Property Law: ತಂದೆ ತಾಯಿ ಮರಣದ ನಂತರ ಹೆಣ್ಣು ಮಗಳಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ…? ಹೈಕೋರ್ಟ್ ಮಹತ್ವದ ತೀರ್ಪು

ತಂದೆ ತಾಯಿ ಆಸ್ತಿ ಹಂಚಿಕೆಯ ಬಗ್ಗೆ ಇನ್ನೊಂದು ಆದೇಶ ಹೊರಡಿಸಿದ ಹೈಕೋರ್ಟ್

Daughters Property Rights In Fathers Property: ತಂದೆ ತಾಯಿಯ ಆಸ್ತಿಯಲ್ಲಿ ಮಕ್ಕಳು ಹುಟ್ಟಿನಿಂದಲೇ ಹಕ್ಕನ್ನು ಪಡೆಯುತ್ತಾರೆ. ಇನ್ನು ಇನ್ನು ತಂದೆಯ ಆಸ್ತಿಯಲ್ಲಿ ಗಂಡು ಹೆಣ್ಣು ಸಮಾನ ಹಕ್ಕನ್ನು ಹೊಂದಿರುತ್ತಾರೆ ಎನ್ನುವುದನ್ನು ಕಾನೂನು ಹೇಳುತ್ತದೆ. ಹೀಗಾಗಿ ತಂದೆ ತಾಯಿಯ ಆಸ್ತಿಯಲ್ಲಿ ಹೆಣ್ಣುಮಗಳು ಆಸ್ತಿಯ ಅಧಿಕಾರವನ್ನು ಹೊಂದಿರುತ್ತಾರೆ.

Site Loan In India
Image Credit: Propertygeek

ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಎಷ್ಟಿದೆ

ಸಾಕಷ್ಟು ಬಾರಿ ಹೆಣ್ಣಿನ ಆಸ್ತಿಯ ಹಕ್ಕಿನ ಬಗ್ಗೆ ಪ್ರಶ್ನೆ ಹುಟ್ಟುತ್ತದೆ. ಅದರಲ್ಲೂ ಹೆಣ್ಣು ಮದುವೆಯಾಗಿ ಗಂಡನ ಮನೆ ಸೇರಿದಾಗ ಆಕೆಯ ಆಸ್ತಿಯ ಹಕ್ಕಿನ ಬಗ್ಗೆ ಪ್ರಶ್ನೆ ಉದ್ಭವಾಗುತ್ತದೆ. ಸದ್ಯ ತೆಲಂಗಾಣ ಹೈಕೋರ್ಟ್ ನಲ್ಲಿ ಹೆಣ್ಣಿನ ಆಸ್ತಿಯ ಹಕ್ಕಿನ ಬಗ್ಗೆ ಪ್ರಕರಣ ದಾಖಲಾಗಿದೆ. ತಂದೆಯ ಮರಣದ ನಂತರ ಸಹೋದರನೋರ್ವ ಹೆಣ್ಣುಮಗಳ ಆಸ್ತಿ ಹಕ್ಕಿನ ಬಗ್ಗೆ ಪ್ರಶ್ನಿಸಿದ್ದಾನೆ. ಸದ್ಯ ಹೈಕೋರ್ಟ್ ತಂದೆ ತಾಯಿ ಆಸ್ತಿಯಲ್ಲಿ ಮಗಳಿಗೆ ಸಿಗುವ ಪಾಲಿನ ಬಗ್ಗೆ ಮಹತ್ವದ  ಆದೇಶವನ್ನು ಹೊರಡಿಸಿದೆ.

ತಂದೆ ತಾಯಿ ಆಸ್ತಿಯಲ್ಲಿ ಮಗಳಿಗೆ ಸಿಗುವ ಪಾಲಿನ ಬಗ್ಗೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್
ತಂದೆಯ ಮರಣದ ನಂತರ ಹೆಣ್ಣುಮಗಳಿಗೆ ಆಸ್ತಿಯಲ್ಲಿ ಹೆಣ್ಣುಮಕ್ಕಳ ಹಕ್ಕನ್ನು ನ್ಯಾಯಾಲಯ ಉಲ್ಲೇಖಿಸಿದೆ. ತನ್ನ ತಂದೆಯ ಆಸ್ತಿಯಲ್ಲಿ ಸಹೋದರಿಯ ಹಕ್ಕನ್ನು ಪ್ರಶ್ನಿಸಿ ಸಹೋದರನೊಬ್ಬ ತೆಲಂಗಾಣ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ನ್ಯಾಯಮೂರ್ತಿ ಎಂಜಿ ಪ್ರಿಯದರ್ಶಿನಿ ಅರ್ಜಿಯ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದಾರೆ. ತನ್ನ ಸಹೋದರಿಯ ಪೋಷಕರ ಆಸ್ತಿಯನ್ನು ಹಂಚಿಕೆ ಮಾಡುವ ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ಜಿ.ಪ್ರಿಯದರ್ಶಿನಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

Join Nadunudi News WhatsApp Group

Property Law
Image Credit: Wikipedia

ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ಮಹಿಳೆಗೂ ತಂದೆಯ ಆಸ್ತಿಯ ಮೇಲೆ ಹಕ್ಕಿದೆ
ಸಹೋದರನು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಲ್ ಡೀಡ್ ನಲ್ಲಿ  ಸಹೋದರಿ ‘ಆರ್ಥಿಕ ಸ್ಥಿತಿ ಉತ್ತಮ’ವಾಗಿರುವ ಕಾರಣ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲು ಪಡೆಯಲು ಅರ್ಹಳಾಗಿಲ್ಲ ಎಂದು ನಮೂದಿಸಲಾಗಿದೆ.

”ಸಹೋದರಿ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂಬ ಕಾರಣಕ್ಕೆ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವ ಸಹೋದರಿಯ ತಂದೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ” ಎಂದು ಕೋರ್ಟ್ ಆದೇಶ ನೀಡಿದೆ. ಹೆಣ್ಣುಮಗಳು ಮದುವೆಯಾಗಿ ಗಂಡನ ಮನೆಗೆ ಸೇರಿದಾಗ, ಅವಳ ಗಂಡನ ಮನೆಯಲ್ಲಿ ಆಸ್ತಿ ಹೆಚ್ಚಿದರೆ ಮಹಿಳೆಯು ತನ್ನ ತಂದೆಯ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಮಹಿಳೆಗೆ ಆಸ್ತಿಯನ್ನು ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Join Nadunudi News WhatsApp Group