ದರ್ಶನ್ ಖರೀದಿಸಿದ ಹೊಸ ರೇಂಜ್ ರೋವರ್ ಕಾರಿನ ಬೆಲೆ ಎಷ್ಟು ಗೊತ್ತಾ, ದುಬಾರಿ ಕಾರ್ ನೋಡಿ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರ. ಕನ್ನಡ ಚಿತ್ರರಂಗದಲ್ಲಿ ಅತೀ ಅಭಿಮಾನಿಗಳನ್ನ ಹೊಂದಿರುವ ನಟ ಅಂದರೆ ಅದೂ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೇಳಿದರೆ ತಪ್ಪಾಗಲ್ಲ. ಜೀವನದಲ್ಲಿ ಬಹಳ ಕಷ್ಟವನ್ನ ಅನುಭವಿಸಿದ ನಟ ದರ್ಶನ್ ಅವರು ಈಗ ಕನ್ನಡ ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳು ಅಂದರೆ ಬಹಳ ಇಷ್ಟ ಮತ್ತು ದರ್ಶನ್ ಅವರ ಮನೆಯಲ್ಲಿ ಹಲವು ಐಷಾರಾಮಿ ಕಾರುಗಳು ಇದೆ ಎಂದು ಹೇಳಬಹುದು.

ಮನೆಯಲ್ಲಿ ಬಹಳಷ್ಟು ಐಷಾರಾಮಿ ಕಾರುಗಳು ಇದ್ದರು ಕೂಡ ಕಾರುಗಳ ಹುಚ್ಚು ಹೋಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಇನ್ನೊಂದು ಹೊಸ ಐಷಾರಾಮಿ ಕಾರನ್ನ ಖರೀದಿ ಮಾಡಿದ್ದಾರೆ. ಹಾಗಾದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಖರೀದಿ ಮಾಡಿದ ಇನ್ನೊಂದು ಐಷಾರಾಮಿ ಕಾರ್ ಯಾವುದು ಮತ್ತು ಆ ಕಾರಿನ ಬೆಲೆ ಎಷ್ಟು ಅನ್ನುವುದನ್ನ ತಿಳಿಯೋಣ ಬನ್ನಿ. ಹೌದು ಮನೆಯಲ್ಲಿ ಹಲವು ಐಷಾರಾಮಿ ಕಾರುಗಳು ಇದ್ದರೂ ಕೂಡ ನಟ ದರ್ಶನ್ ಅವರಿಗೆ ಇನ್ನೂ ಕೂಡ ಕಾರುಗಳ ಹುಚ್ಚು ಹೋಗಿಲ್ಲ ಅನ್ನುವುದು ಮತ್ತೆ ಸಾಭೀತಾಗಿದೆ.

Darshan range rover cars

ಹೌದು ನಟ ದರ್ಶನ್ ಅವರು ಹೊಸ ಕಾರನ್ನ ಖರೀದಿ ಮಾಡಿದ್ದು ತಮ್ಮ ಮನೆಗೆ ಅದನ್ನ ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಹೌದು ಕಾರುಗಳ ಸರದಾರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಂಜ್ ರೋವರ್ ಡಿಫೆಂಡರ್ ಕಾರು ಖರೀದಿಸಿದ್ದಾರೆ. ಈ ಭೂಮಿಯ ಮೇಲೆ ಇರುವ ಅತೀ ದುಬಾರಿ ಕಾರುಗಳಲ್ಲಿ ರೇಂಜ್ ರೋವರ್ ಡಿಫೆಂಡರ್ ಒಂದಾಗಿದ್ದು ಈ ಕಾರನ್ನ ಖರೀದಿ ಮಾಡುವ ಬಯಕೆ ನಟ ದರ್ಶನ್ ಅವರಿಗೆ ಬಹಳ ಸಮಯಗಳಿಂದ ಈಗ ತನ್ನ ಆಸೆಯನ್ನ ನಟ ದರ್ಶನ್ ಅವರು ಈಡೇರಿಸಿಕೊಂಡಿದ್ದಾರೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ರೇಂಜ್ ರೋವರ್ ಡಿಫೆಂಡರ್ ಕಾರಿನ ಬೆಲೆ ಒಂದು ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ.

ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನಟ ದರ್ಶನ್ ಅವರ ಹೊಸ ಕಾರು ರೇಂಜ್ ರೋವರ್ ಡಿಫೆಂಡರ್ ನ ಬೆಲೆ 1.22 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಅವರ ಬಳಿ ಈಗಾಗಲೇ ಕೋಟಿಗೂ ಅಧಿಕ ಬೆಲೆಬಾಳುವ ಕಾರುಗಳ ಇದ್ದು ಆ ಕಾರುಗಳ ಪಟ್ಟಿಯಲ್ಲಿ ಈಗ ರೇಂಜ್ ರೋವರ್ ಡಿಫೆಂಡರ್ ಕಾರು ಕೂಡ ಸೇರಿಕೊಂಡಿದೆ. ಇನ್ನು ಈಗಾಗಲೇ ಲ್ಯಾಂಬೋರ್ಗಿನಿ, ಜಾಗ್ವಾರ್, ಫಾರ್ಚೂನರ್, ಹಮ್ಮರ್ ಸೇರಿ ಸಾಕಷ್ಟು ಕಾರುಗಳು ನಟ ದರ್ಶನ್ ಬಳಿ‌ ಇದೆ. ಸದ್ಯ ದರ್ಶನ್ ಅವರ ಹೊಸ ಕಾರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು. ಸ್ನೇಹಿತರೆ ದರ್ಶನ್ ಅವರ ಹೊಸ ಕಾರಿನ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Darshan range rover cars

Join Nadunudi News WhatsApp Group