E-Ticket And I-Ticket: ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಇ-ಟಿಕೆಟ್ ಮತ್ತು ಐ-ಟಿಕೆಟ್ ಬಗ್ಗೆ ತಿಳಿದುಕೊಳ್ಳಿ, ಇಲ್ಲವಾದರೆ ಸಮಸ್ಯೆ ಗ್ಯಾರೆಂಟಿ

ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಮುನ್ನ ಟಿಕೆಟ್ ಮಾಹಿತಿ ತಿಳಿದುಕೊಳ್ಳಿ

Deference Between E-Ticket And I-Ticket: ರೈಲಿನಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ರೈಲು ಪ್ರಯಾಣವು ಸಮಯವನ್ನು ಉಳಿಸುವುದಲ್ಲದೆ ಕಡಿಮೆ ಖರ್ಚಿನಲ್ಲಿ ಪ್ರಯಾಣವನ್ನು ಮಾಡಲು ಸಹಾಯವಾಗಲುತ್ತದೆ.

ಇನ್ನು ರೈಲು ಪ್ರಯಾಣಕ್ಕೆ Railway Ticket ಮುಖ್ಯವಾಗಿರುತ್ತದೆ. Railway Ticket ಇಲ್ಲದಿದ್ದರೆ ಪ್ರಯಾಣ ಅಸಾಧ್ಯ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಸದ್ಯ ರೈಲ್ವೆ ಇಲಾಖೆ ಟಿಕೆಟ್ ಬುಕಿಂಗ್ ಗೆ ಆನ್ಲೈನ್ ಪ್ರಕ್ರಿಯೆಯನ್ನು ನೀಡುತ್ತಿದೆ. ಹೀಗಾಗಿ ಪ್ರಯಾಣ ಮಾಡಲು ಇಚ್ಛಿಸುವವರು ಹೆಚ್ಚಾಗಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುತ್ತಾರೆ.

Difference Between E-Ticket And I-Ticket
Image Credit: TV9telugu

ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ
ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಆನ್ಲೈನ್ ನಲ್ಲಿ ಬುಕ್ ಮಾಡುವ ಮುನ್ನ ಟಿಕೆಟ್ ನಿಯಮದ ಬಗ್ಗೆ ತಿಳಿದಿರಬೇಕು. ಟಿಕೆಟ್ ನಲ್ಲಿ ಇ-ಟಿಕೆಟ್ ಮತ್ತು ಐ-ಟಿಕೆಟ್ ನ ಎರಡು ವಿಧಗಳಿವೆ. ನೀವು ಈ ಎರಡರ ವ್ಯತ್ಯಾಸ ತಿಳಿಯದೆ ಟಿಕೆಟ್ ಬುಕ್ ಮಾಡಿದರೆ ಸಮಸ್ಯೆ ಎದುರಿಸುವುದಂತೂ ಖಂಡಿತ. ಟಿಕೆಟ್ ಬುಕ್ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ.

ಇ-ಟಿಕೆಟ್ ಮತ್ತು ಐ-ಟಿಕೆಟ್ ಗಳ ಬಗ್ಗೆ ನಿಮಗೆಷ್ಟು ಗೊತ್ತು..?
ಆನ್ಲೈನ್ ಟಿಕೆಟ್ ಬುಕಿಂಗ್ ನಲ್ಲಿ ಇ-ಟಿಕೆಟ್ ಅಥವಾ ಐ-ಟಿಕೆಟ್ ರೂಪದಲ್ಲಿರಬಹುದು. ಆದರೆ ಇ-ಟಿಕೆಟ್ ಮತ್ತು ಐ-ಟಿಕೆಟ್ ನಡುವಿನ ವ್ಯತ್ಯಾಸವು ಅನೇಕರಿಗೆ ತಿಳಿದಿರುವುದಿಲ್ಲ. ನೀವು ಆನ್‌ ಲೈನ್‌ ನಲ್ಲಿ ಬುಕ್ ಮಾಡುವ ಟಿಕೆಟ್ ಇ-ಟಿಕೆಟ್ ಅಥವಾ ಐ-ಟಿಕೆಟ್ ಮತ್ತು ಯಾವುದನ್ನು ಮೊದಲು ದೃಢೀಕರಿಸುತ್ತದೆ ಎಂಬುದನ್ನು ಗಮನಿಸಬೇಕು.

Indian Railway E-Ticket
Image Credit: India

IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಈ ಎರಡೂ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ನೀವು ಎಲ್ಲಿ ಬೇಕಾದರೂ ಪ್ರಯಾಣಿಸಲು ಎರಡೂ ಟಿಕೆಟ್‌ಗಳನ್ನು ಬುಕ್ ಮಾಡಬಹುದು.ರೈಲ್ವೆಯು ಈ ಟಿಕೆಟ್ ಅನ್ನು ಪ್ರಯಾಣಿಕರು ನೀಡಿದ ವಿಳಾಸಕ್ಕೆ ಕೊರಿಯರ್ ಮೂಲಕ ತಲುಪಿಸುತ್ತದೆ. ಆದ್ದರಿಂದ ಕನಿಷ್ಠ 3 ದಿನಗಳ ಮುಂಚಿತವಾಗಿ ಐ-ಟಿಕೆಟ್ ಅನ್ನು ಕಾಯ್ದಿರಿಸುವುದು ಅವಶ್ಯಕ. ಸಾಂಪ್ರದಾಯಿಕ ಟಿಕೆಟ್‌ ಗಳಿಗೆ ಆದ್ಯತೆ ನೀಡುವವರು ಐ-ಟಿಕೆಟ್ ಅನ್ನು ಹೆಚ್ಚಾಗಿ ಆದ್ಯತೆ ನೀಡುತ್ತಾರೆ.

Join Nadunudi News WhatsApp Group

ರೈಲು ಟಿಕೆಟ್ ಬುಕ್ ಮಾಡುವ ಮುನ್ನ ಇ-ಟಿಕೆಟ್ ಮತ್ತು ಐ-ಟಿಕೆಟ್ ಬಗ್ಗೆ ತಿಳಿದುಕೊಳ್ಳಿ
ಇ-ಟಿಕೆಟ್‌ ಗಳನ್ನು ಒಂದೇ ದಿನದಲ್ಲಿ ಬುಕ್ ಮಾಡಬಹುದು ಆದರೆ ಐ-ಟಿಕೆಟ್‌ ಗಳನ್ನು ಎರಡು ದಿನಗಳ ಮುಂಚಿತವಾಗಿ ಕಾಯ್ದಿರಿಸಬೇಕು. ಇ-ಟಿಕೆಟ್ ರದ್ದುಗೊಳಿಸುವುದು ಸುಲಭ. ಇದನ್ನು ಆನ್‌ ಲೈನ್‌ ನಲ್ಲಿ ಮಾತ್ರ ರದ್ದುಗೊಳಿಸಬಹುದು. ಆದರೆ ಆನ್‌ ಲೈನ್‌ ನಲ್ಲಿ ಟಿಕೆಟ್ ರದ್ದು ಮಾಡಲಾಗುವುದಿಲ್ಲ. ರೈಲ್ವೆ ನಿಲ್ದಾಣದಲ್ಲಿರುವ ಸೂಕ್ತ ಕೌಂಟರ್‌ ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.

Indian Railway I-Ticket
Image Credit: Herzindagi

ಹೆಚ್ಚುವರಿಯಾಗಿ ಕೊರಿಯರ್ ಡೆಲಿವರಿ ಲಭ್ಯವಿರುವ ವಿಳಾಸಗಳಿಗೆ ಮಾತ್ರ ಐ ಟಿಕೆಟ್‌ ಗಳನ್ನು ಕೊರಿಯರ್ ಮಾಡಬಹುದು. ಸಾಮಾನ್ಯವಾಗಿ ಯಾವ ಟಿಕೆಟ್ ಮೊದಲು ಕನ್ಫರ್ಮ್ ಆಗುತ್ತೆ ಎಂಬ ಗೊಂದಲ ಜನರಲ್ಲಿರುತ್ತದೆ. ಟಿಕೆಟ್ ದೃಢೀಕರಣಕ್ಕೆ ಇ-ಟಿಕೆಟ್‌ ಗಳು ಮತ್ತು ಐ-ಟಿಕೆಟ್‌ ಗಳಿಗೆ ಯಾವುದೇ ಸಂಬಂಧವಿಲ್ಲ. ರೈಲು ಟಿಕೆಟ್ ದೃಢೀಕರಣವು ರದ್ದತಿಯನ್ನು ಆಧರಿಸಿರುತ್ತದೆ.

Join Nadunudi News WhatsApp Group