PNB Rule: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾತೆ ಇದ್ದವರು ಡಿ 18 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಖಾತೆ ಕ್ಲೋಸ್.

ನಿಮ್ಮ ಖಾತೆಯನ್ನು ಉಳಿಸಿಕೊಳ್ಳಲು ಬ್ಯಾಂಕ್ ನಿಗದಿಪಡಿಸಿದ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸಿ

Deadline For PNB Bank Holders: ಸದ್ಯ RBI ಬ್ಯಾಂಕ್ ಗಳಿಗೆ ನಿಯಮ ಬಿಗಿಗೊಳಿಸುತ್ತಿದ್ದಂತೆ ಬ್ಯಾಂಕ್ ಗಳು ಗ್ರಾಹಕರ ಮೇಲೆ ಹೊಸ ಹೊಸ ನಿಯಮವನ್ನು ಹೇರುತ್ತಿದೆ. ಸದ್ಯ ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ Punjab National Bank ತನ್ನ ಗ್ರಾಹಕರಿಗೆ ಹೊಸ ನಿಯಮವನ್ನು ಪರಿಚಯಿಸಿದೆ.

PNB ಗ್ರಾಹಕರು ಈ ನಿಯಮವನ್ನು ಪಾಲಿಸುವುದು ಅವಶ್ಯಕವಾಗಿದೆ. ಗ್ರಾಹಕರು ಬ್ಯಾಂಕ್ ನ ನಿಯಮವನ್ನು ಪಾಲಿಸದಿದ್ದರೆ ತಮ್ಮ ಖಾತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ತಿಳಿದಿರಲಿ. ಹೀಗಾಗಿ ನಿಮ್ಮ ಖಾತೆಯನ್ನು ಉಳಿಸಿಕೊಳ್ಳಲು ಬ್ಯಾಂಕ್ ನಿಗದಿಪಡಿಸಿದ ದಿನಾಂಕದೊಳಗೆ ಕೆಲಸವನ್ನು ಪೂರ್ಣಗೊಳಿಸಿ.

Deadline For PNB Bank Holders
Image Credit: Dailypioneer

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಡೆಡ್ ಲೈನ್
Punjab National Bank ತನ್ನ ಗ್ರಾಹಕರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. PNB ಬ್ಯಾಂಕ್ ಆದೇಶದ ಪ್ರಕಾರ ಗ್ರಾಹಕರು ನಿಗದಿತ ಸಮಯದೊಳಗೆ ಈ ಕೆಲಸವನ್ನು ಮುಗಿಸಿಕೊಳ್ಳಬೇಕಿದೆ. ಒಂದುವೇಳೆ ಬ್ಯಾಂಕ್ ಗ್ರಾಹಕರು ಈ ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಫಲರಾದರೆ ಗ್ರಾಹಕರ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದು PNB ಗ್ರಾಹಕರಿಗೆ ಆದೇಶಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾತೆ ಇದ್ದವರು ಡಿ 18 ರೊಳಗೆ ಈ ಕೆಲಸ ಮಾಡಿ
PNB ಗ್ರಾಹಕರು KYC ನವೀಕರಿಸಲು ಬ್ಯಾಂಕ್ ಆದೇಶಿಸಿದೆ. ನಿಮ್ಮ ಬ್ಯಾಂಕ್ ಖಾತೆಯ KYC ಅಪ್‌ ಡೇಟ್ ಸೆಪ್ಟೆಂಬರ್ 30, 2023 ರಿಂದ ಬಾಕಿ ಇದ್ದರೆ ನೀವು ಡಿಸೆಂಬರ್ 18, 2023 ರವರೆಗೆ ಬ್ಯಾಂಕ್‌ ನ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ KYC ಅನ್ನು ಸುಲಭವಾಗಿ ನವೀಕರಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.

PNB Rules
Image Credit: Thestatesman

ಇದರ ಹೊರತಾಗಿ PNB One ಅಪ್ಲಿಕೇಶನ್, IBS, ಇಮೇಲ್ ಮತ್ತು ಪೋಸ್ಟ್ ಮೂಲಕ KYC ಅನ್ನು ನವೀಕರಿಸಲಾಗುತ್ತಿದೆ. ಎಲ್ಲಾ ಗ್ರಾಹಕರು KYC ಅನ್ನು ನವೀಕರಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಬ್ಯಾಂಕ್ ಅಧಿಕೃತ ಘೋಷಣೆ ಹೊರಡಿಸಿದೆ. KYC ಅನ್ನು ನವೀಕರಿಸದಿದ್ದರೆ ಖಾತೆಯಲ್ಲಿನ ವಹಿವಾಟುಗಳ ಮೇಲೆ ಪರಿಣಾಮ ಬೀರಬಹುದು ಎಂದು RBI ಖಾತೆದಾರರಿಗೆ ಎಚ್ಚರಿಸಿದೆ.

Join Nadunudi News WhatsApp Group

KYC ನವೀಕರಣಕ್ಕೆ ಈ ದಾಖಲೆ ಕಡ್ಡಾಯ
•ಪಾಸ್ಪೋರ್ಟ್
•PAN ಕಾರ್ಡ್
•ಮತದಾರರ ಗುರುತಿನ ಚೀಟಿ
•ಚಾಲನಾ ಪರವಾನಿಗೆ
•NREGA ಜಾಬ್ ಕಾರ್ಡ್
•ಆಧಾರ್ ಕಾರ್ಡ್

Join Nadunudi News WhatsApp Group