Ujjwala Free Gas: ಈ ಒಂದು ಕಾರ್ಡ್ ಇದ್ದರೆ ಉಜ್ವಲ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು, ಮಹಿಳೆಯರಿಗೆ ಮಾತ್ರ.

ಈ ಕಾರ್ಡ್ ಇದ್ದವರು ಉಜ್ವಲ ಯೋಜನೆಯ ಉಚಿತ ಗ್ಯಾಸ್ padeyalu ಅರ್ಜಿ ಸಲ್ಲಿಸಬಹುದು

Ujjwala Yojana Free Gas Cylinder: ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಸಿಲಿಂಡರ್ ಗಳ ಬೆಲೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಈಗಾಗಲೇ Pradhan Mantri Ujjwala ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ದೇಶದಲ್ಲಿ 2016 ರಲ್ಲಿ ಪರಿಚಯವಾಗಿದ್ದು, ಈ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಂಡಿದ್ದಾರೆ.

PMU ಯೋಜನೆಯಡಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಆಗಿ 300 ರೂ. ಪಡೆಯುತ್ತಿದ್ದಾರೆ. ಸದ್ಯ ದೇಶದ ಮಹಿಳೆಯರು ಈ ಯೋಜನೆಯಡಿ ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಲು ಮೋದಿ ಸರ್ಕಾರ ಮೊತ್ತಮ್ಮೆ ಅವಕಾಶವನ್ನು ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದೆ. ಈ ಒಂದು ಕಾರ್ಡ್ ಇದ್ದರೆ ಉಜ್ವಲ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

Pradhan Mantri Ujjwala Yojana Online Apply
Image Credit: News 24

ಈ ಒಂದು ಕಾರ್ಡ್ ಇದ್ದರೆ ಉಜ್ವಲ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು
ದೇಶದ ಮಹಿಳೆಯರು Pradhan Mantri Ujjwala ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹದು. BPL Ration Card ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸುವ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು. ಉಜ್ವಲಾ ಯೋಜನೆ 2.0 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಒಂದು ಕೋಟಿಗೂ ಹೆಚ್ಚು ಮನೆಗಳನ್ನು ಎಲ್‌ಪಿಜಿ ಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬಿಪಿಎಲ್ ಕಾರ್ಡ್, ಬಿಪಿಎಲ್ ಪಟ್ಟಿಯಲ್ಲಿ ಹೆಸರು ಮುದ್ರಣ, ಪಾಸ್‌ ಪೋರ್ಟ್ ಗಾತ್ರದ ಫೋಟೋ, ಬ್ಯಾಂಕ್ ಫೋಟೋಕಾಪಿ, ವಯಸ್ಸಿನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದು. ಉಚಿತ ಗ್ಯಾಸ್ ಸಿಲಿಂಡರ್ ಅರ್ಜಿ ಸಲ್ಲಿಕೆಗೆ BPL Ration Card ಹೊಂದಿರುವ ಮಹಿಳೆಯರು ಮಾತ್ರ ಅರ್ಹರಾಗಿರುತ್ತಾರೆ ಎನ್ನುವುದು ನಿಮಗೆ ತಿಳಿದಿರಲಿ.

Pradhan Mantri Ujjwala Yojana
Image Credit: Wikimedia

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಯಾರು ಅರ್ಹರು…?
•ಬಡತನ ರೇಖೆಗಿಂತ ಕೆಳಗಿರುವವರು ಅಂದರೆ BPL Ration card ಹೊಂದಿರುವವರು.

Join Nadunudi News WhatsApp Group

•ಭಾರತೀಯ ಮಹಿಳೆಯರು.

•ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ, ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

•ಅರ್ಜಿದಾರರ ಕುಟುಂಬವು ಇಲ್ಲಿಯವರೆಗೆ ಯಾವುದೇ ಗ್ಯಾಸ್ ಸಂಪರ್ಕವನ್ನು ಪಡೆದಿರಬಾರದು.

https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

 

Join Nadunudi News WhatsApp Group