Damadan Poorva: ಈ ಗ್ರಾಮದ ಹುಡುಗಿಯನ್ನು ಮದುವೆಯಾದರೆ ಸಿಗುತ್ತೆ ಮನೆ, ಆಸ್ತಿ ಮತ್ತು ಜಮೀನು, ಮದುವೆಯಾಗಲು ಯುವಕರ ಕ್ಯೂ.

ಈ ಗ್ರಾಮದ ಹುಡುಗಿಯನ್ನು ಮದುವೆಯಾದರೆ ಮನೆ, ಆಸ್ತಿ ಮತ್ತು ಜಮೀನನ್ನ ನೀಡಲಾಗುತ್ತದೆ.

Damadan Poorva Village: ಸಾಮಾನ್ಯವಾಗಿ ಮದುವೆಯಾದ ಬಳಿಕ ಹೆಣ್ಣಿನ ಜೀವನ ಬದಲಾಗುತ್ತದೆ. ಹೆಣ್ಣು ಮದುವೆಯ ಮುನ್ನ ತನ್ನ ತವರು ಮನೆಯಲ್ಲಿದ್ದರೆ ಮದುವೆಯ ನಂತರ ಮಹಿಳೆಯು ತನ್ನ ಗಂಡನ ಮನೆಗೆ ಹೋಗುವುದು ನಿಯಮ. ತವರು ಮನೆ ತೊರೆದು ಗಂಡನ ಮನೆಗೆ ಹೋಗುವ ಸಂಪ್ರದಾಯ ಎಲ್ಲರು ಆಚರಿಸುತ್ತಾರೆ.

ಇನ್ನು ಕೆಲವು ಕಡೆ ಅಳಿಯ ಸಂತತಿ ಸಂಪ್ರದಾಯ ಇರುವ ಕಾರಣ ಮದುವೆಯ ಬಳಿಕ ಮಹಿಳೆಯು ತನ್ನ ತವರಿನಲ್ಲಿಯೇ ಇದ್ದು ಮಹಿಳೆಯ ಪತಿ ಹೆಂಡತಿಯ ಮನೆಯಲ್ಲಿಯೇ ವಾಸಿಸುತ್ತಾರೆ. ಆದರೆ ಇಲ್ಲೊಂದು ಗ್ರಾಮ ವಿಶೇಷ ಆಚರಣೆಯನ್ನು ನಡೆಸಿಕೊಂಡು ಬಂದಿದೆ. ಈ ಗ್ರಾಮದ ಹುಡುಗಿಯನ್ನು ಮದುವೆಯಾದರೆ ಮನೆ, ಆಸ್ತಿ ಮತ್ತು ಜಮೀನನ್ನ ನೀಡಲಾಗುತ್ತದೆ.

Damadan Purwa Village
Image Credit: Aajtak

ಈ ಗ್ರಾಮದ ಹುಡುಗಿಯನ್ನು ಮದುವೆಯಾದರೆ ಸಿಗುತ್ತೆ ಮನೆ, ಆಸ್ತಿ ಮತ್ತು ಜಮೀನು
ಉತ್ತರ ಪ್ರದೇಶದ ಅಕ್ಬರ್ ಪುರದ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ದಮದನ್ ಪೂರ್ವ ಎನ್ನುವ ಗ್ರಾಮವೊಂದಿದೆ. ಈ ಗ್ರಾಮದಲ್ಲಿ ಇರುವ ಹೆಣ್ಣು ಮಕ್ಕಳನ್ನು ಮದುವೆ ಆಗುವವರಿಗೆ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. ಉಡುಗೊರೆ ಎನ್ನುವುದಕ್ಕಿಂತ ಇದೊಂದು ವಿಭಿನ್ನ ರೀತಿಯ ವರೋಪಚಾರ ಎನ್ನಬಹುದು. ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಗ್ರಾಮ ಒಂದೊಳ್ಳೆ ಅವಕಾಶವನ್ನು ನೀಡಿದೆ.

ಅಳಿಯಂದಿರ ಗ್ರಾಮದಲ್ಲಿ ಭರ್ಜರಿಯಾಗಿದೆ ವರೋಪಚಾರ
ಡಮಾಡನ್ ಪೂರ್ವ ಗ್ರಾಮವನ್ನು ಮೊದಲು ಸರಿಯಾಪುರ ಎಂದು ಕರೆಯಲಾಗುತ್ತಿತ್ತು. ಸದ್ಯ 10 ವರ್ಷಗಳ ಹಿಂದೆ ದಮದನ್ ಪೂರ್ವ ಎಂದು ಹೆಸರಿಡಲಾಗಿದೆ. ಇನ್ನು 70 ರ ದಶಕದಲ್ಲಿ ಗ್ರಾಮದ ಕೆಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಮದುವೆ ಬಳಿಕ ಅವರ ಗಂಡಂದಿರ ಜೊತೆ ಪತ್ನಿ ಮನೆಯಲ್ಲಿಯೇ ವಾಸಿಸಲು ಅನುಮತಿ ನೀಡಿತ್ತು.

Damadan Purwa Village marriage
Image Credit: Timesnowhindi

ಗಂಡಂದಿರ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಈ ಗ್ರಾಮ ಈ ಅವಕಾಶವನ್ನು ನೀಡುತ್ತಿದೆ. ಅಂದಿನಿಂದ ಈ ಗ್ರಾಮದ ಮಹಿಳೆಯರನ್ನು ಯಾರೇ ಮದುವೆಯಾದರು ಕೂಡ ಅವರು ಪತ್ನಿ ಮನೆಯಲ್ಲಿಯೇ ಬಂದು ವಾಸಿಸುತ್ತಾರೆ. ಹೀಗಾಗಿ ಈ ಗ್ರಾಮ ಅಳಿಯಾಂದರ ಗ್ರಾಮ ಎಂದೇ ಖ್ಯಾತಿ ಪಡೆದಿದೆ. ಈ ಗ್ರಾಮದ ಮಹಿಳೆಯನ್ನು ಮದುವೆಯಾದರೆ, ಅಸ್ತಿ, ಜಾಮೀನು, ಮನೆ ಇತ್ಯಾದಿ ಸೌಲಭ್ಯವನ್ನು ನೀಡುತ್ತಾರೆ.

Join Nadunudi News WhatsApp Group

Join Nadunudi News WhatsApp Group