Mobile Usage: 30 ನಿಮಿಷಕ್ಕಿಂತ ಹೆಚ್ಚು ಮೊಬೈಲ್ ನಲ್ಲಿ ಮಾತನಾಡಿದರೆ ಕಾಣಿಸಿಕೊಳ್ಳಲಿದೆ ಈ ಸಮಸ್ಯೆ, ಆರೋಗ್ಯ ಮಾಹಿತಿ.

ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಮ್ಮ ದೇಹಕ್ಕೆ ಆಗುವ ಸಮಸ್ಯೆಗಳ ಮಾಹಿತಿ.

Mobile Disadvantages Latest: ಇತ್ತೀಚಿನ ಯುವ ಪೀಳಿಗೆಗಳು ಮೊಬೈಲ್ ಫೋನ್ (Mobile Phone) ಅನ್ನು ಹೆಚ್ಚಾಗಿ ಬಳಸುತ್ತಾರೆ. ಈಗಿನ ಜನರಿಗೆ ಕೈಯಲ್ಲಿ ಯಾವಾಗಲು ಮೊಬೈಲ್ ಫೋನ್ ಇಟ್ಟುಕೊಳ್ಳಲೇಬೇಕು. ಈಗಿನ ಜನರೇಶನ್ ಮಕ್ಕಳು ಮೊಬೈಲ್ ಫೋನ್ ಗೆ ಹೆಚ್ಚು ಸೀಮಿತವಾಗಿದ್ದಾರೆ.

ಕೆಲವು ಜನರಿಗೆ ಮೊಬೈಲ್ ಫೋನ್ ಕೈಯಲ್ಲಿ ಇಲ್ಲದಿದ್ದರೆ ಆಗುವುದೇ ಇಲ್ಲ. ಆದರೆ ಹೆಚ್ಚು ಮೊಬೈಲ್ ಯೂಸ್ ಮಾಡುವುದರಿಂದ ಮಾನವನ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಮೊಬೈಲ್ ನಲ್ಲಿ ಹೆಚ್ಚು ಸಮಯಗಳ ಕಾಲ ಮಾತನಾಡುವುದರನ್ನು ಸಮಸ್ಯೆ ಉಂಟಾಗಲಿದೆ. ಅದು ಯಾವ ಸಮಸ್ಯೆ ಎಂಬ ಮಾಹಿತಿ ಇಲ್ಲಿದೆ.

Mobile Disadvantages Latest
Image Source: Kannada News

ಹೆಚ್ಚು ಸಮಯಗಳ ಕಾಲ ಮೊಬೈಲ್ ನಲ್ಲಿ ಮಾತನಾಡುವುದರಿಂದ ಆಗುವ ಸಮಸ್ಯೆಗಳು
ಅಧಿಕ ಬಿಪಿ ಸಮಸ್ಯೆ ಇರುವವರು ಹೆಚ್ಚು ಸಮಯಗಳ ಕಾಲ ಮೊಬೈಲ್ ಫೋನ್ ಅಲ್ಲಿ ಮಾತನಾಡಬಾರದು. ಬಿಪಿ ಹೆಚ್ಚು ಇರುವವರು 30 ನಿಮಿಷಗಳಿಗಿಂತ ಹೆಚ್ಚು ಮಾತನಾಡಿದರೆ ಅವರಿಗೆ ಶೇ. 12 ರಷ್ಟು ಬಿಪಿ ಹೆಚ್ಚು ಆಗುವ ಸಾಧ್ಯತೆ ಇದೆ.

ಮೊಬೈಲ್ ಫೋನ್‌ಗಳಿಂದ ಕಡಿಮೆ ಮಟ್ಟದ ರೇಡಿಯೋ ಫ್ರೀಕ್ವೆನ್ಸಿ ಶಕ್ತಿ ಬಿಡುಗಡೆಯಾಗುತ್ತದೆ ಮತ್ತು ಆ ಶಕ್ತಿಯಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದು ಅಧ್ಯಯನವು ತೀರ್ಮಾನಿಸಿದೆ. ಇನ್ನು ರಕ್ತದೊತ್ತಡವು ವಿಶ್ವಾದ್ಯಂತ ಹೃದಯಾಘಾತದ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Mobile Disadvantages Latest
Image Source: India Today

ಮೊಬೈಲ್ ಫೋನ್ ಹೆಚ್ಚು ಬಳಸುವುದರಿಂದ ಆಗುವ ತೊಂದರೆಗಳು
ವಾರಕ್ಕೆ 30 ನಿಮಿಷಗಳ ಕಾಲ ಹೆಚ್ಚು ಮೊಬೈಲ್ ಫೋನ್ ಅಲ್ಲಿ ಮಾತನಾಡುವವರಲ್ಲಿ ಶೇಕಡಾ 12 ರಷ್ಟು ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇದೆ. ವಾರದಲ್ಲಿ ಮೊಬೈಲ್ ಫೋನ್ ಅಲ್ಲಿ ಒಂದು ಗಂಟೆಯವರೆಗೆ ಫೋನ್ ಅಲ್ಲಿ ಮಾತನಾಡಿದರೆ ಅವರಿಗೆ ಶೇಕಡಾ 8 ರಷ್ಟು ರಕ್ತದೊತ್ತಡ ಹೆಚ್ಚಾಗುತ್ತದೆ.

Join Nadunudi News WhatsApp Group

ಮೂರೂ ಗಂಟೆಗಳ ಕಾಲ ಫೋನ್ ಅಲ್ಲಿ ಮಾತನಾಡುವವರಿಗೆ ಶೇಕಡಾ 13 ರಷ್ಟು ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇದೆ. ಆರು ಗಂಟೆಗಿಂತ ಹೆಚ್ಚು ಮಾತನಾಡುವರಿಗೆ ಶೇಕಡಾ 16 ರಷ್ಟು ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇದೆ. ಇನ್ನು ಅನುವಂಶೀಯ ಅಸ್ವಸ್ಥತೆಗಳನ್ನು ಹೊಂದಿರುವ ಜನರು ಅಧಿಕ ರಕ್ತದೊತ್ತಡವನ್ನು ಹೊಂದುವ ಸಾಧ್ಯತೆ ಶೇಕಡಾ 33 ರಷ್ಟು ಹೆಚ್ಚು ಹೊಂದುತ್ತಾರೆ ಎಂದು ಅಧ್ಯಯನ ಹೇಳಿದೆ.

Mobile Disadvantages Latest
Image Source: News18

Join Nadunudi News WhatsApp Group