Property Rule: ಸ್ವಂತ ಆಸ್ತಿ ಇದ್ದವರಿಗೆ ಗುಡ್ ನ್ಯೂಸ್, ಇನ್ಮುಂದೆ ಆನ್ಲೈನ್ ನಲ್ಲೆ ಸಿಗಲಿದೆ ಈ ದಾಖಲೆ

ಇನ್ನುಮುಂದೆ ಆನ್ಲೈನ್ ನಲ್ಲೇ ಸಿಗಲಿದೆ ಎಲ್ಲ ಕಂದಾಯ ದಾಖಲೆ

Digitization of Land Records: ಸದ್ಯ ರಾಜ್ಯದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಇನ್ನು ಹೆಚ್ಚುತ್ತಿರುವ ವಂಚನೆಯ ತಡೆಗಾಗಿ ಸರ್ಕಾರ ಅನೇಕ ನಿಯಮವನ್ನು ಪರಿಚಯಿಸುತ್ತಿದೆ. ಸದ್ಯ ರಾಜ್ಯದೆಲ್ಲೆಡೆ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಸ್ಕ್ಯಾಮ್ ಗಳು ನಡೆಯುತ್ತಿದೆ.

ನಕಲಿ ಆಸ್ತಿ ದಾಖಲೆ ಸೃಷ್ಟಿ, ವಂಚನೆಯ ತಡೆಗಾಗಿ ಸರ್ಕಾರ ಆಗಾಗ ಕಠಿಣ ನಿಯಮವನ್ನು ಜಾರಿಗೆ ತರುತ್ತಿದೆ. ಸದ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಬಿಗ್ ಅಪ್ಡೇಟ್ ನೀಡಿದೆ. ಆಸ್ತಿ ವಿಚಾರವಾಗಿ ಉಂಟಾಗುತ್ತಿರುವ ಸ್ಕ್ಯಾಮ್ ಗಳಿಗೆ ಕಡಿವಾಣ ಹಾಕಲು ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

Digitization of Land Records
Image Credit: Times Of India

ಆಸ್ತಿ ಮಾಲೀಕರಿಗೆ ಬಿಗ್ ಅಪ್ಡೇಟ್
ರಾಜ್ಯದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ವೇಗ ನೀಡಲಾಗಿದೆ. ನಕಲಿ ದಾಖಲೆ ಸೃಷ್ಟಿ, ವಂಚನೆಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಹಾಗೂ ಕಂದಾಯ ಇಲಾಖೆಯ ಎಲ್ಲ ದಾಖಲೆಗಳು ಆನ್‌ ಲೈನ್‌ ನಲ್ಲಿ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಮೊದಲ ಹಂತದಲ್ಲಿ ಆಕಾರ್ ಬಂಡ್‌ ಗಳ ಡಿಜಿಟಲೀಕರಣ ಶೇ.95 ರಷ್ಟು ಪೂರ್ಣಗೊಂಡಿದೆ. ನಕಲಿ ದಾಖಲೆ ಸೃಷ್ಟಿಸಿ ಸಾಮಾನ್ಯ ಜನರನ್ನು ವಂಚಿಸುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ಕಂದಾಯ ದಾಖಲೆಗಳನ್ನು ಸುಲಭವಾಗಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಭೂ ದಾಖಲೆಗಳ ಡಿಜಿಟಲೀಕರಣ ಕೈಗೊಳ್ಳಲಾಗಿದೆ.

ಇನ್ನುಮುಂದೆ ಆನ್ಲೈನ್ ನಲ್ಲೇ ಸಿಗಲಿದೆ ಎಲ್ಲ ಕಂದಾಯ ದಾಖಲೆ
ತಾಲೂಕು ಮಟ್ಟದ ಎಡಿಎಲ್ ಆರ್ ಕಚೇರಿಗಳಲ್ಲಿನ ಎಲ್ಲ ದಾಖಲೆ ಕೊಠಡಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಭೂ ದಾಖಲೆಗಳಿಗೆ ಸಂಬಂಧಿಸಿದ ಮಾಲೀಕರ ಆಧಾರ್ ಲಿಂಕ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು 2012 ರಿಂದ 21 ರ ವರೆಗೆ ನೋಂದಣಿಯಾಗಿರುವ ಸುಮಾರು ಎರಡು ಕೋಟಿ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ.

ಇನ್ನು 2025 ರ ವೇಳೆಗೆ ರಾಜ್ಯದ ಎಲ್ಲ ತಾಲೂಕು ಕಚೇರಿಗಳನ್ನು ಕಾಗದ ರಹಿತವಾಗಿ ಮಾಡುವ ಗುರಿ ಹೊಂದಲಾಗಿದೆ. ಭೂ ದಾಖಲೆಗಳ ಡೇಟಾಬೇಸ್‌ ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಆರ್.ಟಿ.ಸಿ. ಜತೆಗೆ ಆಸ್ತಿಗಳ ಎಲ್ಲ ಅಗತ್ಯತೆಗಳು ಸಾರ್ವಜನಿಕರಿಗೆ ಆನ್‌ ಲೈನ್‌ ನಲ್ಲಿ ಲಭ್ಯವಾಗಲಿದ್ದು, ಇದರಿಂದ ಭೂ ದಾಖಲೆಗಳಿಗಾಗಿ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

Land Records Digitization Latest News
Image Credit: Risingkashmir

Join Nadunudi News WhatsApp Group