PAN Card: ಪಾನ್ ಕಾರ್ಡ್ ನಲ್ಲಿ ಇರುವ 10 ಸಂಖ್ಯೆಗಳ ಅರ್ಥ ಏನು, 90% ಜನರಿಗೆ ತಿಳಿದಿಲ್ಲ.
ಪಾನ್ ಕಾರ್ಡ್ ಮೇಲೆ ಹತ್ತು ಸಂಖ್ಯೆಗಳ ಅರ್ಥ ಇನ್ನೂ ಕೂಡ ಸಾಕಷ್ಟು ಜನರಿಗೆ ತಿಳಿದಿಲ್ಲ. ಪಾನ್ ಕಾರ್ಡ್ ಮೇಲೆ ಇರುವ ಹತ್ತು ಸಂಖ್ಯೆಯ ಅರ್ಥ ತಿಳಿದುಕೊಳ್ಳಿ.
Permanent Account Number Digits: ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ದಾಖಲೆಯಲ್ಲಿ ಪ್ಯಾನ್ ಕಾರ್ಡ್ (Pan Card) ಪ್ರಮುಖ ದಾಖಲೆಯಾಗಿದೆ. ಹಣಕಾಸಿನ ವ್ಯವಹಾರಗಳನ್ನು ಮಾಡಲು ಪ್ಯಾನ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ. ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸಿನ ವಹಿವಾಟು ಕೂಡ ನಡೆಯಲು ಸಾಧ್ಯವಾಗುವುದಿಲ್ಲ.
ಇನ್ನು ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಕೂಡ ಪ್ಯಾನ್ ಕಾರ್ಡ್ ಅತ್ಯವಶ್ಯಕ. ಇನ್ನು ಪ್ಯಾನ್ ಕಾರ್ಡ್ ನ ಬಗ್ಗೆ ನಿಮಗೆ ತಿಳಿದಿಲ್ಲದ ಮಾಹಿತಿಯ ಬಗ್ಗೆ ತಿಳಿಯೋಣ.
![Permanent Account Number Digits](https://nadunudi.in/wp-content/uploads/2023/04/Permanent-Account-Number-Digits.png)
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್
ಇನ್ನು ಈಗಗಾಲೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವಂತೆ ಸರ್ಕಾರ ಸೂಚನೆ ಹೊರಡಿಸದೆ. ಪ್ಯಾನ್ ಆಧಾರ್ ಲಿಂಕ್ ಗಡುವನ್ನು ಕೂಡ ಸರ್ಕಾರ ವಿಸ್ತರಿಸಿದೆ. ಜೂನ್ 30 ರ ವರೆಗೆ ನಿಮಗೆ ಪ್ಯಾನ್ ಆಧಾರ್ ಲಿಂಕ್ ಮಾಡಲು ಸಮಯಾವಕಾಶವಿದೆ. ಜೂನ್ 30 ರವಳಗೆ ನಿಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
![Permanent Account Number Digits](https://nadunudi.in/wp-content/uploads/2023/04/Permanent-Account-Number-Digits-1.png)
ಪಾನ್ ಕಾರ್ಡ್ ನಲ್ಲಿ ಇರುವ 10 ಸಂಖ್ಯೆಗಳ ಅರ್ಥ
ಪ್ಯಾನ್ ಕಾರ್ಡ್ ನಲ್ಲಿ 10 ಅಂಕಿಗಳನ್ನು ನಮೂದಿಸಲಾಗುತ್ತದೆ. ಪ್ಯಾನ್ ಕಾರ್ಡ್ ನಲ್ಲಿನ 10 ಅಂಕಿಗಳ ಅರ್ಥ ಏನೆಂದು ತಿಳಿಯೋಣ. ಪ್ಯಾನ್ ಕಾರ್ಡ್ ನಲ್ಲಿರುವ ಮೊದಲ ಮೂರು ಅಕ್ಷರಗಳು ವರ್ಣಮಾಲೆಯಾಗಿರುತ್ತದೆ. AAA ನಿಂದ ZZZ ವರೆಗಿನ ಯಾವುದೇ ಅಕ್ಷರಗಳನ್ನು ಪ್ಯಾನ್ ಕಾರ್ಡ್ ನಲ್ಲಿ ನಮೂದಿಸಬಹುದು.
ಪ್ಯಾನ್ ಕಾರ್ಡ್ ನಲ್ಲಿನ ನಾಲ್ಕನೇ ವರ್ಣಮಾಲೆಯು ನೀವು ಏನಾಗಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. P ಅಂತ ಇದ್ದರೆ ವ್ಯಕ್ತಿ ಎಂದು, F ಅಂತ ಇದ್ದರೆ ಸಂಸ್ಥೆಗೆ ಸೇರಿದೆ ಎಂದು, T ಅಂತ ಇದ್ದರೆ ನಂಬಿಕೆ ಎಂದು, B ವ್ಯಕ್ತಿಯ ದೇಹವನ್ನು ಸೂಚಿಸುತ್ತದೆ, G ಸರ್ಕಾರವನ್ನು ಸೂಚಿಸುತ್ತದೆ, H ಅಂತ ಇದ್ದರೆ ಹಿಂದೂ ಅವಿಭಜಿತ ಕುಟುಂಬವನ್ನು ಸೂಚಿಸುತ್ತದೆ. ಪ್ಯಾನ್ ಕಾರ್ಡ್ ನಲ್ಲಿನ ಐದನೇ ಅಕ್ಷರವು ಉಪನಾಮದ ಮೊದಲ ಅಕ್ಷರವಾಗಿದೆ. ಇನ್ನು ಪ್ಯಾನ್ ಕಾರ್ಡ್ ನಲ್ಲಿ ನಾಲ್ಕು ಸಂಖ್ಯೆಗಳು ಹಾಗೂ ಕೊನೆಯಲ್ಲಿ ಒಂದು ವರ್ಣಮಾಲೆ ಇರುತ್ತದೆ.
![Permanent Account Number Digits](https://nadunudi.in/wp-content/uploads/2023/04/Permanent-Account-Number-Digits-2.png)