Dr. Bro: ನಟ ದರ್ಶನ್ ಮತ್ತು ಸುದೀಪ್ ದಾಖಲೆ ಮುರಿದ Dr. Bro, ಇದು ನಿಜವಾದ ಸಾಧನೆ ಅಂದ ಫ್ಯಾನ್ಸ್

ಕನ್ನಡದ ಸ್ಟಾರ್ ಯೂಟ್ಯೂಬರ್ ಡಾ. ಬ್ರೋ ಹೊಸ ದಾಖಲೆ, ದರ್ಶನ್ ಮತ್ತು ಸುದೀಪ್ ದಾಖಲೆ ಉಡೀಸ್

Dr. Bro Instagram Fallowers: ಕರ್ನಾಟಕದ ಸ್ಟಾರ್ ಯೂಟ್ಯೂಬರ್ ಮತ್ತು ಟ್ರಾವೆಲ್ ವ್ಲಾಗರ್ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರು ಸದ್ಯ ಬಾರಿ ಸುದ್ದಿಯಲ್ಲಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸುಂದರ ಸ್ಥಳಗಳನ್ನು ಕನ್ನಡಿಗರಿಗೆ ತೋರಿಸುತ್ತ ಕೋಟ್ಯಾಂತರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

ಯೂಟ್ಯೂಬ್ ನಲ್ಲಿ ಡಾ. ಬ್ರೋ ವಿಡಿಯೋಗೆ ಅತಿ ಹೆಚ್ಚು ಲೈಕ್ಸ್, ಕಾಮೆಂಟ್ಸ್ ಬರುತ್ತದೆ ಎಂದರೆ ತಪ್ಪಾಗಲಾರದು. ಸದ್ಯ ಈ ಸ್ಟಾರ್ ಯೂಟ್ಯೂಬರ್ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗಿಂತ ಹೆಚ್ಚು ಅಭಿಮಾನಿಗಳನ್ನು ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.

Dr. Bro Instagram Fallowers
Image Credit: Instagram

ಕನ್ನಡದ ಸ್ಟಾರ್ ಯೂಟ್ಯೂಬರ್ ಡಾ. ಬ್ರೋ ಹೊಸ ದಾಖಲೆ
ಡಾ. ಬ್ರೋ ಯಾರಿಗೆ ತಾನೇ ಗೊತ್ತಿಲ್ಲ. ಯೂಟ್ಯೂಬ್ ನಲ್ಲಿ ಇವರ ವಿಡಿಯೋ ನೋಡರೆ ಇರುವವರ ಸಂಖ್ಯೆ ಅತಿ ಕಡಿಮೆ ಎನ್ನಬಹುದು. ಡಾ. ಬ್ರೋ ಅವರು ತಮ್ಮ ಯೂಟ್ಯೂಬ್ ವಿಡಿಯೋದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಇತ್ತೀಚಿಗೆ ಡಾ. ಬ್ರೋ ಅಯೋಧ್ಯ ರಾಮ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ವಿಡಿಯೋವನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.

ಅಯೋಧ್ಯ ರಾಮ ಮಂದಿರವನ್ನು ಕಣ್ತುಂಬಿಕೊಳ್ಳುವ ಸಾಕಷ್ಟು ಭಕ್ತರ ಕನಸನ್ನು ಡಾ. ಬ್ರೋ ಅವರು ತಮ್ಮ ಯೂಟ್ಯೂಬ್ ವಿಡಿಯೋದ ಮೂಲಕ ನನಸು ಮಾಡಿದ್ದಾರೆ. ಅಯೋಧ್ಯ ರಾಮ ಮಂದಿರದ ವಿಡಿಯೋವಂತೂ ಬಾರಿ ವೈರಲ್ ಆಗಿದೆ. ಇನ್ನು ಡಾ. ಬ್ರೋ ಅವರು ಅಯೋದ್ಯೆಗೆ ಭೇಟಿ ನೀಡಿದ ಮೇಲೆ ಇನ್ನಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಡಾ. ಬ್ರೋ ಅವರು ಅಯೋಧ್ಯ ರಾಮ ಮಂದಿರ ಭೇಟಿ ನಂತರ ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಹೆಚ್ಚಾಗಿ. ಅದು ಕನ್ನಡ ಸಿನಿಮಾ ಸ್ಟಾರ್ ಗಳ ದಾಖಲೆಯನ್ನೇ ಮುರಿದಿದೆ.

Dr. Bro Latest News
Image Credit: Instagram

ಕನ್ನಡದ ಸ್ಟಾರ್ ನಟರನ್ನು ಹಿಂದ್ದಿಕ್ಕಿದ ಡಾ. ಬ್ರೋ
ಸದ್ಯ Instagram ಸಕತ್ ಟ್ರೆಂಡ್ ನಲ್ಲಿದೆ. ಮೊಬೈಲ್ ಬಳಸುವವರು ಹೆಚ್ಚಾಗಿ ಇನ್ಸ್ಟಾಗ್ರಾಮ್ ಅನ್ನು ಬಳಸುತ್ತಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಕನ್ನಡ ಸ್ಟಾರ್ ನಟರು ಸೇರಿದಂತೆ ಅನೇಕರು ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಜನರು ತಮ್ಮ ನೆಚ್ಚಿನ ವ್ಯಕ್ತಿಯನ್ನು ಅನುಸರಿಸುತ್ತಾರೆ.

Join Nadunudi News WhatsApp Group

ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಚಾಲೆಜಿಂಗ್ ಸ್ಟಾರ್ ದರ್ಶನ ಅವರು 2M ಫಾಲೋವರ್ಸ್ ಹೊಂದಿದ್ದು, ಕಿಚ್ಚ ಸುದೀಪ್ ಅವರು 2.1M ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಸದ್ಯ ಡಾ. ಬ್ರೋ ಈ ಇಬ್ಬರು ಸಿನಿಮಾ ಸ್ಟಾರ್ ಗಿಂತಲೂ ಅತಿ ಹೆಚ್ಚು ಫಾಲೋವರ್ಸ್ ಅನ್ನು ಹೊಂದುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಸದ್ಯ ಡಾ. ಬ್ರೋ 2.2M ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ 2.32 ಮಿಲಿಯನ್ ಸಬ್ ಸ್ಕ್ರೈಬರ್ಸ್ ಹೊಂದಿರುವ ಡಾ. ಬ್ರೋ ಇನ್ಸ್ಟಾಗ್ರಾಮ್ ನಲ್ಲಿ ಇನ್ನೂ ಹೆಚ್ಚು ಫಾಲೋವರ್ಸ್ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Join Nadunudi News WhatsApp Group