High Court: ಇನ್ಮುಂದೆ ಯಾರು ಕೂಡ ಡಾರ್ಲಿಂಗ್ ಪದ ಬಳಸುವಂತಿಲ್ಲ, ಈ ಪದ ಬಳಸಿದರೆ ಜೈಲು ಶಿಕ್ಷೆ ಖಂಡಿತ.

ಇನ್ಮುಂದೆ ಯಾರನ್ನಾದರೂ ಡಾರ್ಲಿಂಗ್ ಎಂದು ಕರೆದರೆ ನಿಮ್ಮ ಮೇಲೆ ಕೇಸ್ ದಾಖಲಾಗಲಿದೆ

High Court Ban Darling Word Ban: ಸಾಮಾನ್ಯವಾಗಿ ಯುವಕರು ಯುವತಿಯರನ್ನು ಟೀಸ್ ಮಾಡುವುದು ಇದ್ದೆ ಇರುತ್ತದೆ. ಈ ವೇಳೆ ಯುವತಿಯರಿಗೆ ಮುಜುಗರ ಉಂಟಾಗುವುದು ಸಹಜ. ಯುವಕರು ಯುವತಿಯರನ್ನು ಟೀಸ್ ಮಾಡಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.

ಸದ್ಯ ಇದೀಗ ಇಂತಹದ್ದೊಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಯುವಕ ಬಳಸಿದ ಪದದ ಬಗ್ಗೆ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ. ಕಲ್ಕತ್ತ ಹೈಕೋರ್ಟ್ ಘೋಷಿಸಿರುವ ಆದೇಶದ ಪ್ರಕಾರ, ಇನ್ನುಮುಂದೆ ಈ ಪದದಿಂದ ಯಾರನ್ನು ಕರೆಯುವಂತಿಲ್ಲ. ಮತ್ತೆ ಈ ಪದವನ್ನ ಬಳಸಿ ಅದು ಕೋರ್ಟ್ ಮೆಟ್ಟಿಲಿಗೆ ಬಂದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೋರ್ಟ್ ಆದೇಶವನ್ನ ಹೊರಡಿಸಿದೆ 

High Court Ban Darling Word Ban
Image Source: India Today

ಇನ್ಮುಂದೆ ಯಾರು ಡಾರ್ಲಿಂಗ್ ಪದ ಬಳಸುವಂತಿಲ್ಲ

ಅಕ್ಟೋಬರ್ 21, 2015 ರಂದು ಅಂಡಮಾನ್‌ ನ ಮಾಯಾಬಂದರ್ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್‌ ಸ್ಟೆಬಲ್‌ ಗೆ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ‘ಕ್ಯಾ ಡಾರ್ಲಿಂಗ್ ಚಲನ್ ಕರ್ನೆ ಆಯಾ ಹೈ ಕ್ಯಾ’ ಎಂದು ಕಾಮೆಂಟ್ ಮಾಡಿದ ಘಟನೆ ನಡೆದಿತ್ತು. ಈ ಘಟನೆಯಿಂದ ಕೋಪಗೊಂಡ ಆಕೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೀಗ ಈ ಪ್ರಕರಣ ಕಲ್ಕತ್ತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.

High Court Ban Darling Word Ban
Image Source: Mint

ಈ ಪದ ಬಳಸಿದರೆ ಜೈಲು ಶಿಕ್ಷೆ ಖಂಡಿತ
ನ್ಯಾಯಮೂರ್ತಿ ಜೆ ಸೇನ್ ಗುಪ್ತಾ ಅವರ ಪೀಠವು ‘ಡಾರ್ಲಿಂಗ್’ ಪದವು ಲೈಂಗಿಕ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ‘ಹೇ ಡಾರ್ಲಿಂಗ್’ ಎಂದು ಕರೆಯುವ ಮುನ್ನ ಯೋಚಿಸಿ, ಏಕೆಂದರೆ ಇನ್ಮುಂದೆ ಹೀಗೆ ಕರೆದರೆ ನಿಮ್ಮ ಮೇಲೆ ಕೇಸು ಹಾಕಿದರೆ ತಿಂಗಳುಗಟ್ಟಲೆ ಜೈಲು ವಾಸ ಅನುಭವಿಸಬೇಕಾಗುತ್ತದೆ. ಡಾರ್ಲಿಂಗ್ ಪದವನ್ನು ಇನ್ನುಮುಂದೆ ಬಳಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.

Join Nadunudi News WhatsApp Group

Join Nadunudi News WhatsApp Group