Dhananjay: ವೀಕೆಂಡ್ ವಿಥ್ ರಮೇಶ್ ನಲ್ಲಿ ಮದುವೆ ಯಾವಾಗ ಎಂದು ತಿಳಿಸಿದ ಡಾಲಿ ಧನಂಜಯ್.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ ನಟ ಡಾಲಿ ಧನಂಜಯ್

Daali Dhananjay Weekend With Ramesh Season 5: ಡಾಲಿ ಧನಂಜಯ್ (Dali Dhananjay) ಅವರು ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ವಾರಾಂತ್ಯದಲ್ಲಿ ಕನ್ನಡಿಗರನ್ನು ರಂಜಿಸಲು ವಿಕೇಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh Season 5) ಆರಂಭಗೊಂಡಿದೆ.

ಇನ್ನು ಈಗಾಗಲೇ ನಾಲ್ಕು ಸಾಧಕರ ಪರಿಚಯವಾಗಿದೆ. ಈ ವಾರದಲ್ಲಿ ಸಾಧಕರ ಕುರ್ಚಿಯಲ್ಲಿ ಯಾರು ಬರುತ್ತಾರೆ ಎನ್ನುವ ಬಗ್ಗೆ ಕೂಡ ಪ್ರೊಮೊ ರಿಲೀಸ್ ಆಗಿದೆ.

Dolly Dhananjay told when the wedding will be in Weekend with Ramesh.
Image Credit: publictv

ಈ ವಾರದ ಸಾಧಕರಾಗಿ ಡಾಲಿ ಧನಂಜಯ್
ಕಳೆದ 9 ವರ್ಷಗಳಿಂದ ವೀಕೆಂಡ್ ವಿಥ್ ರಮೇಶ್ ಶೋ ಪ್ರಸಾರವಾಗುತ್ತಿದೆ. ಕಳೆದ ನಾಲ್ಕು ಸೀಸನ್ ನಲ್ಲಿ ಒಟ್ಟಾಗಿ 84 ಸಾಧಕರ ಪರಿಚಯವನ್ನು ವೀಕೆಂಡ್ ವಿಥ್ ರಮೇಶ್ ಸಂಚಿಕೆ ಮಾಡಿದೆ. ಇದೀಗ ಸೀಸನ್ 5 ನಡೆಯುತ್ತಿದೆ. ಈಗಾಗಲೇ 4 ಸಾಧಕರ ಪರಿಚಯವಾಗಿದೆ. ಇನ್ನು ಈ ವಾರದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಅವರ ಬದುಕಿನ ಪಯಣದ ಬಗ್ಗೆ ವೀಕೆಂಡ್ ವಿಥ್ ರಮೇಶ್ ಸಂಚಿಕೆ ತೋರಿಸಿಕೊಡಲಿದೆ.

ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಡಾಲಿ ಮದುವೆಯ ಬಗ್ಗೆ ಮಾತುಕತೆ
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಮದುವೆ ಆಗದೆ ಇದ್ದರೆ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಎದುರಿಸಲೇ ಬೇಕಾಗುತ್ತದೆ. ಇನ್ನು ಚಂದನವನದ ಸ್ಟಾರ್ ನಟ ಡಾಲಿ ಇನ್ನೂ ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ. ಹೀಗಾಗಿ ಇವರಿಗೆ ಈ ಪ್ರಶ್ನೆ ಎದುರಾಗುವುದು ಸಾಮಾನ್ಯ.

In Weekend with Ramesh, actor Dhananjay shared his life's pains
Image Credit: news18

ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಕೂಡ ಡಾಲಿ ಅವರ ಮದುವೆಯ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಈ ವೇಳೆ ನಟ ರಾಕ್ಷಸ ತಮ್ಮ ಮದುವೆಯ ಬಗ್ಗೆ ಏನು ಮಾತನಾಡಿದ್ದಾರೆ ಎನ್ನುವ ಬಗ್ಗೆ ತಿಳಿಯೋಣ.

Join Nadunudi News WhatsApp Group

ರಮೇಶ್ ಅವರ ಬಳಿ ಮದುವೆಯ ಬಗ್ಗೆ ಹೇಳಿದ ಧನಂಜಯ್
ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಧನಂಜಯ್ ಅವರ ಅಮ್ಮ ಹಾಗೂ ಸಹೋದರಿ ಬಂದಿದ್ದರು. ಈ ವೇಳೆ ಅಮ್ಮ ಹಾಗೂ ಧನಂಜಯ್ ಅವರ ಸಹೋದರಿ ಇವನಿಗೆ ಮದುವೆ ಆಗಲು ಹೇಳಿ ಎಂದು ರಮೇಶ್ ಅರವಿಂದ್ ಅವರ ಬಳಿ ಹೇಳಿದ್ದರು. ಆಗ ರಮೇಶ್ ಅರವಿಂದ್ ಮದುವೆ ಯಾವಾಗ ಎಂದು ಕೇಳಿದರು. ಈ ಪ್ರಶ್ನೆಗೆ ಧನಂಜಯ್ ಮುಗುಳುನಗೆಯಲ್ಲಿ ಉತ್ತರಿಸುತ್ತಾರೆ.

Actor Dhananjay shared many topics of marriage and career life in Weekend with Ramesh
Image Credit: news18

ಮದುವೆ ಯಾವಾಗ ಎಂದು ಕೇಳಿದ ಶಿವಣ್ಣ
ಇನ್ನು ಡಾಲಿ ಅವರಿಗೆ ಶಿವಣ್ಣ ಮದುವೆ ಯಾವಾಗ ಎಂದು ಕೇಳುತ್ತಾರೆ. ಆಗ ಧನಂಜಯ್ ಅವರು ಶಿವಣ್ಣ ಹೇಳಿದ ಯಾವುದನ್ನೂ ನಾನು ತೆಗೆದು ಹಾಕುವುದಿಲ್ಲ. ಖಂಡಿತ ಮದುವೆ ಆಗ್ತೇನೆ ಎಂದು ಹೇಳಿದ್ದಾರೆ. ಆಗ ರಮೇಶ್ ಅರವಿಂದ್ ಮನಸ್ಸಿನಲ್ಲಿ ಇರುವವರ ಬಗ್ಗೆ ನನಗೆ ಮಾತ್ರ ಹೇಳಿ ಎನ್ನುತ್ತಾರೆ.

ಆಗ ಡಾಲಿ ರಮೇಶ್ ಅವರ ಕಿವಿಯಲ್ಲಿ ಏನೋ ಹೇಳುತ್ತಾರೆ. ಇನ್ನು ಧನಂಜಯ್ ಅವರು ರಮೇಶ್ ಅವರ ಕಿವಿಯಲ್ಲಿ ಮದುವೆ ಆಗುವ ಹುಡುಗಿಯ ಬಗ್ಗೆ ಹೇಳಿದ್ದಾರೋ ಅಥವಾ ಬೇರೆ ವಿಷಯದ ಬಗ್ಗೆ ಮಾತನಾಡಿದ್ದಾರೋ ಎನ್ನುವುದನ್ನು ತಿಳಿದುಕೊಳ್ಳಲು ಈ ದಿನದ ವೀಕೆಂಡ್ ವಿಥ್ ರಮೇಶ್ ಸಂಚಿಕೆಯನ್ನು ನೋಡಬೇಕು.

Join Nadunudi News WhatsApp Group