Daali Dhananjay: ಡಾಲಿ ಜೊತೆ ಮದುವೆ ಆಗಲಿದ್ದಾರೆ ಅಮೃತ, ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ ಅಮೃತ ಅಯಂಗಾರ್.

ಡಾಲಿ ಜೊತೆಗಿನ ಡೇಟಿಂಗ್ ವಿಚಾರದ ಬಗ್ಗೆ ಮಾತನಾಡಿದ ನಟಿ ಅಮೃತ ಅಯ್ಯಂಗಾರ್.

Daali Dhananjay And Amrutha Iyengar: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ (Daali Dhananjay) ಮತ್ತು ಅಮೃತ ಅಯ್ಯಂಗಾರ್ (Amrutha Iyengar) ಅವರು ಜೊತೆಯಾಗಿ ಮೂರೂ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಈ ಜೋಡಿ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ.

ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಈ ಜೋಡಿಗೆ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಆದರೆ ಇದರ ಬಗ್ಗೆ ನಟಿ ಅಮೃತ ಅಯ್ಯಂಗಾರ್ ಆಗಲಿ, ನಟ ಧನಂಜಯ್ ಅವರಾಗಲಿ ಯಾವುದೇ ರೀತಿಯ ಸ್ಪಷ್ಟನೆ ನೀಡಿರಲಿಲ್ಲ.

Daali Dhananjay And Amrutha Iyengar latest news
Image Credit: Instagram

ಧನಂಜಯ್ ಮತ್ತು ಅಮೃತ ಅಯ್ಯಂಗಾರ್
ನಟಿ ಅಮೃತ ಮಾತ್ತು ಡಾಲಿ ಧನಂಜಯ್ ಪಾಪಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದು ಮತ್ತೆ ಡಾಲಿ ಧನಂಜಯ್ ಅವರೇ ನಿರ್ಮಿಸಿರುವ ಬಡವ ರಾಸ್ಕಲ್ ಸಿನಿಮಾದಲ್ಲಿ ಸಹ ಜೊತೆಯಾಗಿ ನಟಿಸಿದ್ದಾರೆ. ಇದಾದ ನಂತರ ಮತ್ತೆ ಹೊಯ್ಸಳ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದನ್ನು ನೋಡಿ ಅಭಿಮಾನಿಗಳು ಇವರಿಬ್ಬರು ಮದುವೆ ಆಗಲಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.

ಧನಂಜಯ್ ಮತ್ತು ನಟಿ ಅಮೃತ ಅಯ್ಯಂಗಾರ್ ಒಟ್ಟಿಗೆ ಸಿನಿಮಾ ಮಾಡುತ್ತಾನೆ ಇದ್ದಾರೆ. ಇದರಿಂದ ಇವರಿಬ್ಬರ ಮಧ್ಯೆ ಲವ್ ಸ್ಟೋರಿ ಇದೆ ಅನ್ನುವ ಮಾತು ಕೂಡ ಕೇಳಿ ಬಂದಿದೆ. ನಟಿ ಅಮೃತ ಅಯ್ಯಂಗಾರ್ ಕೂಡ ಈ ಕುರಿತು ಚಾನಲ್ ಒಂದಕ್ಕೆ ಮಾತನಾಡಿದ್ದಾರೆ. ನಮ್ಮ ನಡುವೆ ಏನು ಇಲ್ಲ ಅಂತಲೇ ನಟಿ ಅಮೃತ ಹೇಳಿದ್ದಾರೆ. ಇದೀಗ ನಟಿ ಅಮೃತ ಮತ್ತೆ ಧನಂಜಯ್ ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿದ್ದಾರೆ.

Amrutha Iyengar And Daali Dhananjay
Image Credit: Tv9kannada

ಡಾಲಿ ಜೊತೆಗಿನ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಅಮೃತ ಅಯ್ಯಂಗಾರ್
ನಟಿ ಅಮೃತ ಡಾಲಿ ಜೊತೆಗಿನ ಡೇಟಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನಗೆ ಗೊತ್ತು ಡಾಲಿ ಮತ್ತು ನನ್ನನ್ನು ಅಭಿಮಾನಿಗಳು ತೆರೆ ಮೇಲೆ ಜೊತೆಯಾಗಿ ನೋಡಲು ಇಷ್ಟಪಡುತ್ತಾರೆ. ನಾವು ಮೂರೂ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದೇವೆ. ಹಾಗಾಗಿ ಜನರು ನಮ್ಮ ನಡುವೆ ಏನೋ ಇದೆ ಅಂತಾ ತಿಳಿದುಕೊಂಡಿದ್ದಾರೆ.

Join Nadunudi News WhatsApp Group

ತೆರೆಮೇಲಿನ ಕೆಮಿಸ್ಟ್ರಿಗಿಂತ ತೆರೆ ಹಿಂದೆ ಏನೋ ಇದೆ ಅಂತ ಜನ ತಿಳಿದುಕೊಂಡಿದ್ದಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದು ಹೇಳಿದ್ದಾರೆ. ನಾನಿನ್ನು ಸಿಂಗಲ್ ಆಗಿದ್ದೀನಿ ಎಂದು ಹೇಳುವ ಮೂಲಕ ನಟಿ ಅಮೃತ ಅಯ್ಯಂಗಾರ್ ಡೇಟಿಂಗ್ ವಿಚಾರಗಳಿಗೆ ಬ್ರೇಕ್ ನೀಡಿದ್ದಾರೆ.

Join Nadunudi News WhatsApp Group