10 Rs Coin: 10 ರೂ ನಾಣ್ಯಗಳ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ ಮಾಡಿದ RBI, ಗೊಂದಲಕ್ಕೆ ಪರಿಹಾರ.
ಇದೀಗ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು 10 ರೂ. ನಾಣ್ಯ ಚಲಾವಣೆ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದಾರೆ.
DC Dr K V Rajendra Clarified About 10 Rs Coin: ಈ ಹಿಂದೆ ಕೇಂದ್ರದ ಸರ್ಕಾರ (Central Government) 2016 ರಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನೂ ಬ್ಯಾನ್ ಮಾಡಿತ್ತು. ನಂತರ ಹೊಸ 500 ಮತ್ತು 2000 ನೋಟುಗಳನ್ನು ಚಲಾವಣೆಗೆ ತಂದಿತ್ತು. ತದ ನಂತರ 2000 ರೂ ನೋಟು ಚಲಾವಣೆಗೆ ಬಂದ ಬಳಿಕ ಮತ್ತಷ್ಟು ಕಪ್ಪು ಹಣದ ಸಂಗ್ರಹಣೆ ಹೆಚ್ಚಾಯಿತು.
ಹಾಗಾಗಿ ಮತ್ತೆ ಮೋದಿ ಸರಕಾರ 2000 ಮುಖಬೆಲೆಯ ನೋಟ್ ಗಳನ್ನೂ ಬ್ಯಾನ್ ಮಾಡಿತು. ಇದೀಗ ಸೆಪ್ಟೆಂಬರ್ 30 ರದ್ದಾಗಿರುವ 2,000 ರೂ ಮುಖಬೆಲೆಯ ನೋಟಿನ ಬದಲಾವಣೆ ಅಥವಾ ವಿನಿಮಯಕ್ಕೆ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 30 ರ ನಂತರ ನಿಮ್ಮ ಬಳಿ ಇರುವ 2000 ರೂ ನೋಟಿಗೆ ಯಾವುದೇ ಮೌಲ್ಯ ಇರುವುದಿಲ್ಲ. ಇದೀಗ ಮತ್ತೆ ನಾಣ್ಯಗಳ ವಿಷಯವಾಗಿ ಮಾರುಕಟ್ಟೆಯಲ್ಲಿ ಗೊಂದಲ ಸ್ರಷ್ಟಿಯಾಗಿದೆ.
10 ರೂ. ನಾಣ್ಯ ಚಲಾವಣೆ
ಇದೀಗ 10 ರೂ. ನಾಣ್ಯದ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ. ಸದ್ಯ 10 ರೂ. ನಾಣ್ಯಗಳ ಚಲಾವಣೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. 10 ರೂ. ನಾಣ್ಯಗಳು ರದ್ದಾಗಿವೆ ಎನ್ನುವ ಬಗ್ಗೆ ಸುದ್ದಿ ಸಾಕಷ್ಟು ಹರಡಿದೆ. ಈ ಕಾರಣದಿಂದಾಗಿ ಅಂಗಡಿಯ ಮಾಲೀಕರು ನಾಣ್ಯಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕೆಲವು ಚಿಲ್ಲರೆ ಅಂಗಡಿಗಳಲ್ಲಿ ನಾಣ್ಯಗಳ ಸಂಗ್ರಹಣೆ ಹೆಚ್ಚಾಗಿರುತ್ತದೆ. ನಾಣ್ಯಗಳ ವಿನಿಮಯವನ್ನು ನಿರಾಕರಿಸಿರುವುದು ಜನರಿಗೆ ಕಷ್ಟವನ್ನು ತಂದಿದೆ. ಬ್ಯಾಂಕ್ ಗಳು ಕೂಡ ನಾಣ್ಯಗಳ ವಿನಿಮಯವನ್ನು ನಿರಾಕರಿಸುತ್ತಿರುವುದು ಕಂಡು ಬಂದಿದೆ. ಇದೀಗ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು 10 ರೂ. ನಾಣ್ಯ ಚಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
10 ರೂ. ನಾಣ್ಯ ಚಲಾವಣೆ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ
ವಹಿವಾಟು ಮತ್ತು ಪಾವತಿಗಾಗಿ 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ವ್ಯಾಪಾರಿಗಳು ಮತ್ತು ಜನಸಾಮಾನ್ಯರು ಹಿಂದೇಟು ಹಾಕುತ್ತಿರುವುದು ಈಗಾಗಲೇ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಈಗಾಗಲೇ ಸ್ಪಷ್ಟನೆ ನೀಡಿದೆ.
ಕೇಂದ್ರ ಸರಕಾರ ಕೂಡ 10 ರೂ ನಾಣ್ಯವನ್ನು ಹಿಂಪಡೆದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವದಂತಿ ನಂಬದೆ 10 ರೂ. ನಾಣ್ಯವನ್ನು ಸ್ವೀಕರಿಸಬಹುದಾಗಿದೆ. ಒಂದು ವೇಳೆ ಈ ನಾಣ್ಯವನ್ನು ಸ್ವೀಕರಿಸದಿದ್ದರೆ ನಾಣ್ಯ ಕಾಯ್ದೆಯ ಉಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.