Mobile Users: ಇನ್ಮುಂದೆ ಸಿಮ್ ಮತ್ತು ಇಂಟರ್ನೆಟ್ ಇಲ್ಲದೆ ಟಿವಿ ಮತ್ತು ವಿಡಿಯೋ ನೋಡಬಹುದು, ಜಾರಿಗೆ ಬಂತು ಹೊಸ ತಂತ್ರಜ್ಞಾನ

ಇನ್ನುಮುಂದೆ ಮೊಬೈಲ್ ಬಳಕೆದಾರರು SIM ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ವೀಡಿಯೊಗಳನ್ನು ನೋಡಬಹುದು

Direct-To-Mobile Technology: ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ದೇಶದಲ್ಲಿ ಅನೇಕ ಆವಿಷ್ಕಾರಗಳು ಬೆಳಕಿಗೆ ಬರುತ್ತಿದೆ. ಈಗಲೂ ಕೂಡ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಹೊಸ ರೀತಿಯ ಅನ್ವೇಷಣೆ ನಡೆಸಲಾಗುತ್ತಿದೆ.ಪ್ರಸ್ತುತ ತಂತ್ರಜ್ಞಾನದ ಸಹಾಯದಿಂದ ಜನಸಾಮಾನ್ಯರ ಬಹುತೇಕ ಕೆಲಸಗಳು ಸುಲಭಗೊಳ್ಳುತ್ತಿದೆ. ಸದ್ಯ ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಕೂಡ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಮೊಬೈಲ್ ಬಳಕೆದಾರರಿಗೆ ಇದು ಸಿಹಿ ಸುದ್ದಿ ಎನ್ನಬಹುದು.

Direct-To-Mobile Technology
Image Credit: Broadcastandcablesat

ಮೊಬೈಲ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ
ಪ್ರಸ್ತುತ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ದರು ಕೂಡ ಮೊಬೈಲ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ನ ಮೂಲಕ ಸಾಕಷ್ಟು ಕೆಲಸಗಳು ಆಗುತ್ತಿರುವುದರಿಂದ ಜನರು ಹೆಚ್ಚಾಗಿ ಮೊಬೈಲ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. ಸದ್ಯ ಮೊಬೈಲ್ ಬಳಕೆದಾರರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

ಇನ್ನುಮುಂದೆ ಮೊಬೈಲ್ ಬಳಕೆದಾರರು ಶೀಘ್ರದಲ್ಲೇ SIM ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ Direct-To-Mobile ಪ್ರಸಾರವು ಎಲ್ಲೆಡೆ ವಾಸ್ತವಾಗಬಹುದು. ಸ್ವದೇಶಿ ಡೈರೆಕ್ಟ್-ಟು-ಮೊಬೈಲ್ (D2M) ತಂತ್ರಜ್ಞಾನದ ಪ್ರಯೋಗಗಳು ಶೀಘ್ರದಲ್ಲೇ 19 ನಗರಗಳಲ್ಲಿ ನಡೆಯಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಹೇಳಿಕೆ ನೀಡಿದ್ದಾರೆ.

Internet free video stream on mobiles
Image Credit: The Economic Times

SIM ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ವೀಡಿಯೊಗಳನ್ನು ನೋಡಬಹುದು
ವಿಡಿಯೋ ಸಂಚಾರವನ್ನು D2M ಗೆ 25-30 ಪ್ರತಿಶತದಷ್ಟು ಬದಲಾಯಿಸುವುದರಿಂದ 5G ನೆಟ್‌ವರ್ಕ್‌ಗಳನ್ನು ಅನ್‌ಲಾಕ್ ಮಾಡುತ್ತದೆ. ರಾಷ್ಟ್ರದ ಡಿಜಿಟಲ್ ವಿಕಾಸವನ್ನು ವೇಗಗೊಳಿಸುತ್ತದೆ ಮತ್ತು ವಿಷಯ ವಿತರಣೆಯನ್ನು ಪ್ರಜಾಪ್ರಭುತ್ವಗೊಳಿಸುತ್ತದೆ. D2M ತಂತ್ರಜ್ಞಾನವು ದೇಶಾದ್ಯಂತ ಸುಮಾರು 8-9 ಕೋಟಿ ಟಿವಿ-ಡಾರ್ಕ್ ಹೋಮ್‌ ಗಳನ್ನು ತಲುಪಲು ಸಹಾಯ ಮಾಡುತ್ತದೆ.

ದೇಶದ 280 ಮಿಲಿಯನ್ ಕುಟುಂಬಗಳಲ್ಲಿ ಕೇವಲ 190 ಮಿಲಿಯನ್ ಕುಟುಂಬಗಳು ದೂರದರ್ಶನ ಸೆಟ್‌ ಗಳನ್ನು ಹೊಂದಿವೆ. ದೇಶದಲ್ಲಿ 80 ಕೋಟಿ ಸ್ಮಾರ್ಟ್‌ ಫೋನ್‌ ಗಳಿವೆ ಮತ್ತು ಬಳಕೆದಾರರು ಪ್ರವೇಶಿಸುವ ವಿಷಯದ ಶೇಕಡಾ 69 ರಷ್ಟು ವೀಡಿಯೊ ರೂಪದಲ್ಲಿದೆ ಎಂದು ಅವರು ಹೇಳಿದರು. ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group