Driving Licence: ವಾಹನ ಸವಾರರಿಗೆ ಪೋಲೀಸರ ಖಡಕ್ ಎಚ್ಚರಿಕೆ, ಈ ತಪ್ಪು ಮಾಡಿದರೆ ಡೈರೆಕ್ಟ್ ನಿಮ್ಮ ಲೈಸನ್ಸ್ ಕ್ಯಾನ್ಸಲ್

ನಿಯಮ ಉಲಂಘನೆ ಮಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರ ಖಡಕ್ ಎಚ್ಚರಿಕೆ

Driving Licence Latest Rule: ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಕೇಂದ್ರ ಸರ್ಕಾರವು ಸಂಚಾರ ನಿಯಮವನ್ನು ಕಠಿಣಗೊಳಿಸುತ್ತಿದೆ. ದೇಶದಲ್ಲಿನ ಟ್ರಾಫಿಕ್ ಸಮಸ್ಯೆಯ ನಿವಾರಣೆಗಾಗಿ ಹೆಚ್ಚಿನ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇತ್ತೀಚೆಗಂತೂ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಸಾಕಷ್ಟು ಸಂಚಾರ ನಿಯಮವನ್ನು ಜಾರಿಗೊಳಿಸಿದ್ದಾರೆ.

ಇನ್ನು ಯಾವುದೇ ರೀತಿಯ ನಿಯಮವನ್ನು ಅಳವಡಿಸಿದರು ಕೆಲವಂದು ಮಂದಿ ನಿಯಮವನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ಸಂಚಾರ ಇಲಾಖೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ಇನ್ನು ಮೋಟಾರು ವಾಹನ ಕಾಯ್ದೆಯಡಿ ಕೆಲ ನಿಯಮ ಉಲ್ಲಂಘನೆಗೆ ಹೆಚ್ಚಿನ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಸದ್ಯ ನಿಯಮ ಉಲಂಘನೆ ಮಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Driving Licence Latest Rule
Image Credit: Businessleague

ವಾಹನ ಸವಾರರಿಗೆ ಪೋಲೀಸರ ಖಡಕ್ ಎಚ್ಚರಿಕೆ
ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವಾಹನ ಚಾಲನಾ ಪರವಾನಗಿಯನ್ನು ರದ್ದು ಮಾಡುವಂತೆ ಪ್ರಕಟಿಸಲಾಗಿದೆ. ಹೀಗಾಗಿ ರಸ್ತೆಗಳಲ್ಲಿ ಸಂಚಾರ ಮಾಡುವವರು ನಿಯಮಗಳ ಬಗ್ಗೆ ತಿಳಿಯುವುದು ಉತ್ತಮ. ನೀವು ಯಾವುದೇ ರೀತಿಯ ತಪ್ಪು ಮಾಡಿ ಸಿಕ್ಕಿ ಬಿದ್ದರು ಕೂಡ ಮೊದಲಿಗೆ ಡ್ರೈವಿಂಗ್ ಲೈಸೆನ್ಸ್ (Driving Licence) ಅಗತ್ಯವಾಗುತ್ತದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾದರೆ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

Driving Licence Rules In India
Image Credit: Original Source

ಈ ತಪ್ಪು ಮಾಡಿದರೆ ಡೈರೆಕ್ಟ್ ನಿಮ್ಮ ಲೈಸನ್ಸ್ ಕ್ಯಾನ್ಸಲ್
ರಸ್ತೆಯಲ್ಲಿ ಅತಿ ವೇಗವಾಗಿ ವಾಹನಗಳನ್ನು ಚಲಾಯಿಸಬಾರದು. ವೇಗನ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ದಂಡದ ಜೊತೆ ನಿಮ್ಮ ಡೈವಿಂಗ್ ಲೈಸೆನ್ಸ್ ಅನ್ನು ಅಮಾನುಗೊಳಿಸುವ ಹಕ್ಕು ಕೂಡ ಸಂಚಾರಿ ಪೊಲೀಸರಿಗೆ ಇರುತ್ತದೆ.

ಅಪಾಯಕಾರಿ ಚಾಲನೆಯು ಅಜಾಗರೂಕ ಚಾಲನೆ ಮತ್ತು ಲೇನ್‌ ಗಳನ್ನು ಪಾಲಿಸದಿದ್ದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಾಗುತ್ತದೆ. ಪದೇ ಪದೇ ಸಂಚಾರ ನಿಯಮವನ್ನು ಉಲ್ಲಂಘಿಸುತ್ತ ಹೋದರೆ ಅಂತವ Driving Licence ರದ್ದುಗೊಳಿಸಲಾಗುವುದು ಎಂದು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಹೌದು ಅತಿ ವೇಗದಲ್ಲಿ ವಾಹನ ಚಲಾಯಿಸಿ ಪದೇಪದೇ ಸಿಕ್ಕಿಬಿದ್ದರೆ ಅಂತಹ ವಾಹನ ಸವಾರರ ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶವನ್ನ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group