Driving Licence: ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಿಂತೆಬೇಡ, ಆನ್ಲೈನ್ ನಲ್ಲಿ ಈರೀತಿಯಾಗಿ DL ಗಾಗಿ ಅರ್ಜಿ ಸಲ್ಲಿಸಿ.

ಇನ್ನುಮುಂದೆ ಡ್ರೈವಿಂಗ್ ಲೈಸನ್ಸ್ ಮಾಡಿಸುವುದು ಇನ್ನಷ್ಟು ಸುಲಭ

Driving Licence New Rule: ಸದ್ಯ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಗೆ ಬಂದಿದೆ. ಅದರಲ್ಲೂ ಜೂನ್ ನಿಂದ ಅನೇಕ ಹೊಸ ನಿಯಮಗಳು ಜಾರಿಯಲ್ಲಿವೆ. ಇನ್ನು ಜೂನ್ 1 ರಿಂದ ದೇಶದಾದ್ಯಂತ Driving Licence ಪಡೆಯುವ ನಿಯಮದಲ್ಲಿ ಬದಲಾವಣೆ ಆಗಿರುವ ಬಗ್ಗೆ ಎಲ್ಲರಿಗು ತಿಳಿರಬಹುದು. ಹೊಸ ನಿಯಮದ ಪ್ರಕಾರ ನೀವು ಡ್ರೈವಿಂಗ್ ಮಾಡಿಸಿಕೊಳ್ಳಲು ಹೆಚ್ಚು ಕಷ್ಟಪಡುವ ಅಗತ್ಯ ಇಲ್ಲ. ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು.

Driving Licence New Rules
Image Credit: Original Source

ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಿಂತೆಬೇಡ
ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಗೆ ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬಂದಿದೆ. ಜೂನ್ 1 ರಿಂದ ಹೊಸ ನಿಯಮದ ಪ್ರಕಾರ ವಾಹನ ಸವಾರರು DL ಅನ್ನು ಪಡೆದುಕೊಳ್ಳಬಹುದು.

ಹೊಸ ನಿಯಮಗಳ ಪ್ರಕಾರ, ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಬದಲಿಗೆ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಪರೀಕ್ಷೆಗೆ ಹಾಜರಾಗಬಹುದು. ಅವರು ಚಾಲನಾ ಪರೀಕ್ಷೆಯನ್ನು ನಡೆಸಿ ಪ್ರಮಾಣಪತ್ರವನ್ನು ನೀಡುತ್ತಾರೆ. ಅದರ ನಂತರ, ಚಾಲನಾ ಪರವಾನಗಿಯನ್ನು ಆರ್‌ಟಿಒ ಕಚೇರಿಯಿಂದ ಪಡೆಯಬಹುದು.

Driving Licence New Rule 2024
Image Credit: Goodreturns

ಆನ್ಲೈನ್ ನಲ್ಲಿ ಈ ರೀತಿಯಾಗಿ DL ಗಾಗಿ ಅರ್ಜಿ ಸಲ್ಲಿಸಿ
•ಅಧಿಕೃತ ಸರ್ಕಾರಿ ವೆಬ್‌ ಸೈಟ್ https://parivahan.gov.in/parivahan/ ಗೆ ಭೇಟಿ ನೀಡಿ

•ಆನ್‌ ಲೈನ್ ಸೇವೆಗಳ ಆಯ್ಕೆಗೆ ಹೋಗಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.

Join Nadunudi News WhatsApp Group

•ನೀವು ವಾಸಿಸುವ ರಾಜ್ಯವನ್ನು ಆಯ್ಕೆಮಾಡಿ.

•ನಂತರ ‘ಕಲಿಕಾ ಪರವಾನಗಿ ಅಪ್ಲಿಕೇಶನ್’ ಆಯ್ಕೆಯನ್ನು ಕ್ಲಿಕ್ ಮಾಡಿ.

•ತಕ್ಷಣ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳಿ.

•ನೀವು ಇಲ್ಲಿ ಕಾಣುವ ಮಾರ್ಗಸೂಚಿಗಳನ್ನು ಓದಿ ಮತ್ತು ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

•ಅದರ ನಂತರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.

•ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.

•ಅಂತಿಮವಾಗಿ ಟೆಸ್ಟ್ ಡ್ರೈವ್ ದಿನಾಂಕವನ್ನು ಆಯ್ಕೆ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.

•ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಆನ್‌ ಲೈನ್ ಅಥವಾ ಆಫ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

•ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಅಗತ್ಯ ದಾಖಲೆಗಳೊಂದಿಗೆ RTO ಕಚೇರಿಗೆ ಭೇಟಿ ನೀಡಿ.

•ನಿಮ್ಮ ಚಾಲನಾ ಕೌಶಲ್ಯದ ಸ್ಲಿಪ್ ಅನ್ನು RTO ಅಧಿಕಾರಿಗಳಿಗೆ ತೋರಿಸಿ.

•ನಿಮ್ಮ ಚಾಲನಾ ಕೌಶಲ್ಯವು ಪರಿಪೂರ್ಣವಾಗಿದ್ದರೆ, ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.

driving licence online application
Image Credit: Zeenews

Join Nadunudi News WhatsApp Group