Driving Licence 2024: ಹೊಸ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ನಿಯಮದಲ್ಲಿ ಬದಲಾವಣೆ

ಇನ್ನುಮುಂದೆ Driving Licence ಪಡೆಯುವುದು ಇನ್ನಷ್ಟು ಸುಲಭ

Driving Licence Online Apply Process: ವಾಹನ ಸವಾರರಿಗೆ ಮುಖ್ಯವಾಗಿ ಬೇಕಾಗಿರುವ ದಾಖಲೆ ಎಂದರ್ ಅದು Driving Licence . ವಾಹನ ಹೊಂದಿರುವ ಪ್ರತಿಯೊಬ್ಬರೂ ಕೂಡ ರಸ್ತೆಗಿಳಿಯುವ ಮುನ್ನ Driving Licence ಅನ್ನು ಹೊಂದುವುದು ಮುಖ್ಯವಾಗಿದೆ. ಇನ್ನು 18 ವರ್ಷ ಮೇಲ್ಪಟ್ಟವರು Driving Licence ಅನ್ನು ಪಡೆಯಲು ಅರ್ಹರಾಗಿರುತ್ತದೆ.

ಈ ಹಿಂದೆ Driving Licence ಅನ್ನು ಪಡೆಯಲು ಸಾಕಷ್ಟು ಕಷ್ಟಪಡಬೇಕಾಗಿತ್ತು. ಆದರೆ RTO ಇತ್ತೀಚಿಗೆ Driving Licence ಪಡೆಯುವ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಿದೆ. ಆನ್ಲೈನ್ ನ ಮೂಲಕ ಕೂಡ Driving Licence ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದೀಗ Driving Licence ಪಡೆಯುವವರಿಗೆ ಹೊಸ ನಿಯಮ ಜಾರಿಯಾಗಿದೆ. ಇನ್ನುಮುಂದೆ Driving Licence ಪಡೆಯುವುದು ಇನ್ನಷ್ಟು ಸುಲಭವಾಗಲಿದೆ.

Driving Licence Online Apply Process
Image Credit: Informal News

Driving Licence ಪಡೆಯಲು ಹೊಸ ನಿಯಮ ಜಾರಿ
ಈ ಹಿಂದೆ Online ಮೂಲಕ DL ಗೆ ಅರ್ಜಿ ಸಲ್ಲಿಸಿದ್ದರೂ, ದಾಖಲೆಗಳ ಪರಿಶೀಲನೆಗಾಗಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈಗ ಎಲ್ಲಾ ದಾಖಲೆಗಳನ್ನು Online ನಲ್ಲಿ ಸಲ್ಲಿಸಬಹುದು. ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ Website https://transport.karnataka.gov.in/index.php/ ವೆಬ್‌ ಸೈಟ್‌ ನ ಬಲಭಾಗದಲ್ಲಿ ನೀವು ಕಲಿಕಾ ಚಾಲನಾ ಅನುಜ್ಞಾನ ಪತ್ರ / ಚಾಲನಾ ಅನುಜ್ಞಾ ಪತ್ರವನ್ನು ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿದರೆ, Online ನಲ್ಲಿ DL ಪಡೆಯಲು ಎರಡು ಮಾರ್ಗಗಳನ್ನೂ ತೋರಿಸುತ್ತದೆ.

Driving Licence Online Apply
Image Credit: ABP Live

ಮನೆಯಲ್ಲಿಯೇ ಕುಳಿತು ಒಂದೇ ಕ್ಲಿಕ್ ನಲ್ಲಿ DL ಪಡೆಯಬಹುದು
ನೀವು ಸಾರಥಿ 4 ರ ಮೂಲಕ ಕಲಿಕೆಯ Driving Licence ಮತ್ತು ಚಲನ ಅನುಜ್ಞಾ ಪಾತ್ರಕ್ಕೆ ಅರ್ಜಿ ಸಲ್ಲಿಸಲು ಹೋದರೆ, ಹೊಸ ಕಲಿಕಾ / ಚಲನ ಲೈಸೆನ್ಸ್ ಸಾರಥಿ – 4 (ಆಯ್ದ ಕಛೇರಿಗಳು ಮಾತ್ರ) ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ಹತ್ತಿರದ RTO ಕಚೇರಿಯನ್ನು ಆಯ್ಕೆ ಮಾಡುವ ಮೂಲಕ ನೀವು ಅರ್ಜಿಯನ್ನು ಮುಂದುವರಿಸಬಹುದು.

ಸಾರಥಿ-4 ರಲ್ಲಿ ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸಿದ ನಂತರ, ಗಣಕೀಕೃತ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಆನ್‌ ನಲ್ಲಿಯೇ ಉತ್ತರಿಸಬೇಕಾದ 15 ಪ್ರಶ್ನೆಗಳಿರುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು ಕನಿಷ್ಟ 10 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಕಲಿಕಾ ಪರವಾನಗಿ ನಿಮಗೆ ಲಭ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group