Drought Relief: ರೈತರ ಬರಪರಿಹಾರದ ಹಣ ಅವರ ಸಾಲಕ್ಕೆ ಜಮಾ, ಬ್ಯಾಂಕುಗಳಿಂದ ಕೆಟ್ಟ ನಿರ್ಧಾರ.

ರೈತರ ಬರಪರಿಹಾರದ ಹಣ ಅವರ ಸಾಲಕ್ಕೆ ಜಮಾ

Crop Compensation Amount Latest Update: ರಾಜ್ಯದ ರೈತರಿಗೆ 2023 ರ ಸಾಲಿನಲ್ಲಿ ಬರ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದೀಗ ಕೇಂದ್ರ ಸರ್ಕಾರ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಬೆಳೆ ಪರಿಹಾರ ಮೊತ್ತ ಬಿಡುಗಡೆಯಾದ ಖುಷಿ ರೈತರಿಗೆ.

ಆದರೆ ಈಗ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಬೆಳೆ ಪರಿಹಾರ ಮೊತ್ತದ ವಿಷಯವಾಗಿ ಶಾಕ್ ನೀಡಿದೆ. ಇದರಿಂದಾಗಿ ಬೆಳೆ ನಷ್ಟದಿಂದ ಕಷ್ಟ ಅನುಭವಿಸುತ್ತಿರುವ ರೈತರಿಗೆ ಮತ್ತಷ್ಟು ಬರೇ ಎಳೆದಂತಾಗಿದೆ. ರೈತರು ಮತ್ತೆ ಚಿಂತಿಸುವಂತಾಗಿದೆ.

Crop Compensation Amount
Image Credit: Original source

ಬ್ಯಾಂಕುಗಳಿಂದ ಕೆಟ್ಟ ನಿರ್ಧಾರ
2023 ರಲ್ಲಿ ಮುಂಗಾರು ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರದ ಮೊದಲ ಕಂತಾಗಿ ಅಥವಾ SDRF/NDRF ಮಾರ್ಗಸೂಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರವಾಗಿ ಪ್ರತಿ ರೈತರಿಗೆ ಗರಿಷ್ಠ 2000 ರೂ. ವರೆಗೆ ರೈತರಿಗೆ ಪಾವತಿಸಲು ಸರ್ಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಹೆಚ್ಚುವರಿ ಮೊತ್ತಕ್ಕೆ ಅರ್ಹರಾಗಿರುವ ರೈತರಿಗೆ ಹೆಚ್ಚುವರಿ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಿದೆ.

ಬರ ಪರಿಸ್ಥಿತಿಯಿಂದ ಶೇ.33 ಕ್ಕಿಂತ ಹೆಚ್ಚಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಗರಿಷ್ಠ 02 ಹೆಕ್ಟೇರ್‌ ಗೆ 2000 ರೂ ಸೀಮಿತಗೊಳಿಸಿದರೆ, ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್‌ ಗೆ 8,500 ರೂ., ನೀರಾವರಿ ಬೆಳೆಗೆ ಹೆಕ್ಟೇರ್‌ ಗೆ 17,000 ರೂ. ಮತ್ತು ಬಹುವಾರ್ಷಿಕ ಬೆಳೆಗೆ ಹೆಕ್ಟೇರ್‌ ಗೆ 22,500 ರೂ. ಬೆಳೆ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗಿದೆ. ಬೆಳೆ ಪರಿಹಾರದ ಮೊತ್ತ ಕೈಗೆ ಸಿಗುತ್ತದೆ ಎನ್ನುವ ಖುಷಿಯಲ್ಲಿದ್ದ ರೈತರಿಗೆ ಬ್ಯಾಂಕುಗಳು ಶಾಕ್ ನೀಡಿದೆ.

Crop Compensation Amount Latest Update
Image Credit: New Indian Express

ರೈತರ ಬರಪರಿಹಾರದ ಹಣ ಅವರ ಸಾಲಕ್ಕೆ ಜಮಾ
ರಾಜ್ಯ ಸರಕಾರ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿದರೆ ಆ ಹಣ ಈಗ ಬ್ಯಾಂಕ್ ಸಾಲಕ್ಕೆ ಹೊಂದಾಣಿಕೆಯಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ಬರ ಪರಿಹಾರವನ್ನು ಸರಕಾರ ಜಮಾ ಮಾಡಿದೆ. ಆದರೆ ಕೆಲ ಬ್ಯಾಂಕ್ ಗಳು ರೈತರ ಬೇಳೆಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಈ ವಿಷಯ ತಿಳಿದ ರೈತರು ಬ್ಯಾಂಕ್‌ ಗೆ ಹೋದರೆ ಬೆಳೆ ಸಾಲಕ್ಕೆ ಹೊಂದಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಳೆ ಪರಿಹಾರ ಮೊತ್ತ ಬಿಡುಗಡೆಯಾದರು ಕೂಡ ಬ್ಯಾಂಕ್ ನ ಈ ನಿರ್ಧಾರದಿಂದಾಗಿ ರೈತರ ಕೈಗೆ ಪರಿಹಾರದ ಮೊತ್ತ ಸಿಗದಂತಾಗಿದೆ.

Join Nadunudi News WhatsApp Group

Crop Compensation Money Update
Image Credit: Easemywatch

Join Nadunudi News WhatsApp Group