Daughter’s Rights: ತಂದೆ ತನ್ನ ಎಲ್ಲಾ ಆಸ್ತಿಯನ್ನು ಗಂಡು ಮಕ್ಕಳಿಗೆ ಕೊಟ್ಟರೆ ಹೆಣ್ಣು ಮಗಳು ಅದನ್ನ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ತಂದೆ ತನ್ನ ಎಲ್ಲಾ ಆಸ್ತಿಯನ್ನು ಗಂಡು ಮಗನಿಗೆ ಮಾಡಿದರೆ ಹೆಣ್ಣುಮಗಳು ಆ ಆಸ್ತಿಯನ್ನು ಪಡೆಯಲು ಸಾಧ್ಯವೇ...?

Daughter’s Property Rights In Father’s Property: ದೇಶದಲ್ಲಿ ಆಸ್ತಿ ಹೆಚ್ಚಾಗಿ ವಿವಾದಕ್ಕೆ ಕಾರಣವಾಗುತ್ತದೆ. ಕುಟುಂಬದ ನಡುವೆ ಆಸ್ತಿ ವಿಚಾರವಾಗಿಯೇ ಹೆಚ್ಚಾಗಿ ಕಲಹಗಳು ಹುಟ್ಟಿಕೊಳ್ಳುತ್ತವೆ. ಇನ್ನು ಭಾರತೀಯ ಕಾನೂನಿನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆಸ್ತಿಯು ಹಕ್ಕನ್ನು ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಕಾನೂನಿನ ಸ್ಪಷ್ಟ ಉತ್ತರ ಇರುತ್ತದೆ.

Daughter’s Property Right
Image Credit: Business League

ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳ ಆಸ್ತಿಯ ಹಕ್ಕುಗಳೇನು..?
ಇನ್ನು ಹಿಂದೂ ಉತ್ತರಾಧಿಕಾರದ ಕಾಯ್ದೆಯ ಪ್ರಕಾರ, ಹೆಣ್ಣು ಮಕ್ಕಳು ಗಂಡಿನಷ್ಟೇ ಆಸ್ತಿಯ ಹಕ್ಕನ್ನು ಹೊಂದಿರುತ್ತಾರೆ. ಆಸ್ತಿಯು ಪಿತ್ರಾರ್ಜಿತ ಆಸ್ತಿಯಾದರು ಸಹ ಹೆಣ್ಣುಮಕ್ಕಳಿಗೆ ಸಮಾನ ಹಕ್ಕಿರುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಗಂಡಿನಷ್ಟೇ ಸಮಾನಳಾಗಿರುತ್ತಾರೆ.

ಇನ್ನು ಕೆಲವೊಮ್ಮೆ ತಂದೆಯು ತನ್ನ ಎಲ್ಲ ಆಸ್ತಿಗಳನ್ನು ತನ್ನ ಮಗನ ಹೆಸರಿಗೆ ಮಾಡಿರುವ ಸಾಕಷ್ಟು ಪ್ರಕರಣಗಳಿವೆ. ಮಗಳಿಗೆ ಆಸ್ತಿಯ ಹಕ್ಕಿದ್ದರು ಕೂಡ ತಂದೆ ಉಯಿಲಿನಲ್ಲಿ ತನ್ನ ಮಗನಿಗೆ ಸಂಪೂರ್ಣ ಆಸ್ತಿಯನ್ನು ಮಾಡಿದರೆ ಹೆಣ್ಣು ಆಸ್ತಿಯ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯವೇ…? ಎನ್ನುವ ಬಗ್ಗೆ ಇದೀಗ ನಾವು ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Daughter’s Property Rights In Father's Property
Image Credit: Informal News

ತಂದೆ ತನ್ನ ಎಲ್ಲಾ ಆಸ್ತಿಯನ್ನು ಗಂಡು ಮಕ್ಕಳಿಗೆ ಕೊಟ್ಟರೆ ಹೆಣ್ಣು ಮಗಳು ಅದನ್ನ ಪಡೆಯುವುದು ಹೇಗೆ…?
ಒಬ್ಬ ವ್ಯಕ್ತಿಯು ತನ್ನ ಉಳಿದ ಅಥವಾ ಭವಿಷ್ಯದ ಆಸ್ತಿಯನ್ನು ಯಾವುದೇ ಫಲಾನುಭವಿಗೆ ಉಯಿಲಿನ ಮೂಲಕ ನೀಡಬಹುದು ಮತ್ತು ಅದು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತದೆ. ಉಯಿಲಿನ ಮೂಲಕ, ಕಾನೂನುಬದ್ಧ ಉತ್ತರಾಧಿಕಾರಿ ಆಸ್ತಿಯಿಂದ ವಂಚಿತರಾಗಬಹುದು. ಆದರೆ ಉಯಿಲಿನ ಅನುಪಸ್ಥಿತಿಯಲ್ಲಿ ಅವರು ಉತ್ತರಾಧಿಕಾರದ ಮೂಲಕ ಆಸ್ತಿಯ ಭಾಗವಾಗುತ್ತಾರೆ.

ಉಯಿಲಿನ ಮೂಲಕ ಕಾನೂನುಬದ್ಧ ಉತ್ತರಾಧಿಕಾರಿ ಆಸ್ತಿಯನ್ನು ವಂಚಿತಗೊಳಿಸಿದರೆ, ಅಂತವರಿಗೆ ಆಸ್ತಿಯ ಹಕ್ಕು ಸಿಗುವುದಿಲ್ಲ. ಉಯಿಲಿನಲ್ಲಿ ಕಾರಣವನ್ನು ಸಹ ನೀಡಬೇಕು ಇದರಿಂದ ನ್ಯಾಯಾಲಯವು ಆಸ್ತಿಯಲ್ಲಿ ಹಂಚಿಕೆಯಿಂದ ಏಕೆ ಹೊರಗಿಡಲಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ತಂದೆ ತನ್ನ ಎಲ್ಲಾ ಆಸ್ತಿಯನ್ನು ಗಂಡು ಮಕ್ಕಳಿಗೆ ನೀಡಲು ಉಯಿಲಿನಲ್ಲಿ ಬರೆದಿಟ್ಟರೆ ಹೆಣ್ಣುಮಗಳು ಆ ಆಸ್ತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group