Warner Daughter: ಅಲ್ಲೂ ಅರ್ಜುನ್ ಗೆ ವಿಭಿನ್ನವಾಗಿ ಬರ್ತ್ಡೇ ವಿಶ್ ಮಾಡಿದ ವಾರ್ನರ್ ಮಗಳು, ವಿಡಿಯೋ ವೈರಲ್.

ನಟ ಅಲ್ಲೂ ಅರ್ಜುನ್ ಅವರ ಹುಟ್ಟು ಹಬ್ಬಕ್ಕೆ ತನ್ನದೇ ರೀತಿಯಲ್ಲಿ ವಿಶ್ ಮಾಡಿದ ಡೇವಿಡ್ ವಾರ್ನರ್ ಮಗಳು

David Warner Daughter wish Allu Arjun Birthday: ಏಪ್ರಿಲ್ 8 ರಂದು ಟಾಲಿವುಡ್ ನ್ ಸ್ಟಾರ್ ನಟ ಅಲ್ಲೂ ಅರ್ಜುನ್ (Allu Arjun) ತಮ್ಮ ಹುಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದರು. ಅಲ್ಲೂ ಅರ್ಜುನ್ ಅವರಿಗೆ ಆಪ್ತ ಬಳಗದಿಂದ ಹಿಡಿದು ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಕೂಡ ಹುಟ್ಟುಹಬ್ಬಕೆ ಶುಭಾಶಯ ತಿಳಿಸಿದ್ದಾರೆ.

ಇದೀಗ ಅಂತಾರಾಷ್ಟ್ರೀಯ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಅವರ ಮಗಳು ಇಸ್ಲಾ (Isla) ಅಲ್ಲುಗೆ ಸ್ಪೆಷಲ್ ವಿಶ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

David Warner Wishes Allu Arjun Happy Birthday With Daughter Saying I Can't Wait Now And I Can't Wait To See Pushpa 2
Image Credit: timesofindia.indiatimes

ಅಲ್ಲೂ ಅರ್ಜುನ್ ಪುಷ್ಪ 2 ಟ್ರೈಲರ್ ರಿಲೀಸ್
ನಟ ಅಲ್ಲೂ ಅರ್ಜುನ್ ಅವರು ಪುಷ್ಪ 2 (Pushpa 2) ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದರು. ನಿನ್ನೆ ಅಲ್ಲೂ ಅರ್ಜುನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಅಲ್ಲೂ ಹುಟ್ಟುಹಬ್ಬದ ಸಲುವಾಗಿ ಪುಷ್ಪ 2 ಚಿತ್ರದ ಬಿಗ್ ಅಪ್ಡೇಟ್ ರಿಲೀಸ್ ಆಗಿದೆ.

ಪುಷ್ಪ 2 ಚಿತ್ರದ ಟೀಸರ್ ಹಾಗು ಅಲ್ಲೂ ಅರ್ಜುನ್ ಅವರ ಡಿಫೆರೆಂಟ್ ಲುಕ್ ಮೊನ್ನೆ ಬಿಡುಗಡೆಗೊಂಡಿದೆ. ಅಲ್ಲೂ ಅರ್ಜುನ್ ಅಭಿಮಾನಿಗಳು ಪುಷ್ಪ 2 ಟೀಸರ್ ನೋಡಿ ಸಿನಿಮಾ ನೋಡಲು ಉತ್ಸಹಕರಾಗಿದ್ದಾರೆ.

 

View this post on Instagram

 

A post shared by David Warner (@davidwarner31)

Join Nadunudi News WhatsApp Group

ಅಲ್ಲೂಗೆ ವಿಭಿನ್ನವಾಗಿ ವಿಶ್ ಮಾಡಿದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿ
ಅಲ್ಲೂ ಅರ್ಜುನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿತ್ತು. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅಲ್ಲುಗೆ ವಿಶ್ ಮಾಡಿದ್ದಾರೆ. ವಾರ್ನರ್ ಅವರ ಪುತ್ರಿ ಕೂಡ ತನ್ನದೇ ಸ್ಟೈಲ್ ನಲ್ಲಿ ಅಲ್ಲೂ ಅರ್ಜುನ್ ಗೆ ವಿಶ್ ಮಾಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಆಗಿದ್ದರು ಕೂಡ ವಾರ್ನರ್ ಅವರು ಕನ್ನಡ, ತೆಲುಗು, ಹಿಂದಿ ಹಾಡುಗಳಿಗೆ ರಿಲ್ಸ್ ಮಾಡಿದ್ದಾರೆ.

David Warner's daughter wished actor Allu Arjun on his birthday in her own way
Image Credit: thesportsrush

ಈ ಹಿಂದೆ ಪುಷ್ಪ ಚಿತ್ರದ ಹಾಡಿಗೆ ರಿಲ್ಸ್ ಮಾಡಿದ್ದ ಕಾರಣ ಅಲ್ಲೂ ವಾರ್ನರ್ ಗೆ ಧನ್ಯವಾದ ತಿಳಿಸಿದ್ದರು. ಇದೀಗ ಅಲ್ಲುಗೆ ವಾರ್ನರ್ “ನನಗೆ ಇನ್ನು ವೈಟ್ ಮಾಡಲು ಆಗುವುದಿಲ್ಲ, ಪುಷ್ಪ 2 ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ” ಎಂದು ಹೇಳಿದ್ದಾರೆ.

ಹಾಗೆ ಇವರ ಮಗಳು ಇಸ್ಲಾ ಕೂಡ ‘ಹ್ಯಾಪಿ ಬರ್ತ್ಡೇ ಪುಷ್ಪ’ ಎಂದು ತನ್ನದೇ ಸ್ಟೈಲ್ ನಲ್ಲಿ ವಿಶ್ ಮಾಡಿದ್ದಾಳೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group