Diesel Vehicle: ಡೀಸೆಲ್ ವಾಹನ ಇದ್ದವರಿಗೆ ಮುಖ್ಯ ಸೂಚನೆ, ಬ್ಯಾನ್ ಆಗಲಿದೆ ಎಲ್ಲಾ ಡೀಸೆಲ್ ವಾಹನಗಳು.

ಭಾರತದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ರದ್ದಾಗಲಿದೆ ಎಲ್ಲಾ ಡೀಸೆಲ್ ವಾಹನಗಳು.

Diesel Vehicle Ban: ದೇಶದೆಲ್ಲೆಡೆ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳ ಮೇಲೆ ಬೇಡಿಕೆ ಕೂಡ ಹೆಚ್ಚಾಗುತಲಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ವಾಹನ ತಯಾರಕ ಕಂಪನಿಗಳು ವಿವಿಧ ರೀತಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತಲಿದೆ.

ಇನ್ನು ಹೆಚ್ಚಿದ ವಾಹನಗಳಿಂದಾಗಿ ವಾಯುಮಾಲಿನ್ಯದ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಡೀಸೆಲ್ ವಾಹನಗಳ (Diesel Vehicle) ಮೇಲೆ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Diesel Vehicle New Rule
Image Credit: vijaykarnataka

ನಿಷೇಧ ಆಗಲಿದೆ ಡಿಸೇಲ್ ವಾಹನಗಳು
ವಾಯುಮಾಲಿನ್ಯವನ್ನು ಕಡಿಮೆ ಮಾಡುವ ದ್ರಷ್ಟಿಯಿಂದ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 2070 ರ ವೇಳೆಗೆ ವಾಯು ಮಾಲಿನ್ಯವನ್ನು ಶೂನ್ಯಕ್ಕೆ ತರುವ ಉದ್ದೇಶದಿಂದ ಸರ್ಕಾರ ಡೀಸೆಲ್ ವಾಹನಗಳನ್ನು ನಿಷೇದಿಸಲಿದೆ ಎನ್ನುವ ವರದಿಯಾಗಿದೆ. ತೈಲ ಸಚಿವಾಲಯದ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

2027 ರ ವೇಳೆ 1 ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳನ್ನು ನಿಷೇಧಿಸಬೇಕು ಎಂದು ವರದಿ ಮಾಡಲಾಗಿದೆ. ಡೀಸೆಲ್ ವಾಹನಗಳ ಬದಲಾಗಿ ವಿದ್ಯುತ್ ಮತ್ತು ಅನಿಲ ಚಾಲಿತ ವಾಹನಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

It has been instructed to use electric and gas powered vehicles instead of diesel vehicles.
Image Credit: indiatimes

ಇನ್ನು 2035 ರ ವೇಳೆಗೆ ರಸ್ತೆಗಳಿಂದ ಮೋಟಾರ್ ಸೈಕಲ್, ಸ್ಕೂಟರ್ ಮತ್ತು ತ್ರಿಚಕ್ರ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವಂತೆ ಸೂಚಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಹೊಸ ಡೀಸೆಲ್ ಸಿಟಿ ಬಸ್ ಗಳನ್ನೂ ಸೇರಿಸಬಾರದು ಎಂದು ಹೇಳಲಾಗಿದೆ. ಸಮಿತಿಯು ಈ ವರ್ಷ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹೇಳಲಾಗಿದೆ. ಈ ವರದಿಯ ಬಗ್ಗೆ ಸರ್ಕಾರ ಇನ್ನು ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.

Join Nadunudi News WhatsApp Group

Join Nadunudi News WhatsApp Group