Actress Shilpa: ಶಿವಣ್ಣನ ಜೊತೆ ಜನುಮದ ಜೋಡಿ ಚಿತ್ರದಲ್ಲಿ ನಟಿಸಿದ ನಟಿ ಶಿಲ್ಪಾ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ…?

ಕನ್ನಡ ಖ್ಯಾತ ನಟಿ ಶಿಲ್ಪಾ ಈಗ ಏನು ಮಾಡುತ್ತಿದ್ದಾರೆ..?

Malayalam Actress Shilpa Life Story: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿರಿಯ ನಟಿಯರು ಈಗಲು ಕೂಡ ಜನರ ಮನಸ್ಸಿಲ್ಲಿ ಹಾಗೆಯೆ ಉಳಿದಿದ್ದಾರೆ. ಶಿವರಾಜ್ ಕುಮಾರ್ ಅವರ  ಜನುಮದ ಜೋಡಿ ಚಿತ್ರ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ಜೊತೆಯಾಗಿ ನಟಿ Shilpa ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಅವರಿಗೆ ಜನುಮದ ಜೋಡಿ ಚಿತ್ರ ಹೊಸ ತಿರುವು ನೀಡಿದೆ ಎನ್ನಬಹುದು.

malayalam actress chippy shilpa
Image Credit: Original Source

ಜನುಮದ ಜೋಡಿ ಚಿತ್ರದ ನಟಿ ಶಿಲ್ಪಾ
ಜನುಮದ ಜೋಡಿ ಚಿತ್ರದಲ್ಲಿ ನಟಿಸಿದ ಮೇಲೆ ಶಿಲ್ಪಾ ಅವರ ಸಿನಿ ಕೆರಿಯರ್ ಇನ್ನಷ್ಟು ಬೆಳವಣಿಗೆ ಕಂಡಿತ್ತು. ಜನುಮದ ಜೋಡಿ ಚಿತ್ರದಲ್ಲಿ ಕನಕ ಪಾತ್ರದಲ್ಲಿ ನಟಿ ಶಿಲ್ಪಾ ಅವರು ಬಹಳ ಅದ್ಭುತವಾಗಿ ಪಾತ್ರವನ್ನು ನಿಭಾಯಿಸಿದ್ದು ಸಾಕಷ್ಟು ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಇನ್ನು ಶಿಲ್ಪಾ ಅವರು ಜನುಮದ ಜೋಡಿ ಚಿತ್ರದ ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ನಟಿ ಶಿಲ್ಪಾ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಕನ್ನಡ ಖ್ಯಾತ ನಟಿ ಶಿಲ್ಪಾ ಈಗ ಏನು ಮಾಡುತ್ತಿದ್ದಾರೆ..?
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಶಿಲ್ಪಾ ಅವರು ಬಳಿಕ ಮಲಯಾಳಂ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ನಂತರ ನಿರ್ಮಾಪಕರಾದ ರಂಜಿತ್ ಅವರನ್ನು ಮದುವೆಯಾಗಿ ತಮ್ಮ ಸಾಂಸಾರಿಕ ಜೀವನವನ್ನು ಆರಂಭಿಸಿದ್ದರು. ಈ ದಂಪತಿಗಳಿಗೆ ಅವಂತಿಕಾ ಹೆಸರಿನ ಮಗಳಿದ್ದಾಳೆ. ಇನ್ನು ಮದುವೆಯ ನಂತರ ಶಿಲ್ಪಾ ಅವರು ನಟನೆಯನ್ನು ಬಿಟ್ಟು, ಮಲಯಾಳಂ ಚಿತ್ರಗಳನ್ನು ನಿರ್ಮಾಣ ಮಾಡಲು ಆರಂಭಿಸಿದರು. ಇದರಿಂದಾಗಿ ನಟಿ ಶಿಲ್ಪಾ ಅವರು ಸಾಕಷ್ಟು ಹಣವನ್ನು ಕಳೆದುಕೊಂಡರು.

details of malayam actress chippy
Image Credit: Original Source

ಹಣ ಕಳೆದುಕೊಂಡು ಚಿಂತೆಗೀಡಾದಾಗ ನಟಿ ಶಿಲ್ಪಾ ಅವರ ಕೈಹಿಡಿದಿದ್ದು ಸಿರಿಯಲ್ಸ್. ಹೌದು, ಸಿನಿಮಾ ನಿರ್ಮಾಣದಿಂದ ಲಾಸ್ ಮಾಡಿಕೊಂಡ ಶಿಲ್ಪಾ ಬಳಿಕ ಸಿರಿಯಲ್ಸ್ ನಿರ್ಮಾಣವನ್ನು ಆರಂಭಿಸಿದರು. ಇದರಿಂದ ಕಳೆದುಕೊಂಡ ಹಣವನ್ನು ಮರಳಿ ಪಡೆದರು. ಸೀರಿಯಲ್ ನಿರ್ಮಾಣ ಅವರ ಕೈಹಿಡಿದ್ದು, ಒಂದೆರಡು ಸಿರಿಯಲ್ಸ್ ಬಾರಿ ಹಿಟ್ ಆಗಿವೆ. ಇದೀಗ ಶಿಲ್ಪಾ ಅವರು ತಮ್ಮ ಕುಟುಂಬದ ಜೊತೆಗೆ ಕೇರಳದಲ್ಲಿ ವಾಸವಾಗಿದ್ದರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group