DA Hike 2024: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ಈ ನೌಕರರ ತುಟ್ಟಿಭತ್ಯೆ ಶೇಕಡಾ 25 ಹೆಚ್ಚಳ.

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ನೌಕರರು ಇನ್ನುಮುಂದೆ ಇದರ ಲಾಭವನ್ನು ಪಡೆಯಬಹುದಾಗಿದೆ.

DA Hike Latest Update: ಪ್ರಸ್ತುತ ದೇಶದಲ್ಲಿ ಕೇಂದ್ರ ನೌಕರರ ವೇತನದ ಬಗ್ಗೆ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. ಈಗಾಗಲೇ ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಈ ಬಗ್ಗೆ ಕೇಂದ್ರದಿಂದ ಅಧಿಕೃತ ಘೋಷಣೆ ಕೂಡ ಹೊರಬಿದ್ದಿದೆ.

ಕೇಂದ್ರ ನೌಕರರು ಈ ವರ್ಷದಿಂದ ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಇದೀಗ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ ಇನ್ನೊಂದು ಸಿಹಿ ಸುದ್ದಿಯನ್ನು ನೀಡಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ನೌಕರರು ಇನ್ನುಮುಂದೆ ಇದರ ಲಾಭವನ್ನು ಪಡೆಯಬಹುದಾಗಿದೆ.

DA Hike Latest Update
Image Credit: Informalnewz

ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಕೆಲ ತಿಂಗಳ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿತ್ತು. ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ನೌಕರರಿಗೆ ನೀಡಲಾಗುವ ಬೇರ್ಪಡಿಕೆ ವೇತನ ಶೇ.50. ತುಟ್ಟಿ ಭತ್ಯೆ ಜತೆಗೆ ಕೇಂದ್ರ ಸರ್ಕಾರ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ) ಹೆಚ್ಚಿಸಿದೆ. ಇದರೊಂದಿಗೆ ಕೇಂದ್ರ ಸರಕಾರಕ್ಕೆ ವಾರ್ಷಿಕ 12,868 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ. ತುಟ್ಟಿಭತ್ಯೆ ಹೆಚ್ಚಳವು ಜನವರಿಯಿಂದ ಅನ್ವಯವಾಗಲಿದೆ. ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಇದೀಗ ಸರ್ಕಾರೀ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ.

ಈ ನೌಕರರ ತುಟ್ಟಿಭತ್ಯೆ ಶೇಕಡಾ 25 ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಾದಂತೆ ಅವರ ಮಕ್ಕಳ ಶಿಕ್ಷಣ ಭತ್ಯೆ ಹಾಗೂ ಹಾಸ್ಟೆಲ್ ಸಬ್ಸಿಡಿ ಕೂಡ ಹೆಚ್ಚಾಗಲಿದೆ. ಅದರಂತೆ ಕೇಂದ್ರ ಸರ್ಕಾರ ಈ ಕುರಿತು ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ. ಹೊಸ ಆದೇಶದ ನಂತರ ನಿವೃತ್ತಿ ಗ್ರಾಚ್ಯುಟಿ ಮೊತ್ತವನ್ನು ಶೇ.25 ರಷ್ಟು ಅಂದರೆ 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ನೌಕರರ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ನಿವೃತ್ತಿ ತುಟ್ಟಿಭತ್ಯೆ ಮತ್ತು ಮರಣ ಗ್ರಾಚ್ಯುಟಿಯನ್ನು ಶೇ.25 ರಷ್ಟು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ.

Dearness Allowance Hike News
Image Credit: Aajtak

Join Nadunudi News WhatsApp Group

Join Nadunudi News WhatsApp Group