Pan Card: ಪಾನ್ ಕಾರ್ಡ್ ಕುರಿತಂತೆ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಈಗಲೇ ಈ ಕೆಲಸ ಮಾಡಿ.

ಸತ್ತ ವ್ಯಕ್ತಿಗಳ ಪಾನ್ ಕಾರ್ಡ್ ಕುರಿತಂತೆ ಕೇಂದ್ರ ಸರ್ಕಾರ ಇನ್ನೊಂದು ಘೋಷಣೆಯನ್ನ ಮಾಡಿದೆ.

Pan Card Surrender: ದೇಶದಲ್ಲಿ Pan Card ಎಷ್ಟು ಮುಖ್ಯ ದಾಖಲೆಯಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. Pan Card ವ್ಯಕ್ತಿಯ ಎಲ್ಲ ಕೆಲಸಗಳಿಗೂ ಅಗತ್ಯ ದಾಖಲೆಯಾಗಿದೆ. ಇನ್ನು ಕೇಂದ್ರ ಸರ್ಕಾರ (Central Government) ಈಗಾಗಲೇ Aadhar Pan Link ಮಾಡಲು ಸೂಚನೆ ನೀಡಿದೆ.

ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದ್ದು, ಸರ್ಕಾರ ಮತ್ತೆ ಸ್ವಲ್ಪ ಸಮಯಾವಕಾಶವನ್ನು ನೀಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.

Pan Card Surrender
Image Source: Sucrabbl

Pan Card ಹೊಂದಿರುವವರಿಗೆ ಮಹತ್ವದ ಮಾಹಿತಿ
ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು Pan Card ನಲ್ಲಿ ವ್ಯಕ್ತಿಯ ಆದಾಯ ಮೂಲದ ವಿವರ ಇರುತ್ತದೆ.

ಹೀಗಾಗಿ Pan Card ಹೊಂದಿರುವವರು ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ Crime ಗಳು ಹೆಚ್ಚುತ್ತಿವೆ. ಸಣ್ಣ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿ ದೊಡ್ಡ ಪ್ರಮಾಣದಲ್ಲಿ ವಂಚಿಸಲು ವಂಚಕರು ಕಾಯುತ್ತಾರೆ. ಇದೀಗ ಕೇಂದ್ರ ಸರ್ಕಾರ Pan Card ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.

ಪಾನ್ ಕಾರ್ಡ್ ಕುರಿತಂತೆ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ
ವ್ಯಕ್ತಿ ಸತ್ತ ನಂತರ ಅವರ ಪಾನ್ ಕಾರ್ಡ್ ಅನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಪಾನ್ ಕಾರ್ಡ್ ದುರುಪಯೋಗ ಆಗಬಾರದು ಅಂದರೆ ವ್ಯಕ್ತಿ ಸತ್ತ ನಂತರ ಆತನ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವುದು ಬಹಳ ಉತ್ತಮವಾಗಿದೆ ಮತ್ತು Pan Card ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ಮುನ್ನ ಆತನ ಎಲ್ಲಾ ಬ್ಯಾಂಕ್ ಖಾತೆಗಳನ್ನ ಕ್ಲೋಸ್ ಮಾಡುವುದು ಬಹಳ ಉತ್ತಮವಾಗಿದೆ. ವ್ಯಕ್ತಿ ಸತ್ತ ನಂತರ ಆತನ ಕೆಲವು ಅಗತ್ಯ ದಾಖಲೆಗಳನ್ನ ಸರೆಂಡರ್ ಮಾಡುವುದು ಸೂಕ್ತ.

Join Nadunudi News WhatsApp Group

Pan Card Surrender
Image Source: India Today

Pan Card Surrender ಮಾಡುವ ವಿಧಾನ
*ಯಾವುದೇ ವ್ಯಕ್ತಿಯ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡಲು ಯೋಚಿಸುತ್ತಿದ್ದರೆ, ಮೊದಲು ನೀವು ಮೌಲ್ಯಮಾಪನ ಅಧಿಕಾರಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ.

*ನಂತರ, ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಲು ಕಾರಣವನ್ನು ಸಹ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.

*ಇದಾದ ಬಳಿಕ ಸತ್ತವರ ಹೆಸರು, ಜನ್ಮ ದಿನಾಂಕ, ಮರಣ ಪ್ರಮಾಣಪತ್ರ, ಪ್ಯಾನ್ ಸಂಖ್ಯೆ ಮುಂತಾದ ಎಲ್ಲಾ ಮಾಹಿತಿಯನ್ನು ಸಹ ಇಲ್ಲಿ ನಮೂದಿಸಬೇಕು.

Septembar 30 Aadhar Pan Link ಗೆ ಅವಕಾಶ
ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಅದನ್ನು ನೀವು ನಿರ್ಲಕ್ಷಿಸಿದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಇದೀಗ ಮತ್ತೆ Aadhar Pan Link ಗೆ ಅವಕಾಶ ನೀಡಿದೆ. ಅಧಿಕೃತ ವೆಬ್ ಸೈಟ್ http://www.utiitsl.com/ ಅಥವಾ http://www.egov-nsdl.co.in/ ಭೇಟಿ ನೀಡಿ ಸೆಪ್ಟೆಂಬರ್ ಅಂತ್ಯದೊಳಗೆ ಲಿಂಕ್ ಮಾಡಿಕೊಳ್ಳಬಹುದು.

Join Nadunudi News WhatsApp Group