DAO EV: ಒಮ್ಮೆ ಚಾರ್ಜ್ ಮಾಡಿದರೆ 100 KM ರೇಂಜ್, ಓಲಾ ಸ್ಕೂಟರ್ ಗೆ ಪೈಪೋಟಿ ಕೊಡಲು ಬಂತು ಇನ್ನೊಂದು Ev.

ಇದೀಗ Ola ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ಮೀರಿಸುವಂತಹ ವೈಶಿಷ್ಟ್ಯತೆ ಹೊಂದಿರುವ DAO ಸ್ಕೂಟರ್ ಬಿಡುಗಡೆ.

DAO 703 Electric Scooter: ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದ್ದವು.ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಗಳು ಕೇವಲ ಮೂರು ನಾಲ್ಕು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಿ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಫಾಸ್ಟ್ ಚಾರ್ಜರ್ ನ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಇನ್ನು ಬೇಗನೆ ಚಾರ್ಜ್ ಮಾಡಬಹುದು. Petrol, Diesel ಖರ್ಚನ್ನು ಉಳಿಸಲು ಎಲೆಕ್ಟ್ರಿಕ್ ಮಾದರಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಪರಿಚಯವಾಗುತ್ತಿದೆ ಎನ್ನಬಹುದು. ಇದೀಗ Ola ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ಮೀರಿಸುವಂತಹ ವೈಶಿಷ್ಟ್ಯತೆ ಹೊಂದಿರುವ DAO ಸ್ಕೂಟರ್ ಬಿಡುಗಡೆ ಆಗಿದೆ. ಈ ನೂತನ DAO Electric Scooter ನಲ್ಲಿ ಅಳವಡಿಸಲಾದ ವಿಶೇಷ ವೈಶಿಷ್ಟ್ಯಗಳ ಬಗ್ಗೆ ವಿವರ ತಿಳಿಯೋಣ.

DAO 703 Electric Scooter
Image Credit: Drivespark

DAO 703 Electric Scooter
ಮಾರುಕಟ್ಟೆಯಲ್ಲಿ ಇದೀಗ ಜನಪ್ರಿಯ ಸ್ಟಾರ್ಟ್ ಅಪ್ ಕಂಪೆನಿಯಾಗಿರುವ DAO ನೂತನ ಮಾದರಿಯ Electric Scooter ಅನ್ನು ಪರಿಚಯಿಸಲು ಸಜ್ಜಾಗಿದೆ. ವಿಭಿನ್ನ ನೋಟದೊಂದಿಗೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಇನ್ನು ಮಾರುಕಟ್ಟೆಯಲ್ಲಿ DAO 730 Electric Scooter 99,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

DAO 703 ಬ್ಯಾಟರಿ ಸಾಮರ್ಥ್ಯ
ಇನ್ನು DAO 703 Electric Scooter ನಲ್ಲಿ 1.8 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ನೀವು BLDC ತಂತ್ರಜ್ಞಾನದ ಆಧಾರದ ಮೇಲೆ 3500 ವ್ಯಾಟ್ ವಿದ್ಯುತ್ ಮೋಟರ್ ಅನ್ನು ಪಡೆಯುತ್ತೀರಿ. ಈ ಮೋಟಾರ್ ಹೆಚ್ಚು ಶಕ್ತಿ ಮತ್ತು ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನ ಬ್ಯಾಟರಿಯನ್ನು ಕೇವಲ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

100 KM range on a single charge
Image Credit: Myelectrikbike

ಒಮ್ಮೆ ಚಾರ್ಜ್ ಮಾಡಿದರೆ 100 KM ರೇಂಜ್
ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಎಲೆಕ್ಟ್ರಿಕ್ ಸ್ಕೂಟರ್ 100 ಕಿಲೋಮೀಟರ್ ರೇಂಜ್ ನೀಡಲಿದೆ. ಇದು ಗಂಟೆಗೆ 70 ಕಿಲೋಮೀಟರ್ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಾಹನ ಸವರಾರರ್ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳನ್ನು ನೀಡಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮಾದರಿಯ ಹೈಡ್ರಾಲಿಕ್ ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಆಧಾರಿತ ಶಾಕ್ ಅಬ್ಸಾರ್ಬರ್ ಅನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group