Divya Uruduga: ಭರ್ಜರಿಯಾಗಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ ದಿವ್ಯ ಉರುಡುಗ, ಫೋಟೋಗಳು ವೈರಲ್.

ಬಿಜೆಪಿ ಪಕ್ಷದ ಜೊತೆ ಚುನಾವಣೆಯ ಪ್ರಚಾರಕವನ್ನ ಭರದಿಂದ ಮಾಡಿದ ನಟಿ ದಿವ್ಯ ಉರುಡುಗ.

Divya Uruduga In Election Promotion: ದಿವ್ಯಾ ಉರುಡುಗ (Divya Uruduga) ಬಿಗ್ ಬಾಸ್ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇದರ ನಂತರ ಅವರು ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾ ಸ್ಟಾರ್ ನಟ ನಟಿಯರ ಪ್ರಚಾರ ಹೆಚ್ಚಾಗುತ್ತಿದೆ.

ನಟ ಶಿವರಾಜ್ ಕುಮಾರ್, ನಟ ಸುದೀಪ್, ನಟ ದರ್ಶನ್, ನಟ ಧ್ರುವ ಸರ್ಜಾ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಉರುಡುಗ ಸಹ ಚುನಾವಣಾ ಪ್ರಚಾರದಲ್ಲಿ ತೊಡಕೊಂಡಿದ್ದಾರೆ.

Actress Divya Uruduga campaigned with the BJP party
Image Credit: news18

ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ನಟಿ ದಿವ್ಯ ಉರುಡುಗ
ಖ್ಯಾತ ನಟಿ ದಿವ್ಯಾ ಉರುಡುಗ ಅವರು ಬಿಜೆಪಿ ಪರ ಪ್ರಚಾರ ಮಾಡಲು ಫೀಲ್ಡ್ ಗೆ ಇಳಿದಿದ್ದಾರೆ. ನನ್ನ ಜಗತ್ತು ಈ ಅನುಭವಕ್ಕೆ ಧನ್ಯವಾದಗಳು. ಈ ಅವಕಾಶ ಪ್ರೀತಿ, ಬೆಳಕು ಎಲ್ಲವನ್ನು ಅನುಭವಿಸುತ್ತಿದ್ದೇನೆ. ಜೀವನವನ್ನು ನೋಡುವ ನನ್ನ ದೃಷ್ಟಿಕೋನವೇ ಬದಲಾಗಿದೆ ಎಂದು ನಟಿ ಬರೆದಿದ್ದಾರೆ.

ಡಾ. ಸುಧಾಕರ್ ಅವರಿಗಾಗಿ ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಚಿಕ್ಕಬಳ್ಳಾಪುರ ಹಾಗು ಆಸುಪಾಸಿನ ಪ್ರದೇಶ ಕಳೆದೊಂದು ದಶಕದಿಂದ ಅಭಿವೃದ್ಧಿ ಕಾಣುತ್ತಿದೆ. ಸಣ್ಣ ಸಣ್ಣ ಗ್ರಾಮದಲ್ಲಿ ಕೂಡ ಕಾಂಕ್ರೀಟ್ ರಸ್ತೆಗಳಾಗಿವೆ ಎಂದಿದ್ದಾರೆ.

Actress Divya Uruduga campaigned from house to house
Image Credit: news18

ದಿವ್ಯಾ ಉರುಡುಗ ಅವರಿಗೆ ಶುಭ ಹಾರೈಸಿದ ಅಭಿಮಾನಿಗಳು
ನೀರಿನ ಸೌಲಭ್ಯ, ಆಸ್ಪತ್ರೆ, ಮೆಡಿಕಲ್ ಕಾಲೇಜು, ಉಚಿತ ನಿವೇಶನ, ಮನೆ ಏನಿಲ್ಲ ಹೇಳಿ, ಸರ್ ನೀವು ವಿಶಷ ಕೆಲಸ ಮಾಡುತ್ತಿದ್ದೀರಿ. ನೀವು ಅಲ್ಲಿ ಬಹಳಷ್ಟು ಜನರನ್ನು ಪ್ರೇರೇಪಿಸುತ್ತಿದ್ದೀರಿ. ನೀವು ನಿಜವಾದ ನಾಯಕ ಎಂದು ಹೊಗಳಿದ್ದಾರೆ.

Join Nadunudi News WhatsApp Group

ಬಹಳ ಸರಳವಾಗಿ ನಟಿ ದಿವ್ಯ ಉರುಡುಗ ಅವರು ಚುನಾವಣಾ ಪ್ರಚಾರವನ್ನ ಮಾಡಿದ್ದು ಸದ್ಯ ಇದನ್ನ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಯನ್ನ ಹೊರಹಾಕಿದ್ದಾರೆ. ಸದ್ಯ ಚುನಾವಣಾ ಕಾವು ಹೆಚ್ಚಾಗುತ್ತಿದ್ದು ಈ ಬಾರಿಯ ಚುನಾವಣೆ ಬಹಳ ರೋಚಕ ಹಂತವನ್ನ ತುಲುಪಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group