DoT Update: ಮೊಬೈಲ್ ಬಳಸುವವರಿಗೆ ಕೇಂದ್ರದ ಎಚ್ಚರಿಕೆ, ಇಂತಹ ಮೊಬೈಲ್ ನಂಬರ್ ಬಂದ್ ಮಾಡಲು ನಿರ್ಧಾರ.

ಮೊಬೈಲ್ ಬಳಸುವವರಿಗೆ ಕೇಂದ್ರದಿಂದ ಎಚ್ಚರಿಕೆ

DoT New Rule: ದೇಶದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿದೆ. ಸೈಬರ್ ಅಪರಾಧಿಗಳು ಜನರನ್ನು ವಿವಿಧ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಜನರನ್ನು ಹೊಸ ಹೊಸ ವಿಧಾನದ ಮೂಲಕ ವಂಚನೆಗೆ ಒಳಪಡಿಸುತ್ತಿದ್ದಾರೆ. ಇನ್ನು ಕೇಂದ್ರ ಸರ್ಕಾರ ವಂಚನೆಯನ್ನು ತಡೆಗಟ್ಟಲು ಹಲವಾರು ಕ್ರಮ ಕೈಗೊಳ್ಳುತ್ತಿದೆ.

ಎಷ್ಟೇ ಪ್ರಯತ್ನಪಟ್ಟರು ಕೂಡ ವಂಚನೆಯ ಪ್ರಕರಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ವಂಚಕರು ಒಂದಲ್ಲ ಒಂದು ವಿಧಾನದ ಮೂಲಕ ಜನರನ್ನು ಮೋಸಮಾಡುತ್ತಿದ್ದರೆ. ಸದ್ಯ ಇದನ್ನೆಲ್ಲಾ ಗಮನಿಸಿದ DoT ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮೊಬೈಲ್ ಬಳಸುವವರಿಗೆ ಕೇಂದ್ರದಿಂದ ಎಚ್ಚರಿಕೆ ನೀಡಲಾಗಿದೆ.

DoT New Rule
Image Credit: News24online

ಮೊಬೈಲ್ ಬಳಸುವವರಿಗೆ ಕೇಂದ್ರದ ಎಚ್ಚರಿಕೆ
ಪ್ರತಿದಿನ ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಮತ್ತು ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸಲು ಕೆಲವು ಮೊಬೈಲ್ ಹ್ಯಾಂಡ್‌ ಸೆಟ್‌ ಗಳನ್ನು ನಿರ್ಬಂಧಿಸಲು ಮತ್ತು ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲು ಟೆಲಿಕಾಂ ಸೇವೆ ಒದಗಿಸುವವರಿಗೆ (ಟಿಎಸ್‌ಪಿ) ಟೆಲಿಕಾಂ ಇಲಾಖೆ (ಡಿಒಟಿ) ನಿರ್ದೇಶನಗಳನ್ನು ನೀಡಿದೆ. ಸೈಬರ್ ಅಪರಾಧ ಮತ್ತು ಹಣಕಾಸು ವಂಚನೆಗಳಲ್ಲಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸರ ವಿಶ್ಲೇಷಣೆಯ ಆಧಾರದ ಮೇಲೆ ಸೈಬರ್ ಅಪರಾಧದಲ್ಲಿ ಭಾಗಿಯಾಗಿರುವ 28,200 ಮೊಬೈಲ್ ಫೋನ್‌ ಗಳು ಮತ್ತು 20 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಫ್ರೀಜ್ ಮಾಡಲು ನಿರ್ಧರಿಸಿದೆ.

Department of Telecommunications
Image Credit: Economic Times

ಇಂತಹ ಮೊಬೈಲ್ ನಂಬರ್ ಬಂದ್ ಮಾಡಲು ನಿರ್ಧಾರ
ಗೃಹ ಸಚಿವಾಲಯ ಮತ್ತು ರಾಜ್ಯ ಪೊಲೀಸರ ವಿಶ್ಲೇಷಣೆಯು ಸೈಬರ್ ಅಪರಾಧಗಳಲ್ಲಿ 28,200 ಮೊಬೈಲ್ ಹ್ಯಾಂಡ್‌ ಸೆಟ್‌ ಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅವುಗಳನ್ನು ಬ್ಲಾಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಹ್ಯಾಂಡ್ ಸೆಟ್ ಗಳಲ್ಲಿ 20 ಲಕ್ಷ ಸಂಖ್ಯೆಗಳನ್ನು ಬಳಸಲಾಗಿದೆ. ದೂರಸಂಪರ್ಕ ಇಲಾಖೆ (DoT) ನಡೆಸಿದ ಹೆಚ್ಚಿನ ತನಿಖೆಯಲ್ಲಿ ಸೈಬರ್ ಅಪರಾಧಗಳಲ್ಲಿ ಈ ಮೊಬೈಲ್ ಹ್ಯಾಂಡ್‌ ಸೆಟ್‌ ಗಳೊಂದಿಗೆ 20 ಲಕ್ಷ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಕಂಡುಬಂದಿದೆ.

ಭಾರತದಾದ್ಯಂತ 28,200 ಮೊಬೈಲ್ ಹ್ಯಾಂಡ್‌ ಸೆಟ್‌ ಗಳನ್ನು ನಿರ್ಬಂಧಿಸಲು ಮತ್ತು ಈ ಹ್ಯಾಂಡ್‌ ಸೆಟ್‌ ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ತಕ್ಷಣವೇ ಮರು ಪರಿಶೀಲಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ DoT ಸೂಚನೆಗಳನ್ನು ನೀಡಿತು. ಮರು ಪರಿಶೀಲನೆ ವಿಫಲವಾದಲ್ಲಿ ಸಂಪರ್ಕ ಕಡಿತಗೊಳಿಸುವಂತೆ ಟೆಲಿಕಾಂ ಕಂಪನಿಗಳಿಗೆ DoT ನಿರ್ದೇಶನ ನೀಡಿದೆ. ದೂರಸಂಪರ್ಕ ಇಲಾಖೆ (DoT) ಸೈಬರ್ ಅಪರಾಧದ ವಿಷಯದಲ್ಲಿ ಇಂತಹ ಕ್ರಮಗಳನ್ನು ಕೈಗೊಂಡಿದೆ.

Join Nadunudi News WhatsApp Group

phone number ban
Image Credit: Independent

Join Nadunudi News WhatsApp Group