Daughter Rights: ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ, ಹೊಸ ತೀರ್ಪು ಪ್ರಕಟ.

ತಂದೆಯ ಜೀವಿತಾವಧಿಯಲ್ಲಿ ಹೆಣ್ಣು ಮಕ್ಕಳಿಗೆ ಅವರ ಯಾವುದೇ ಆಸ್ತಿಯ ಮೇಲೆ ಅಧಿಕಾರ ಇರುವುದಿಲ್ಲ.

Daughter Property Rights In India: ಆಸ್ತಿಯ ವಿಚಾರವಾಗಿ ಇತ್ತೀಚಿಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ಇರುವ ಆಸ್ತಿಯ ಹಕ್ಕಿನ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಹೆಣ್ಣು ಮಕ್ಕಳಿಗೆ ಗಂಡನ ಮನೆಯ ಆಸ್ತಿಗಿಂತ ಹೆಚ್ಚಾಗಿ ತವರು ಮನೆಯ ಆಸ್ತಿಯಲ್ಲಿ ಹೆಚ್ಚು ಹಕ್ಕಿರುತ್ತದೆ.

ಆಸ್ತಿಯ ವಿಚಾರದಲ್ಲಿ ಸಾಕಷ್ಟು ಕಾನೂನು ನಿಯಮಗಳಿವೆ. ಮನೆಯಲ್ಲಿ ಪಾಲಿನ ವಿಚಾರ ಬಂದಾಗ ಮನೆಯ ಸದಸ್ಯರ ನಡುವೆ ವಿವಾದಗಳಾಗುವುದು ಸಹಜ. ಹೆಣ್ಣು ಮಕ್ಕಳಿಗೆ ತವರು ಮನೆಯ ಪಾಲಿನಲ್ಲಿ ಸಹೋದರರಿಗೆ ತಕ್ಕಂತೆ ಸಮಾನವಾದ ಪಾಲಿದೆ ಎಂದು ಕಾನೂನು ಹೇಳುತ್ತದೆ.

Daughters have no right over any property of their father during his lifetime.
Image Credit: Businessleague

ತಂದೆಯ ಆಸ್ತಿಯಲ್ಲಿ ಹೆಣ್ಣು ಮಗಳು ಯಾವಾಗ ಪಾಲನ್ನು ಕೇಳಬಾರದು
ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಯಾವಾಗ ಪಾಲು ಕೇಳಲು ಹಕ್ಕು ಇರುವುದಿಲ್ಲ, ಈ ಬಗ್ಗೆ ಮಾಹಿತಿ ತಿಳಿಯೋಣ. ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ತಂದೆಯ ಜೀವಿತಾವಧಿಯ ಸಮಯದಲ್ಲಿ ಹಕ್ಕು ಕೇಳಲು ಆಗುವುದಿಲ್ಲ. ತಂದೆಯ ಮರಣದ ನಂತರ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಸಮನಾದ ಪಾಲನ್ನು ಪಡೆಯಬಹುದು.

ಇದಕ್ಕೆ ಕಾನೂನು ನಿಯಮ ಸಹ ಇದೆ. ಆದರೆ ತಂದೆಯ ಜೀವಿತಾವಧಿಯಲ್ಲಿ ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಹೆಣ್ಣು ಮಗಳು ಅಥವಾ ಗಂಡು ಮಗ ಪಾಲು ಕೇಳಲು ಆಗುವುದಿಲ್ಲ.

ಇದಕ್ಕೆ ಕಾನೂನು ಸಹ ಒಪ್ಪುವುದಿಲ್ಲ. ಹೆಣ್ಣು ಮಕ್ಕಳ ತಂದೆಯೇ ಸ್ವತಃ ಅವರ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಬರೆದುಕೊಟ್ಟಿದ್ದರೆ ಅದನ್ನು ಅವರು ಪಡೆಯಬಹುದು. ಆದರೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಒತ್ತಾಯಪೂರ್ವಕವಾಗಿ ಪಡೆಯಲು ಆಗುವುದಿಲ್ಲ.

Join Nadunudi News WhatsApp Group

Daughters have no right over any property of their father during his lifetime.
Image Credit: Makaan

ಒಂದು ವೇಳೆ ತಂದೆಯೇ ತಮ್ಮ ಸಂಪೂರ್ಣ ಆಸ್ತಿಯನ್ನು ಗಂಡು ಮಗನಿಗೆ ಬರೆದುಕೊಟ್ಟರೆ ಆ ಆಸ್ತಿಯಲ್ಲಿ ಹೆಣ್ಣು ಮಗಳು ಪಾಲನ್ನು ಕೇಳಲು ಆಗುವುದಿಲ್ಲ. ಏಕೆಂದರೆ ತಮ್ಮ ಸ್ವ ಇಚ್ಛೆಯಿಂದ ತಂದೆ ಗಂಡು ಮಗನ ಹೆಸರಿಗೆ ಬರೆದಿರುತ್ತಾರೆ.

Join Nadunudi News WhatsApp Group