 ಸಾವಿರ ರೂ.ಗಳಷ್ಟು ಹಣ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಯಾವಾಗ ಬೇಕಾದರೂ ಮಹತ್ವದ ನಿರ್ಧಾರ ಕೈಗೊಳ್ಳಬಹುದು. ಆದಾಗ್ಯೂ, ಸರ್ಕಾರ ಈವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

DA Arrears
Image Credit: Informalnewz

ಸರ್ಕಾರೀ ನೌಕರರ ಖಾತೆಗೆ ಬರಲಿದೆ 2.18 ಲಕ್ಷ ರೂಪಾಯಿ ಹೆಚ್ಚುವರಿ ಹಣ
ಇನ್ನು 50 ರಷ್ಟು ತುಟ್ಟಿ ಭತ್ಯೆಯ ಲಾಭವನ್ನು ಕೇಂದ್ರ ನೌಕರರು ಈಗ ಪಡೆಯುತ್ತಿದ್ದಾರೆ. ಈ ಹಿಂದೆ ನೌಕರರು ಶೇ 46ರಷ್ಟು ಲಾಭ ಪಡೆಯುತ್ತಿದ್ದರು. ಇತ್ತೀಚೆಗೆ, ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು, ನಂತರ ಅದನ್ನು ಶೇಕಡಾ 50 ಕ್ಕೆ ಹೆಚ್ಚಿಸಿದೆ. ಏಳನೇ ವೇತನ ಆಯೋಗದ ಪ್ರಕಾರ, ಪ್ರತಿ ವರ್ಷ ಎರಡು ಬಾರಿ ಡಿಎ ಹೆಚ್ಚಿಸಲಾಗುತ್ತದೆ.

Join Nadunudi News WhatsApp Group

ಹೆಚ್ಚಿದ ಡಿಎ ದರಗಳು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತವೆ ಎಂದು ಪರಿಗಣಿಸಲಾಗಿದೆ. 4 ರಷ್ಟು ಡಿಎ ಹೆಚ್ಚಿಸಿದ ದರಗಳು ಜನವರಿ 1 ರಿಂದ ಜಾರಿಗೆ ಬಂದಿವೆ. ಇನ್ನು 18 ತಿಂಗಳ ಬಾಕಿ ಇರುವ ಡಿಎ ಬಾಕಿಯನ್ನು ಕೇಂದ್ರ ನೌಕರರಿಗೆ ಪಾವತಿಸಿದರೆ ನೌಕರರ ವೇತನದಲ್ಲಿ 2 .18 ಲಕ್ಷ ತಲುಪುದರಲ್ಲಿ ಯಾವುದೇ ಸಂದೇಹವಿಲ್ಲ.

Govt Employees Latest News
Image Credit: Informalnewz

Join Nadunudi News WhatsApp Group