David Warner: ದಯವಿಟ್ಟು ನನಗೆ ವಾಪಸ್ ಕೊಟ್ಟುಬಿಡಿ, ನಿವೃತ್ತಿಯ ಬೆನ್ನಲ್ಲೇ ಭಾವುಕರಾಗಿ ಮನವಿ ಮಾಡಿಕೊಂಡ ವಾರ್ನರ್

ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡು ಚಿಂತೆಗೆ ಒಳಗಾದ ವಾರ್ನರ್, ದಯವಿಟ್ಟು ನನ್ನ ಗ್ರೀನ್ ಕ್ಯಾಪ್ ಹಿಂತಿರುಗಿಸಿ ಎಂದು ಅಂಗಲಾಚಿದ್ದಾರೆ

David Warner Cap: ಡೇವಿಡ್ ವಾರ್ನರ್ (David Warner) ಬಗ್ಗೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರುತ್ತದೆ. ಈ ಆಟಗಾರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ಆಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಹಲವು ಸಾಧನೆ ಮಾಡಿದವರಾಗಿದ್ದಾರೆ. ಸಧ್ಯಕ್ಕೆ ಇವರೀಗ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ ಅದೇನೆಂದರೆ ಇವರ ‘ಬ್ಯಾಗಿ ಗ್ರೀನ್ ಕ್ಯಾಪ್’ ಕಳವಾಗಿದೆ.

ಈ ಬಗ್ಗೆ ಖುದ್ದು ವಾರ್ನರ್ ಅವರೇ ಮಾಹಿತಿ ನೀಡಿದ್ದು, ದಯವಿಟ್ಟು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಮುಗಿದ ನಂತರ ಡೇವಿಡ್ ವಾರ್ನರ್ ಮೆಲ್ಬೋರ್ನ್‌ನಿಂದ ಸಿಡ್ನಿಗೆ ಬಂದಿದ್ದರು. ಇದಾಗ್ಯೂ ಅವರ ಒಂದು ಬ್ಯಾಕ್​ಪ್ಯಾಕ್ ಲಗೇಜ್ ಸಿಡ್ನಿಗೆ ತಲುಪಿರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕ ವಾರ್ನರ್ ಗ್ರೀನ್ ಕ್ಯಾಪ್ ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ .

David Warner Cap
Image Source; India Today

ಬ್ಯಾಗಿ ಗ್ರೀನ್ ಕ್ಯಾಪ್ ಬಗ್ಗೆ ವಿವರ

ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯನ್ನರು ಧರಿಸುವ ಕ್ಯಾಪ್ ಅನ್ನು ಬ್ಯಾಗಿ ಗ್ರೀನ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಕಳೆದ ಒಂದು ದಶಕದಿಂದಲೂ ಕಾಪಾಡಿಕೊಂಡು ಬಂದಿದ್ದ ವಾರ್ನರ್ ಈ ಕ್ಯಾಪ್ ನಿವೃತ್ತಿಗೂ ಮುನ್ನ ಕಳೆದು ಹೋಗಿರುವುದು ಡೇವಿಡ್ ವಾರ್ನರ್ ಅವರನ್ನು ಚಿಂತೆಗೀಡು ಮಾಡಿದೆ. ಈ ಕ್ಯಾಪ್ ಇದೀಗ ವಾರ್ನರ್ ಪಾಲಿಗೆ ಅತ್ಯಮೂಲ್ಯ. ಏಕೆಂದರೆ ಪಾದಾರ್ಪಣೆ ಸಮಯದಲ್ಲಿ ಪಡೆದ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಬದಲಿಸುವ ಸಂಪ್ರದಾಯ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿಲ್ಲ ಹೀಗಾಗಿಯೇ ನನ್ನ ಲಗೇಜ್ ಬ್ಯಾಗ್ ಅನ್ನು ನೀವಿಟ್ಟುಕೊಳ್ಳಿ, ದಯವಿಟ್ಟು ಗ್ರೀನ್ ಕ್ಯಾಪ್ ಹಿಂತಿರುಗಿಸಿ ಎಂದು ಡೇವಿಡ್ ವಾರ್ನರ್ ಮನವಿ ಮಾಡಿದ್ದಾರೆ.

ನಿವೃತ್ತಿ ಸಮಯದಲ್ಲಿ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡಿರುವ ವಾರ್ನರ್

Join Nadunudi News WhatsApp Group

ಜನವರಿ 3 ರಿಂದ ಸಿಡ್ನಿಯಲ್ಲಿ ಶುರುವಾಗಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಆದರೆ ಕಡೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕಳೆದ 12 ವರ್ಷ ಅವರು ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದು ಹೋಗಿದೆ.

ಇದೀಗ ನಿವೃತ್ತಿಗೂ ಮುನ್ನ ತನ್ನ ಕ್ಯಾಪ್ ಅನ್ನು ಹಿಂತಿರುಗಿಸುವಂತೆ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಅಂಗಲಾಚಿದ್ದಾರೆ. ಏಕೆಂದರೆ ಪಾದಾರ್ಪಣೆ ಪಂದ್ಯದಲ್ಲಿ ಧರಿಸಿದ್ದ ಕ್ಯಾಪ್​ನೊಂದಿಗೆ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ ಡೇವಿಡ್ ವಾರ್ನರ್. ಆದರೆ ಕೊನೆಯ ಪಂದ್ಯಕ್ಕೂ ಮುನ್ನ ಅವರು ಕ್ಯಾಪ್ ಕಳುವಾಗಿರುವುದು ಅವರನ್ನು ಚಿಂತೆಗೀಡು ಮಾಡಿದೆ.

David Warner Cap
Image Source: India Today

ಮನವಿ ಮಾಡಿಕೊಂಡ ಡೇವಿಡ್ ವಾರ್ನರ್

ನನ್ನ ಬ್ಯಾಗ್‌ ಗಳನ್ನು ತೆರೆದು ಬ್ಯಾಕ್‌ ಪ್ಯಾಕ್ ತೆಗೆದುಕೊಂಡು ಹೋಗುವುದನ್ನು ಯಾರೂ ನೋಡಿಲ್ಲ. ನೀವು ವಿಮಾನ ನಿಲ್ದಾಣದಲ್ಲಿ ಅಥವಾ ಹೊರಗೆ ಕೆಲಸ ಮಾಡುತ್ತಿದ್ದರೆ, ಅಚಾತುರ್ಯದಿಂದ ನನ್ನ ಬ್ಯಾಕ್ ​ಪ್ಯಾಕ್ ಅನ್ನು ತೆಗೆದುಕೊಂಡಿದ್ದರೆ ಅದನ್ನು ನನಗೆ ಹಿಂತಿರುಗಿಸಿ. ನಾನು ನಿಮಗೆ ಬೇರೊಂದು ಬ್ಯಾಕ್​ ಪ್ಯಾಕ್ ನೀಡುತ್ತೇನೆ ಎಂದು ವಾರ್ನರ್ ತಿಳಿಸಿದ್ದಾರೆ. ಸದ್ಯ ಕಳುವಾಗಿರುವ ಬ್ಯಾಕ್​ಪ್ಯಾಕ್​ನಲ್ಲಿ ಡೇವಿಡ್ ವಾರ್ನರ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಇದ್ದು, ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಅದನ್ನು ಹಿಂತಿರುಗಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಸಲ್ಲಿಸಿದ್ದಾರೆ.

Join Nadunudi News WhatsApp Group