Ambedkar Scholarship: ವಿದ್ಯಾರ್ಥಿಗಳಿಗೆ 8000 ರೂ ಸ್ಕಾಲರ್ ಶಿಪ್ ಘೋಷಣೆ, ಇಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಹಣ ಪಡೆಯಬಹುದು

ವಿದ್ಯಾರ್ಥಿಗಳಿಗೆ ಸಿಗಲಿದೆ 8000 ರೂ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ

Dr Bhimrao Ambedkar Meritorious Scholarship: ಯಾರೇ ಆಗಲಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕಿದ್ದರು ಅವರಿಗೆ ಮುಖ್ಯವಾಗಿ ಶಿಕ್ಷಣ ಅಗತ್ಯವಾಗಿರುತ್ತದೆ. ಶಿಕ್ಷಣವಿದ್ದರೆ ಎಲ್ಲರು ಕೂಡ ಜೀವನದಲ್ಲಿ ಯಶಸ್ಸನ್ನು ಪಡೆಯಬಹದು. ಮಕ್ಕಳಿಗೆ ಉತ್ತಮ ಶಿಕ್ಷಣದ ಅಗತ್ಯವಿದೆ. ದೇಶದಲ್ಲಿ ಅದೆಷ್ಟು ಬಡ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವ ಶಕ್ತಿ ಇರುವುದಿಲ್ಲ.

ಆರ್ಥಿಕ ಸಮಸ್ಯೆಯ ಕಾರಣ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಧದಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಕೈಬಿಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಮಕ್ಕಳ ಶಿಕ್ಷಣಕ್ಕೆ ಉತ್ತೇಜನವನ್ನು ನೀಡುವ ಉದ್ದೇಶದಿಂದ ವಿವಿಧ ಕಂಪನಿಗಳು ಹಾಗೂ ಸರ್ಕಾರ ವಿದ್ಯಾರ್ಥಿಗಳಿಗಾಗಿ ವಿವಿಧ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಇದೀಗ ಮಕ್ಕಳಿಗಾಗಿ ಪರಿಚಯಿಸಿರುವ ವಿದ್ಯಾರ್ಥಿವೇತನದ ಬಗ್ಗೆ ನಾವೀಗ ಮಾಹಿತಿ ತಿಳಿದುಕೊಳ್ಳೋಣ.

Dr Bhimrao Ambedkar Meritorious Scholarship
Image Credit: Tribuneindia

ವಿದ್ಯಾರ್ಥಿಗಳಿಗೆ 8000 ಸ್ಕಾಲರ್ ಶಿಪ್ ಘೋಷಣೆ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ 2023 -24 ಸಾಲಿನ ವಿದ್ಯಾರ್ಥಿ ವೇತನ ನೀಡಲು Da Bhimrao Ambedkar Meritorious Scholarship ಅನ್ನು ಪರಿಚಯಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸಹಾಯಧನವನ್ನು ಪಡೆದುಕೊಳ್ಳಬಹುದು.

Da Bhimrao Ambedkar Meritorious Scholarship ಅಡಿಯಲ್ಲಿ ಹತ್ತನೇ ತರಗತಿ ಮುಗಿಸಿ ಪಿಯುಸಿ ಓದುತ್ತಿರುವವರಿಗೆ 8000, ಪದವಿ ವಿದ್ಯಾರ್ಥಿಗಳಿಗೆ 8 ರಿಂದ 10 ಸಾವಿರ. ಪದವಿ ಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ 9 ರಿಂದ 12 ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ. 2024 ಜನವರಿ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಹರಿಯಾಣ ರಾಜ್ಯದ ವಿದ್ಯಾರ್ಥಿಗಳು Da Bhimrao Ambedkar Meritorious Scholarship ಸ್ಕೊಲರ್ ಶಿಪ್ ಅನ್ನು ಪಡೆದುಕೊಳಬಹುದು.

Dr Bhimrao Ambedkar Meritorious Scholarship Application
Image Credit: Housing

ವಿದ್ಯಾರ್ಥಿವೇತನ ಪಡೆಯಲು ಯಾರು ಅರ್ಹರು..?
•SC /ST , 2A , 2B ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ವಿದ್ಯಾರ್ರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

•ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ನಗರ ಪ್ರದೇಶದ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ 70 % , ಪಿಯುಸಿಯಲ್ಲಿ 75 % ಹಾಗೆಯೆ ಪದವಿಯಲ್ಲಿ 65 % ಅಂಕ ಪಡೆದು ತೇರ್ಗಡೆ ಹೊಂದಿರಬೇಕು.

•ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ನಗರ ಪ್ರದೇಶದ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ 60 % , ಪಿಯುಸಿಯಲ್ಲಿ 70 % ಹಾಗೆಯೆ ಪದವಿಯಲ್ಲಿ 60 % ಅಂಕ ಪಡೆದು ತೇರ್ಗಡೆ ಹೊಂದಿರಬೇಕು.

•ಇನ್ನು ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಾಲ್ಕು ಲಕ್ಷಕ್ಕಿಂತ ಹೆಚ್ಚಿರಬಾರದು.

Join Nadunudi News WhatsApp Group