Property Rights: ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ….? ಮಾವನ ಆಸ್ತಿಯಲ್ಲಿ ಸೊಸೆಗೆ ಹೇಗೆ ಪಾಲು ಸಿಗುತ್ತದೆ ಗೊತ್ತಾ…?

ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ....? ಮಾನವ ಆಸ್ತಿಯಲ್ಲಿ ಪಾಲು ಪಡೆಯುವುದು ಹೇಗೆ

Daughter-In-Law Property Rights On Father-In-Law’s Property: ತಂದೆಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಹಾಗೂ ತಾಯಿಯ ಸ್ವಯಾರ್ಜಿತ ಆಸ್ತಿ, ಪಿತ್ರಾಜಿತ ಆಸ್ತಿ ಎರಡಲ್ಲೂ ಕೂಡ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೊಂದಿರುತ್ತಾರೆ. ಭಾರತೀಯ  ನ್ಯಾಯಾಲಯ (Indian Law) ಈಗಾಗಲೇ ಕಾನೂನನ್ನು ಜಾರಿಗೊಳಿಸಿದೆ.

ಇನ್ನು ಹೆಣ್ಣು ಮಕ್ಕಳು ಮದುವೆಯ ನಂತರ ತಮ್ಮ ಆಸ್ತಿ ಹಕ್ಕು ಬದಲಾಗುತ್ತದೆಯೇ..? ಎನ್ನುವ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡಿರಬಹುದಿ. ಮದುವೆಯ ಬಳಿಕ ಹೆಣ್ಣಿನ ತನ್ನ ಗಂಡನ ಮನೆಯಲ್ಲಿ ಅಂದರೆ ತನ್ನ ಮಾವನ ಮನೆಯ ಆಸ್ತಿಯ ಮೇಲೆ ಎಷ್ಟು ಹಕ್ಕಿರುತ್ತದೆ ಎನ್ನುವ ಬಗ್ಗೆ ಭಾರತೀಯ ಕಾನೂನು ಏನು ಹೇಳುತ್ತದೆ ಎಂದು ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Daughter-In-Law Property Rights On Father-In-Law’s Property
Image Credit: Lawrato

ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ….?
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಪಾಲುದಾರಿಕೆ ನೀಡಲು ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. 2005 ರಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕನ್ನು ತರಲು ಕಾಯ್ದೆಯನ್ನು ತರಲಾಯಿತು. ಇನ್ನು ಸೊಸೆಯು ತನ್ನ ಗಂಡನ ಆಸ್ತಿಯಲ್ಲಿ ಒಂದು ಪಾಲು ಪಡೆಯುವ ಮೂಲಕ ಹಿಂದೂ ಅವಿಭಜಿತ ಕುಟುಂಬದ ಹಕ್ಕುಗಳನ್ನು ಪಡೆದುಕೊಳ್ಳುತ್ತಾಳೆ. ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಿದ್ದರು, ಸೊಸೆಯರ ಹಕ್ಕು ಮಾತ್ರ ಸೀಮಿತವಾಗಿದೆ.

ಮಾವನ ಆಸ್ತಿಯಲ್ಲಿ ಸೊಸೆಗೆ ಹೇಗೆ ಪಾಲು ಸಿಗುತ್ತದೆ ಗೊತ್ತಾ…?
ಇನ್ನು ಹೆಣ್ಣುಮಗು ಮದುವೆಯಾದ ಬಳಿಕ ತನ್ನ ಗಂಡನ ಮನೆಯನ್ನು ಸೇರುತ್ತಾಳೆ. ಗಂಡನ ಮನೆಯಲ್ಲಿ ಹೆಣ್ಣಿಗೆ ಮದುವೆಯಾದ ಬಳಿಕ ಸ್ವಲ್ಪ ಮಟ್ಟಿನ ಹಕ್ಕು ಇರುತ್ತದೆ. ಸೊಸೆಗೆ ಮಾವನ ಮನೆಯ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಸರಳವಾಗಿ ಹೇಳುವುದಾದರೆ, ಅತ್ತೆ ಮತ್ತು ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕಿರುವುದಿಲ್ಲ, ಅವಳ ಗಂಡನ ಆಸ್ತಿಯಲ್ಲಿ ಮಾತ್ರ ಹಕ್ಕಿರುತ್ತದೆ.

Property Law
Image Credit: Wikipedia

ಅತ್ತೆ ಮತ್ತು ಮಾವ ಸತ್ತ ನಂತರ ಆಸ್ತಿ ಗಂಡನಿಗೆ ಸೇರಿತ್ತದೆ. ಅತ್ತೆ ಮಾವನ ಆಸ್ತಿಯ ಮೇಲೆ ಸೊಸೆ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಮಾವನ ಮನೆಯಲ್ಲಿ ತನ್ನ ಗಂಡನ ಮರಣದ ನಂತರ ಸೊಸೆಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆ. ಇದಕ್ಕಾಗಿ ಅತ್ತೆ, ಮಾವ ಆಸ್ತಿಗೆ ಸಂಬಂಧಿಸಿದ ವೀಲ್ ಮಾಡಿ ಬೇರೆಯವರಿಗೆ ನೀಡದೆ ಇರುವುದು ಅಗತ್ಯ. ಮದುವೆಗೆ ಸಂಬಂಧಿಸಿದ ಧಾರ್ಮಿಕ ಮತ್ತು ಸಮಾರಂಭಗಳಲ್ಲಿ ಮಹಿಳೆ ಪಡೆಯುವ ಯಾವುದೇ ಉಡುಗೊರೆ ಮಹಿಳೆಯರಿಗೆ ಹಕ್ಕು ಮಾತ್ರವಾಗಿದೆ.

Join Nadunudi News WhatsApp Group

Join Nadunudi News WhatsApp Group