ಇಡೀ ಜಗತ್ತನ್ನೇ ತೋರಿಸುತ್ತೇನೆ ಎಂದು ಶಪಥ ಮಾಡಿದ ಈ Dr ಬ್ರೋ ನಿಜಕ್ಕೂ ಯಾರು ಗೊತ್ತಾ, ಈತನ ಆದಾಯ ಎಷ್ಟು ನೋಡಿ.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಮೊಬೈಲ್ ಬಳಕೆ ಮಾಡೇ ಮಾಡುತ್ತಾರೆ ಮತ್ತು ಮೊಬೈಲ್ ಇಲ್ಲದ ಮಾನವ ಇಲ್ಲ ಎಂದು ಹೇಳಬಹುದು. ಇನ್ನು ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡುವ ಎಲ್ಲಾ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮತ್ತು ಯು ಟ್ಯೂಬ್ ಬಳಸುತ್ತಾರೆ. ಸದ್ಯ ಫೇಸ್ ಬುಕ್ ಮತ್ತು ಯು ಟ್ಯೂಬ್ ನಲ್ಲಿ ಸಕತ್ ಚರ್ಚೆಯಲ್ಲಿ ಇರುವ ಕರ್ನಾಟಕದ ಹುಡುಗ ಅಂದರೆ ಅದು Dr ಬ್ರೋ ಎಂದು ಹೇಳಬಹುದು. ನಮಸ್ಕಾರ ದೇವರು ಎಂದು ಹೇಳುತ್ತಾ ಕನ್ನಡಿಗರ ಮಾನವನ್ನ ಗೆದ್ದಿರುವ ಈ Dr ಬ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನ ಮಾಡಿದ್ದಾನೆ ಎಂದು ಹೇಳಬಹುದು.

ಈ ಪ್ರಪಂಚವನ್ನೇ ಸುತ್ತುತ್ತೇನೆ ಎಂದು ಶಪತವನ್ನ ಮಾಡಿರುವ ಈ Dr ಬ್ರೋ ಯಾರು ಮತ್ತು ಈತನಿಗೆ ಪ್ರಪಂಚ ಸುತ್ತಲೂ ಹಣ ಎಲ್ಲಿಂದ ಬರುತ್ತದೆ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಈ Dr ಬ್ರೋ ಯಾರು ಮತ್ತು ಆತನ ನಿಜವಾದ ಹೆಸರು ಏನು ಮತ್ತು ಆತನ ಆದಾಯ ಎಷ್ಟು ಅನ್ನುವುದರ ಬಗೆ ತಿಳಿಯೋಣ ಬನ್ನಿ. ಹೌದು ಫೇಸ್ ಬುಕ್ ಮತ್ತು ಯು ಟ್ಯೂಬ್ ನಲ್ಲಿ Dr ಬ್ರೋ ಅನ್ನುವ ಚಾನೆಲ್ ಮೂಲಕ ಜನರ ಮನೆತಾಗಿರುವ Dr ಬ್ರೋ ಖ್ಯಾತಿಯ ಈ ಯುವಕನ ನಿಜವಾದ ಹೆಸರು ಗಗನ್ ಶ್ರೀನಿವಾಸ.

Dr bro Gagan Srinivas

ಜನರಿಗೆ ನಾನು ಇಡೀ ಪ್ರಪಂಚವನ್ನೇ ಸುತ್ತುತ್ತೇನೆ ಮತ್ತು ನಿಮಗೆ ಇಡೀ ಪ್ರಪಂಚವನ್ನೇ ತೋರಿಸುತ್ತೇನೆ ಎಂದು ಹೇಳಿದ ಈಗ ಬೇರೆ ಬೇರೆ ದೇಶದಲ್ಲಿ ಸುತ್ತಾಡುತ್ತ ಅದರ ವಿಡಿಯೋ ಮಾಡಿ ಯು ಟ್ಯೂಬ್ ಮತ್ತು ಫೇಸ್ ಬುಕ್ ಅಪ್ಲೋಡ್ ಮಾಡುವ ಜನರಿಗೆ ಜಗತ್ತನ್ನ ತೋರಿಸುತ್ತಿರುವ ಈತ ಸದ್ಯ ಕರ್ನಾಟಕದಲ್ಲಿ ಪ್ರತಿಯೊಬ್ಬರ ಸ್ಟಾರ್ ಆಗಿದ್ದಾನೆ ಎಂದು ಹೇಳಬಹುದು. ಆರಂಭದಲ್ಲಿ ಕರ್ನಾಟಕ ಮತ್ತು ಭಾರತವನ್ನ ಸುತ್ತಾಡಿತ ಈತ ನಂತರ ದುಬೈ, ರಷ್ಯಾ, ಥೈಲ್ಯಾಂಡ್ ಮತ್ತು ಈಗ ಈತ ಉಜ್ಬೇಕಿಸ್ತಾನ ಪ್ರವಾಸದಲ್ಲಿ ಇದ್ದು ಅಲ್ಲಿನ ಕೆಲವು ಸ್ಥಳಗಳ ಬಗ್ಗೆ ಮಾಹಿತಿಯನ್ನ ಕೊಡುತ್ತಿದ್ದಾನೆ.

ಇನ್ನು ಇದರ ಈತನ ಆದಾಯದ ವಿಷಯಕ್ಕೆ ಬರುವುದಾದರೆ, ಈತ ಫೇಸ್ ಬುಕ್ ಮತ್ತು ಯು ಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಆದಲ್ಲಿ ಬರುವ ಜಾಹಿರಾತಿನ ಮೂಲಕ ಹಣವನ್ನ ಗಳಿಸುತ್ತಾನೆ ಎಂದು ಹೇಳಬಹುದು. ಈತನ ಎಲ್ಲಾ ವಿಡಿಯೋ ಜನರು ಮೆಚ್ಚಿಕೊಂಡಿದ್ದು ಫೇಸ್ ಬುಕ್ ಮತ್ತು ಯು ಟ್ಯೂಬ್ ಈತನ ವಿಡಿಯೋ ಗಳಿಗೆ ಜಾಹೀರಾತನ್ನ ನೀಡುತ್ತದೆ ಮತ್ತು ಅದರಿಂದ ಈತ ಲಕ್ಷ ಲಕ್ಷ ಹಣವನ್ನ ಸಂಪಾಧನೆ ಮಾಡುತ್ತಾನೆ ಎಂದು ಹೇಳಬಹುದು. ಮೂಲಗಳಿಂದ ತಿಳಿದು ಬಂದಿರು ಮಾಹಿತಿಯ ಪ್ರಕಾರ ಈತ ಫೇಸ್ ಬುಕ್ ಮತ್ತು ಯು ಟ್ಯೂಬ್ ಮೂಲಕ ತಿಂಗಳಿಗೆ ಸರಿಸುಮಾರು 5 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಸಂಪಾಧನೆ ಮಾಡುತ್ತಾನೆ ಎಂದು ಹೇಳಬಹುದು. ಸ್ನೇಹಿತರೆ ಇಡೀ ಜಗತ್ತೇನೆ ಸುತ್ತುತ್ತೇನೆ ಎಂದು ಹೊರಟಿರುವ Dr ಬ್ರೋ ಖ್ಯಾತಿಯ ಈ ಗಗನ್ ಶ್ರೀನಿವಾಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Dr bro Gagan Srinivas

Join Nadunudi News WhatsApp Group