Debit Card Insurance: ATM ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಎಲ್ಲರಿಗೂ ಸಿಗಲಿದೆ ಉಚಿತವಾಗಿ 3 ಕೋಟಿ ರೂ.

ATM ಕಾರ್ಡ್ ಇದ್ದವರಿಗೆ ಸಿಗಲಿದೆ ಉಚಿತವಾಗಿ 3 ಕೋಟಿ ರೂಪಾಯಿ

Debit Card Insurance Up To 3 Crores: ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ವಿವಿಧ ರೀತಿಯ್ ಸೌಲಭ್ಯವನ್ನು ಒದಗಿಸುತ್ತಿದೆ. ಅದರಲ್ಲಿ Debit Card ಸೌಲಭ್ಯ ಕೂಡ ಒಂದಾಗಿದೆ. ಗ್ರಾಹಕರು ಬ್ಯಾಂಕ್ ಗೆ ಹೋಗದೆ ತಮಗೆ ಬೇಕಾದ ಹಣವನ್ನು ATM ನಲ್ಲಿಯೇ ಡೆಬಿಟ್ ಕಾರ್ಡ್ ನ ಮೂಲಕ ಹಣ ಪಡೆದುಕೊಳ್ಳಬಹುದು.

ಸದ್ಯ ಎಟಿಎಂ ಕಾರ್ಡ್ ಇದ್ದವರಿಗೆ ಬ್ಯಾಂಕ್ ಹೊಸ ಸೌಲಭ್ಯ ನೀಡಲು ನಿರ್ಧರಿಸಿದೆ. ನೀವು ಎಟಿಎಂ ಕಾರ್ಡ್ ಬಳಕೆದಾರರಾಗಿದ್ದರೆ ಬ್ಯಾಂಕ್ ನೀಡುವ ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದು. ಅಷ್ಟಕ್ಕೂ ATM ಕಾರ್ಡ್ ಹೊಂದಿರುವವರು ಬ್ಯಾಂಕ್ ನಿಂದ ಯಾವ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ATM Card Insurance
Image Credit: youturn

ATM ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್
ಎಟಿಎಂ ಕಾರ್ಡ್ ಹೊಂದಿದವರಿಗೆ ಉಚಿತ ವಿಮ ಮೊತ್ತ (ATM Card Insurance) ನೀಡಲು ಬ್ಯಾಂಕ್ ನಿರ್ಧರಿಸಿದೆ. ನೀವು ಯಾವುದೇ ಬ್ಯಾಂಕ್ ನ ATM ಕಾರ್ಡ್ ಅನ್ನು ಹೊಂದಿದ್ದರೆ ಉಚಿತ ವಿಮ ಸೌಲಭ್ಯಕ್ಕೆ ಅರ್ಹರಾಗುತ್ತೀರಿ. ಎಟಿಎಂ ಕಾರ್ಡ್ ಅನ್ನು ಹೆಚ್ಚು ಕಾಲ ಬಳಸಿದರೆ ನೀವು ಉಚಿತ ವಿಮಾ ಸೌಲಭ್ಯವನ್ನು ಪಡೆಯಬಹುದು. ಎಟಿಎಂ ಕಾರ್ಡ್ ನಲ್ಲಿ ಅಪಘಾತ ವಿಮೆ ಹಾಗೂ ಜೀವ ವಿಮೆ ಲಾಭ ದೊರೆಯಲಿದೆ. ಎರಡು ಸಂಧರ್ಭದಲ್ಲಿ ಕೂಡ ಇನ್ಸ್ಯುರೆನ್ಸ್ ಕ್ಲೈಮ್ ಆಗಲಿದೆ. ಇದೀಗ ನಾವು ಉಚಿತ ಅಪಘಾತ ವಿಮಾ ರಕ್ಷಣೆಯ ಬಗ್ಗೆ ವಿವರ ತಿಳಿಯೋಣ.

ಎಲ್ಲರಿಗೂ ಸಿಗಲಿದೆ ಉಚಿತವಾಗಿ 3 ಕೋಟಿ ರೂ
ಕೆಲವು ಡೆಬಿಟ್ ಕಾರ್ಡ್‌ ಗಳು 3 ಕೋಟಿ ರೂ. ವರೆಗೆ ಉಚಿತ ಅಪಘಾತ ವಿಮಾ ರಕ್ಷಣೆಯನ್ನು ನೀಡುತ್ತವೆ. ಈ ವಿಮಾ ರಕ್ಷಣೆಯನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಂದ ಯಾವುದೇ ಪ್ರೀಮಿಯಂ ಅನ್ನು ವಿಧಿಸಲಾಗುವುದಿಲ್ಲ ಅಥವಾ ಯಾವುದೇ ಹೆಚ್ಚುವರಿ ದಾಖಲೆಯನ್ನು ಬ್ಯಾಂಕ್‌ ಗಳು ಕೇಳುವುದಿಲ್ಲ. ಡೆಬಿಟ್ ಕಾರ್ಡ್‌ ಗಳಲ್ಲಿ ಉಚಿತ ಆಕಸ್ಮಿಕ ವಿಮಾ ರಕ್ಷಣೆಯನ್ನು ಪಡೆಯಲು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.

Debit Card Insurance Up To 3 Crores
Image Credit: Pipanews

ಉಚಿತ ವಿಮೆ ಪಡೆಯಲು ಷರತ್ತುಗಳೇನು…?
ಕಾರ್ಡುದಾರರು ನಿರ್ದಿಷ್ಟ ಅವಧಿಯೊಳಗೆ ಆ ಡೆಬಿಟ್ ಕಾರ್ಡ್ ಮೂಲಕ ಕೆಲವು ವಹಿವಾಟುಗಳನ್ನು ಮಾಡಬೇಕು. ಅರ್ಹ ವಹಿವಾಟುಗಳನ್ನು ಮಾಡುವ ಮಾನದಂಡಗಳು ಬ್ಯಾಂಕ್‌ ನಿಂದ ಬ್ಯಾಂಕ್‌ ಗೆ ಬದಲಾಗುತ್ತವೆ. ಇನ್ನು UPI ವಹಿವಾಟುಗಳು ಸಾಮಾನ್ಯವಾಗಿ ವಿಮ ರಕ್ಷಣೆಗೆ ಅರ್ಹವಾಗಿರುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

Join Nadunudi News WhatsApp Group