Ayushman Card: ಆಯುಷ್ಮಾನ್ ಕಾರ್ಡ್ ನಿಯಮದಲ್ಲಿ ಮತ್ತೆ ಬದಲಾವಣೆ, ಹೊಸ ಅರ್ಜಿಗೆ ಈ 4 ದಾಖಲೆ ಕಡ್ಡಾಯ.

ಆಯುಷ್ಮಾನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ

Document Required For Ayushman Card: ಕೇಂದ್ರದ ಮೋದಿ ಸರ್ಕಾರ ಜನರಿಗಾಗಿ ಹೊಸ ಆರೋಗ್ಯ ಯೋಜನೆಯನ್ನು ಪರಿಚಯಿಸಿದೆ. ದೇಶದ ಬಡ ಮತ್ತು ನಿರ್ಗತಿಕ ವರ್ಗದವರಿಗೆ ಈ ವಿಶೇಷ ಯೋಜನೆ ಪರಿಚಯವಾಗಿದೆ. ನಾವೀಗ ಹೇಳುತ್ತಿರುವುದು Pradhan Mantri Ayushman Bharat ಯೋಜನೆಯ ಬಗ್ಗೆ. ಈ ಯೋಜನೆಯಡಿ ದೇಶದ ಬಡ ಜನರು ಉಚಿತ ಚಿಕಿತೆಯನ್ನು ಪಡೆದುಕೊಳ್ಳಬಹುದು.

ಸರ್ಕಾರ ಈಗಾಗಲೇ ವಿವಿಧ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯು ಹೆಚ್ಚು ವಿಶೇಷವಾಗಿದೆ. ಇನ್ನುಮುಂದೆ ದೇಶದಲ್ಲಿ ಯಾವುದೇ ಬಡ ಜನರು ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ಸಿಗದೇ ಪರಿತಪಿಸಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ 4 ದಾಖಲೆ ಕಡ್ಡಾಯವಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

Document Required For Ayushman Card
Image Credit: Times Bull

ಆಯುಷ್ಮಾನ್ ಕಾರ್ಡ್ ನಿಯಮದಲ್ಲಿ ಮತ್ತೆ ಬದಲಾವಣೆ, ಹೊಸ ಅರ್ಜಿಗೆ ಈ 4 ದಾಖಲೆ ಕಡ್ಡಾಯ
Pradhan Mantri Ayushman Bharat ಯೋಜನೆಯಡಿ ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5,00,000 ರೂ. ಗಳ ಉಚಿಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ನೀವು ಕೂಡ ಈ ಆಯುಷ್ಮಾನ್ ಭಾರತ್ ಯೋಜನೆಯನ್ನು ಪಡೆಯಲು ಬಯಸಿದರೆ ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ.ಈ ದಾಖಲೆಗಳು ಇದ್ದರೆ ಮಾತ್ರ ನೀವು Ayushman Card ಅನ್ನು ಪಡೆಯಬಹುದು.

*Aadhaar card

*Ration card

Join Nadunudi News WhatsApp Group

*Mobile number

*Address proof

Ayushman Card Benefits
Image Credit: ibc24

ಈ ರೀತಿಯಾಗಿ ಆನ್ಲೈನ್ ಮೂಲಕ ಆಯುಷ್ಮನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ
•ಅಧಿಕೃತ ವೆಬ್ ಸೈಟ್ http://beneficiary.nha.gov.in ಲಾಗಿನ್ ಆಗುವ ಮೂಲಕ ಸುಲಭವಾಗಿ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

•ಅಲ್ಲಿ ನೀಡಲಾದ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್‌ ನಲ್ಲಿ ಸ್ವೀಕರಿಸಿದ OTP ಅನ್ನು ಪರಿಶೀಲಿಸಿ.

•ಅಲ್ಲಿ ಆಯುಷ್ಮಾನ್ ಕಾರ್ಡ್‌ ಗಾಗಿ ರೇಷನ್ ಕಾರ್ಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಕುಟುಂಬದ ಹೆಸರನ್ನು ಇಲ್ಲಿ ಹುಡುಕಿ ನಂತರ, ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರು ಮತ್ತು ವಿವರಗಳನ್ನು ನಮೂದಿಸಿ.

•ವಿವರಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಪರಿಶೀಲಿಸಿ. ಸಮ್ಮತಿಯ ನಮೂನೆಯು ತೆರೆಯುತ್ತದೆ, ಅದರ ಎಲ್ಲಾ ಆಯ್ಕೆಗಳನ್ನು ಟಿಕ್ ಮಾಡಿ ಮತ್ತು ಬಲಭಾಗದಲ್ಲಿರುವ ಅನುಮತಿಸು ಬಟನ್ ಕ್ಲಿಕ್ ಮಾಡಬೇಕು.

•ಆಯುಷ್ಮಾನ್ ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರನ್ನು ಫಲಾನುಭವಿ ಎಂದು ಪರದೆಯ ಮೇಲೆ ನೀಲಿ ಬಾಕ್ಸ್‌ ನಲ್ಲಿ ಪ್ರದರ್ಶಿಸಲಾಗುತ್ತದೆ.

•ಬಾಕ್ಸ್‌ ನ ಕೆಳಗೆ E-KYC ಆಧಾರ್ OTP ಆಯ್ಕೆಯನ್ನು ಆಯ್ಕೆಮಾಡಿ. ಆಧಾರ್ ಪರಿಶೀಲನೆಯನ್ನು ನಿರ್ವಹಿಸಿದ ನಂತರ, ಪುಟದ ಬಲಭಾಗದಲ್ಲಿರುವ ಕ್ಯಾಪ್ಚರ್ ಫೋಟೋ ಕೆಳಗಿನ ಐಕಾನ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.

•ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಿರಿ ಮತ್ತು ಪ್ರೊಸೀಡ್ ಆಯ್ಕೆಯನ್ನು ಕ್ಲಿಕ್ ಮಾಡಿ.

•ನಂತರ ಫಾರ್ಮ್‌ ನಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಸರಿ ಬಟನ್ ಕ್ಲಿಕ್ ಮಾಡಿದರೆ ನೀವು ಸುಲಭವಾಗಿ ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.

Ayushman Card Download
Image Credit: India TV News

Join Nadunudi News WhatsApp Group