Increase In Daily Wage: ದಿನಗೂಲಿ ಕಾರ್ಮಿಕರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್, ಕರ್ನಾಟಕದಲ್ಲಿ ದಿನಗೂಲಿ ಇಷ್ಟು ಹೆಚ್ಚಳ.

ಕರ್ನಾಟಕದಲ್ಲಿ ದಿನಗೂಲಿ ಹೆಚ್ಚಳ ಮಾಡಿದ ಮೋದಿ ಸರ್ಕಾರ

Daily Wage Increase In Karnataka: ಸದ್ಯ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗಾಗಿ ಸಾಕಷ್ಟು ಕಲ್ಯಾಣ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಅನೇಕ ರೀತಿಯ ಸೌಲಭ್ಯವನ್ನು ಒದಗಿಸುತ್ತಿದೆ. ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದ ಕಾರಣ ಅನೇಕ ಸೌಲಭ್ಯವನ್ನು ಸರ್ಕಾರ ಜನರಿಗೆ ನೀಡಲು ಮುಂದಾಗಿದೆ.

ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಸದ್ಯ ಮೋದಿ ಸರ್ಕಾರ ಕರ್ನಾಟಕದ ಜನತೆಗೆ ಬಹುದೊಡ್ಡ ಅಪ್ಡೇಟ್ ಅನ್ನು ನೀಡಿದೆ. ಕರ್ನಾಟಕದಲ್ಲಿನ ದಿನಗೂಲಿ ಕಾರ್ಮಿಕರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಿದೆ.

Daily Wage Increase In Karnataka
Image Credit: Newsbytesapp

ದಿನಗೂಲಿ ಕಾರ್ಮಿಕರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್
ಕರ್ನಾಟಕದಲ್ಲಿ ದಿನಗೂಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದೇಶಾದ್ಯಂತ ನರೇಗಾ ಯೋಜನೆಯ ದಿನಗೂಲಿ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಕರ್ನಾಟಕದಲ್ಲಿ 33 ರೂ ದಿನಗೂಲಿ ಹೆಚ್ಚಿಸಲಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿ 349 ರೂ. ಗೆ ಏರಿಕೆಯಾಗಿದ್ದು, 2024-25 ನೇ ಸಾಲಿನಲ್ಲಿ ಕೇಂದ್ರ ಸರಕಾರ 33 ರೂ. ದೈನಂದಿನ ವೇತನವನ್ನು ಹೆಚ್ಚಿಸಲಾಗಿದೆ.

ಕರ್ನಾಟಕದಲ್ಲಿ ದಿನಗೂಲಿ ಹೆಚ್ಚಳ
ಹೊಸ ದೈನಂದಿನ ವೇತನವು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ಇದು ಕರ್ನಾಟಕದ ಲಕ್ಷಾಂತರ NREGA ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಕರ್ನಾಟಕದಲ್ಲಿ, ಕೇಂದ್ರ ಸರ್ಕಾರವು 2023-24 ರಲ್ಲಿ NREGA ದೈನಂದಿನ ಕೂಲಿಯನ್ನು ಕೇವಲ 7 ರೂ.ಗೆ ಹೆಚ್ಚಿಸಿತ್ತು.

ಇದರೊಂದಿಗೆ ಕರ್ನಾಟಕದಲ್ಲಿ ನರೇಗಾ ದಿನಗೂಲಿ 316 ರೂ. ಗಳಾಗಿದ್ದು, 2022-23ನೇ ಸಾಲಿನಲ್ಲಿ 309 ರೂ. ದಿನಗೂಲಿ ನಿಗದಿಯಾಗಿತ್ತು. ಕರ್ನಾಟಕದ ನರೇಗಾ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ 702 ಕೋಟಿ ರೂ. ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬೆನ್ನಲ್ಲೇ ಕೇಂದ್ರ ಸರ್ಕಾರ ದಿನಗೂಲಿಯನ್ನು ಪರಿಷ್ಕರಿಸಿತು.

Join Nadunudi News WhatsApp Group

Daily Wage Increase
Image Credit: Downtoearth

Join Nadunudi News WhatsApp Group