Driving Licence: ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಈಗ ಟೆಸ್ಟ್ ಇಲ್ಲದೆ ಪಡೆಯಿರಿ ಲೈಸೆನ್ಸ್.

ಈಗ ಡ್ರೈವಿಂಗ್ ಟೆಸ್ಟ್ ಇಲ್ಲದೆ ಹೊಸ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬಹುದು.

Driving Licence Without Test: ಸದ್ಯ ದೇಶದಲ್ಲಿ ಸಾಕಷ್ಟು ಸಂಚಾರಿ ನಿಯಮಗಳು  (Traffic Rules) ಜಾರಿಯಲ್ಲಿ ಇದೆ ಎಂದು ಹೇಳಬಹುದು. ಹೌದು ಸಂಚಾರಿ ಪೊಲೀಸರು (Traffic Police) ನಿಯಮ ಉಲ್ಲಂಘನೆಯ ಕಾರಣ ಪ್ರತಿನಿತ್ಯ ಕೋಟಿಗಟ್ಟಲೆ ಹಣವನ್ನ ವಸೂಲಿ ಮಾಡುತ್ತಿದ್ದಾರೆ.

ಇನ್ನು ವಾಹನ ಖರೀದಿ ಮಾಡುವ ಮತ್ತು ವಾಹನ ಚಲಾಯಿಸುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ದೇಶದಲ್ಲಿ ವಾಹನ ಚಲಾಯಿಸಲು ಲೈಸೆನ್ಸ್ (Drving Licence) ಇರಬೇಕು ಮತ್ತು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಪೊಲೀಸರಿಗೆ ದಂಡವನ್ನ ಕೊಡಬೇಕಾಗುತ್ತದೆ. ಸದ್ಯ ದೇಶದಲ್ಲಿ ಹೊಸ ಲೈಸೆನ್ಸ್ ಮಾಡಿಸುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

driving licence without test
Image Credit: Ndtv

ಬದಲಾಗಿದೆ ಹೊಸ ಡ್ರೈವಿಂಗ್ ಲೈಸೆನ್ಸ್ ಮಾಡುವ ನಿಯಮ
ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಲು ಸಾಕಷ್ಟು ನಿಯಮಗಳು ಮತ್ತು ಜನರು ಈ ನಿಯಮಗಳ ಅಡಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬೇಕು. ಇನ್ನು ಈಗ ಡ್ರೈವಿಂಗ್ ಲೈಸೆನ್ಸ್ ಮತ್ತು LLR ನಿಯಮದಲ್ಲಿ ಸಡಿಲಿಕೆಯನ್ನ ಮಾಡಲಾಗಿದ್ದು ಜನರು ಬಹಳ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಳ್ಳಬಹುದಾಗಿದೆ.

ಟೆಸ್ಟ್ ಇಲ್ಲದೆ ಪಡೆಯಬಹುದು ಡ್ರೈವಿಂಗ್ ಲೈಸೆನ್ಸ್
ಸದ್ಯ ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಬದಲಾವಣೆಯನ್ನ ಮಾಡಲಾಗಿದ್ದು ಜನರು ಯಾವುದೇ ಟೆಸ್ಟ್ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು. ಹೊಸ ಡ್ರೈವಿಂಗ್ ಲೈಸೆನ್ಸ್ ನಿಯಮದ ಪ್ರಕಾರ ಜನರು ಹೊಸ DL ಪಡೆಯುವ ಸಮಯದಲ್ಲಿ RTO ಕಚೇರಿಗೆ ಭೇಟಿನೀಡದೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು. ಕೇಂದ್ರ ರಸ್ತೆ ಸಚಿವಾಲಯದ ಹೊಸ ನಿವೈಮದ ಪ್ರಕಾರ ಇನ್ನುಮುಂದೆ ಅರ್ಜಿದಾರರು ಯಾವುದೇ ಪರೀಕ್ಷೆ ಇಲ್ಲದೆ ಹೊಸ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬಹುದು.

driving licence without any exam
Image Credit: Jagran

ಪರೀಕ್ಷೆ ಇಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದು ಹೇಗೆ
ಹೌದು ಜನರು RTO ಕಚೇರಿಗೆ ಭೇಟಿನೀಡದೆ ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ಸ್ಕೂಲ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಬಹುದು. ಈ ರೀತಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಮೊದಲು ಮಾನ್ಯತೆ ಇರುವ ಡ್ರೈವಿಂಗ್ ಸ್ಕೂಲ್ ನಲ್ಲಿ ತರೆಬೇತಿ ಪಡೆದುಕೊಂಡು ಅಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಇನ್ನು ಅಲ್ಲಿ ಪರೀಕ್ಷೆ ಬರೇದ ಅರ್ಜಿದಾರರಿಗೆ ಪ್ರಮಾಣ ಪತ್ರವನ್ನ ನೀಡಲಾಗುತ್ತದೆ ಮತ್ತು ಆ ಪ್ರಮಾಣಪತ್ರದ ಮೂಲಕ ಅರ್ಜಿದಾರ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು.

Join Nadunudi News WhatsApp Group

ಡ್ರೈವಿಂಗ್ ಸ್ಕೂಲ್ ನಲ್ಲಿ ಕೋರ್ಸ್ ಮಾಡುವುದು ಕಡ್ಡಾಯ
ಈ ರೀತಿಯಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ಜನರು ಇಂತಿಷ್ಟು ತಿಂಗಳುಗಳ ಕಾಲ ಕಡ್ಡಾಯವಾಗಿ ತರೆಬೇತಿಗೆ ಹಾಜರಾಗಬೇಕು ಮತ್ತು ಸರ್ಕಾರದ ಮಾನದಂಡವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ರೀತಿಯ ಮೋಸ ಕಂಡುಬಂದಲ್ಲಿ ಅಂತಹ ಡ್ರೈವಿಂಗ್ ಸ್ಕೂಲ್ ಲೈಸೆನ್ಸ್ ಅನ್ನು ರದ್ದು ಮಾಡಲಾಗುತ್ತದೆ. ಇನ್ನು ಅರ್ಜಿ ಹಾಕುವ ಜನರು ಕನಿಷ್ಠ 12 ನೇ ತರಗತಿ ಪಾಸ್ ಆಗಿರಬೇಕು. ಎಲ್ಲಾ ರೀತಿಯ ಡ್ರೈವಿಂಗ್ ಸ್ಕಿಲ್ ಇರುವ ಜನರು ಮಾತ್ರ ಡ್ರೈವಿಂಗ್ ಸ್ಕೂಲ್ ಅಡಿಯಲ್ಲಿ ಹೊಸ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಳ್ಳಬಹುದು.

Join Nadunudi News WhatsApp Group