Driving Licence Rule: ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡುವವರಿಗೆ ಜೂನ್ 1 ರಿಂದ ಹೊಸ ರೂಲ್ಸ್, ಕಠಿಣ ಪರೀಕ್ಷೆ.

ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡುವವರಿಗೆ ಜೂನ್ 1 ರಿಂದ ಹೊಸ ರೂಲ್ಸ್

Driving Licence New Rule From June 1st: ಸಾಮಾನ್ಯವಾಗಿ ವಾಹನ ಸವಾರರಿಗೆ Driving Licence ಮುಖ್ಯ ದಾಖಲೆಯಾಗಿದೆ. ವಾಹನ ಸವಾರರು ಯಾವುದೇ ರೀತಿಯ ತಪ್ಪು ಮಾಡಿದರು Driving Licence ನೀಡಬೇಕಾಗುತ್ತದೆ. ಇತ್ತೀಚಿಗೆ ದೇಶದಲ್ಲಿ ಹಲವು ನಿಯಮಗಳು ಬದಲಾಗುತ್ತಿದ್ದು ಅದರಲ್ಲಿ Driving Licence ನಿಯಮ ಕೂಡ ಸೇರಿಕೊಂಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರವು ಹೊಸ ಹೊಸ ನಿಯಮಗಳನ್ನು ಪರಿಚಯಿಸುತ್ತಿದೆ.

ಇದೀಗ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮದಲ್ಲಿ ಬದಲಾವಣೆ ತಂದಿದೆ. ವಾಹನ ಸವಾರರು ಹೊಸದಾಗಿ Driving Licence ಮಾಡುವ ಮುನ್ನ ಈ ಬದಲಾಗಿರುವ ನಿಯಮದ ಬಗ್ಗೆ ತಿಳಿಯುವುದು ಉತ್ತಮ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮದಲ್ಲಿ ಸರ್ಕಾರ ಯಾವ ರೀತಿಯ ಬದಲಾವಣೆಯನ್ನು ತಂದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Driving Licence New Rule From June 1st
Image Credit: Digit

ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡುವವರಿಗೆ ಜೂನ್ 1 ರಿಂದ ಹೊಸ ರೂಲ್ಸ್
ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಗೆ ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ.

ಚಾಲನಾ ತರಬೇತಿ ಕೇಂದ್ರಗಳಿಗೆ ಹೊಸ ನಿಯಮ
ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಇದರ ಪ್ರಕಾರ ಖಾಸಗಿ ಚಾಲನಾ ತರಬೇತಿ ಕೇಂದ್ರ ನಡೆಸಲು ಕನಿಷ್ಠ 1 ಎಕರೆ ಜಮೀನು ಇರಬೇಕು. 4 ಚಕ್ರದ ಮೋಟಾರು ವಾಹನಗಳಿಗೆ ಚಾಲನಾ ಕೇಂದ್ರದಲ್ಲಿ ಹೆಚ್ಚುವರಿ 2 ಎಕರೆ ಜಮೀನು ಬೇಕಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರವು ಸಾಕಷ್ಟು ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕು. ತರಬೇತುದಾರರು ಕನಿಷ್ಠ ಪ್ರೌಢಶಾಲಾ ಶಿಕ್ಷಣವನ್ನು ಹೊಂದಿರಬೇಕು. ಇದಲ್ಲದೆ ಅವರು ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್‌ ನ ಮೂಲಭೂತ ಅಂಶಗಳನ್ನು ತರಬೇತುದಾರರು ತಿಳಿದಿರಬೇಕು.

Driving Licence New Rule
Image Credit: Rightsofemployees

ಲಘು ವಾಹನ ತರಬೇತಿಯನ್ನು 4 ವಾರಗಳಲ್ಲಿ ಅಂದರೆ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಕನಿಷ್ಠ ಥಿಯರಿ ಮತ್ತು ಪ್ರಾಯೋಗಿಕ ಎರಡು ವಿಭಾಗಗಳಾಗಿ ವಿಂಗಡಿಸಬೇಕು. ಇದರಲ್ಲಿ ಥಿಯರಿ ವಿಭಾಗ 8 ಗಂಟೆ ಮತ್ತು ಪ್ರಾಯೋಗಿಕ 21 ಗಂಟೆ ಇರಬೇಕು. ಭಾರೀ ಮೋಟಾರು ವಾಹನಗಳಿಗೆ 38 ಗಂಟೆಗಳ ತರಬೇತಿ. ಇದು 8 ಗಂಟೆಗಳ ತಿವೈರಿ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿಯನ್ನು ಒಳಗೊಂಡಿದೆ. ಈ ತರಬೇತಿಯು 6 ವಾರಗಳಲ್ಲಿ ಪೂರ್ಣಗೊಳ್ಳುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮಗಳ ಉದ್ದೇಶವಾಗಿದೆ.

Join Nadunudi News WhatsApp Group

Driving Licence Latest Update
Image Credit: Thebegusarai

Join Nadunudi News WhatsApp Group