DA Hike: ಸರ್ಕಾರೀ ನೌಕರರ ಸಂಬಳ 49420 ರೂ ಹೆಚ್ಚಳ, ಕೇಂದ್ರದಿಂದ ನೌಕರರಿಗೆ ಗುಡ್ ನ್ಯೂಸ್

ಸರ್ಕಾರೀ ನೌಕರರ ಸಂಬಳದಲ್ಲಿ ಮತ್ತೆ ಹೆಚ್ಚಳ, ಕೇಂದ್ರದಿಂದ ಗುಡ್ ನ್ಯೂಸ್

DA Hike Update: ಪ್ರಸ್ತುತ 2024 ಆರಂಭವಾಗಿದೆ. ಹೊಸ ವರ್ಷಕ್ಕೆ ಹೊಸ ಹೊಸ ನಿಯಮಗಳು ಪರಿಚಯವಾಗುವುದರ ಜೊತೆಗೆ ಅನೇಕ ಬದಲಾವಣೆಗಳು ಕೂಡ ಆಗಲಿದೆ. ಇನ್ನು ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಹೌದು ಸರ್ಕಾರೀ ನೌಕರರು ಮುಖ್ಯವಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸರ್ಕಾರ ಸದ್ಯದ್ಲಲೇ DA ಹೆಚ್ಚಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಸರ್ಕಾರ ಸಿದ್ಧತೆ ನಡೆಸುತ್ತಿದೆ.

Government Employees DA Hike
Image Credit: News 18

ಸರ್ಕಾರೀ ನೌಕರರ ಡಿಎ ಹೆಚ್ಚಳ
2024ಕ್ಕೆ ಮೋದಿ ಸರ್ಕಾರ ಮತ್ತೊಮ್ಮೆ ಕೇಂದ್ರ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಿದೆ. ಈ ಹೆಚ್ಚಳ ಮಾರ್ಚ್ ತಿಂಗಳಲ್ಲಿ ಸಂಭವಿಸಲಿದೆ. ನವೆಂಬರ್‌ನಲ್ಲಿ ಬಿಡುಗಡೆಯಾದ AICPI ಅಂಕಿಅಂಶಗಳ ಪ್ರಕಾರ DA ಶೇ 4 ರಷ್ಟು ಹೆಚ್ಚಾದರೆ ಶೇ 50 ರಷ್ಟು DA ಆಗುತ್ತದೆ.

DA Hike Update
Image Credit: News 18

ಸರ್ಕಾರೀ ನೌಕರರ ಸಂಬಳ 49420 ರೂ ಹೆಚ್ಚಳ
ಹೊಸ ವರ್ಷದಲ್ಲಿ ಸರ್ಕಾರೀ ನೌಕರರ ಸಂಬಳದಲ್ಲಿ ಬಾರಿ ಜಿಗಿತವಾಗುವ ನಿರೀಕ್ಷೆ ಇದೆ. ಫಿಟ್‌ಮೆಂಟ್ ಅಂಶ ಹೆಚ್ಚಳದ ನಂತರ ನೌಕರರ ವೇತನ 8,860 ರೂ. ಆಗಲಿದೆ. ಈ ಹೆಚ್ಚಳವನ್ನು DA ಹೆಚ್ಚಳದ ನಂತರ ನೀಡಬಹುದು. ಈಗಿರುವ 2.57 ಫಿಟ್‌ಮೆಂಟ್ ಅಂಶ ಮುಂದಿನ ದಿನಗಳಲ್ಲಿ 3.68 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದೇ ವೇಳೆ ಹಂತ-3ರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.

ಹಂತ-3 ರಲ್ಲಿ ಕೇಂದ್ರ ನೌಕರರ ಮೂಲ ವೇತನ 18 ಸಾವಿರ, ಆದ್ದರಿಂದ ಭತ್ಯೆಗಳನ್ನು ಹೊರತುಪಡಿಸಿ, ಅವರ ವೇತನವು ರೂ. 18 ಸಾವಿರ ರೂಪಾಯಿಗಳನ್ನು 2.57 ಫಿಟ್‌ಮೆಂಟ್ ಅಂಶದಿಂದ ಗುಣಿಸಿದಾಗ ಅದು 46,260 ರೂ ಆಗುತ್ತದೆ. ಅಂದರೆ ಒಟ್ಟಾರೆ ನೌಕರರಿಗೆ ಈಗಿರುವ ವೇತನಕ್ಕೆ ಹೋಲಿಸಿದರೆ 49,420 ರೂ. ಈ ಲೆಕ್ಕಾಚಾರವು ಕನಿಷ್ಠ ಮೂಲ ವೇತನದಲ್ಲಿದೆ. ಗರಿಷ್ಠ ಸಂಬಳ ಹೊಂದಿರುವವರು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group