Digilocker: ಈಗ ವಾಟ್ಸಾಪ್ ನಲ್ಲಿ ಡೌನ್ ಲೋಡ್ ಮಾಡಿ ಪಾನ್, ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್.

ಈಗ ವಾಟ್ಸಾಪ್ ಮೂಲಕ ಆಧಾರ್, ಪಾನ್ ಮತ್ತು ಡ್ರೈವಿಂಗ್ ಲೈಸೆನ್ಸ್ ಡೌನ್ ಲೋಡ್ ಮಾಡಬಹುದು. ಹೊಸ ತಂತ್ರಜ್ಞಾನ ಬಿಡುಗಡೆ.

Document Download In WhatsApp Digilocker: ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಯಾವುದೇ ರೀತಿಯ ಕೆಲಸ ಆಗಬೇಕಿದ್ದರು ಇದೀಗ ಆನ್ಲೈನ್ ನಲ್ಲಿ ಮಾಡಬಹುದಾಗಿದೆ. ಇದೀಗ ನಿಮ್ಮ ಪ್ರಮುಖ ದಾಖಲೆಗಳನ್ನು ಆನ್ಲೈನ್ ನಲ್ಲಿ ಹೇಗೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಪ್ರಮುಖ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Document Download In WhatsApp Digilocker
Image Source: The Indian Express

ಡಿಜಿಲಾಕರ್ ಅಪ್ಲಿಕೇಶನ್
ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಅನೇಕ ಪ್ರಮುಖ ದಾಖಲೆಗಳನ್ನು ನೀವು ಸ್ಮಾರ್ಟ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಮಾಡಲು ನೀವು ಡಿಜಿಲಾಕರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಡಿಜಿಲಾಕರ್ ಅಕೌಂಟ್ ನಲ್ಲಿ ಎಲ್ಲ ವೈಯಕ್ತಿಕ ಮಾಹಿತಿಗಳು ಸೇವ್ ಆಗಿರುತ್ತದೆ.

Document Download In WhatsApp Digilocker
Image Source: Zee Business

ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ ಗಳನ್ನೂ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
*ಮೊದಲನೆಯದಾಗಿ ನೀವು ಡಿಜಿಲಾಕರ್ ಅಕೌಂಟ್ ಅನ್ನು ಹೊಂದಿರಬೇಕು.

*ನಿಮ್ಮ ವಾಟ್ಸಾಪ್ ಖಾತೆಯ ಮೂಲಕ ಡಿಜಿಲಾಕರ್ ನಿಂದ ಸುಲಭವಾಗಿ ನಿಮ್ಮ ಡಾಕ್ಯುಮೆಂಟ್ ಗಳನ್ನೂ ಡೌನ್ಲೋಡ್ ಮಾಡಿಕೊಳ್ಳಬಹುದು.

*9013151515 ಇದು MyGov ಸಹಾಯವಾಣಿ ಸಂಖ್ಯೆಯಾಗಿದೆ. ನೀವು ವಾಟ್ಸಾಪ್ ನಲ್ಲಿ ಈ ಸಂಖ್ಯೆಗೆ ಸಂದೇಶ ಕಳುಹಿಸಬೇಕಾಗುತ್ತದೆ.

Join Nadunudi News WhatsApp Group

Document Download In WhatsApp Digilocker
Image Source: Gizbot

*MyGov ಸಹಾಯವಾಣಿ ಸಂಖ್ಯೆಗೆ ನೀವು ಹಾಯ್ ಅಥವಾ ನಮಸ್ತೆ ಎಂದು ಸಂದೇಶ ಕಳುಹಿಸಬಹುದು.

*ನಂತರ ನಿಮಗೆ ಎರಡು ಆಯ್ಕೆಗಳು ಕಾಣುತ್ತದೆ. ಡಿಜಿಲಾಕರ್ ಮತ್ತು ವಾಟ್ಸಾಪ್ ಕೋವಿನ್ ಎಂಬ ಆಯ್ಕೆಯಲ್ಲಿ ಡಿಜಿಲಾಕರ್ ಖಾತೆಯನ್ನು ಆರಿಸಿ.

*ಅಲ್ಲಿ ನಿಮ್ಮ ಡಿಜಿಲಾಕರ್ ಖಾತೆಗೆ ಲಿಂಕ್ ಮಾಡಲಾದ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*OTP ಯನ್ನು ನಮೂದಿಸಿದ ನಂತರ ಡಿಜಿಲಾಕರ್ ನಲ್ಲಿ ಸೇವ್ ಆಗಿರುವ ಎಲ್ಲ ದಾಖಲೆಗಳು ನಿಮಗೆ ಸಿಗುತ್ತದೆ.

*ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನೀವು ನಿಮ್ಮ ಪ್ರಮುಖ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Join Nadunudi News WhatsApp Group