Duplicate Pan Card: ನಿಮ್ಮ ಪಾನ್ ಕಾರ್ಡ್ ಕಳೆದುಹೋಗಿದ್ಯಾ..? ಚಿಂತಿಸುವ ಅಗತ್ಯವಿಲ್ಲ, ಈ ರೀತಿಯಾಗಿ ನಕಲಿ ಪಾನ್ ಕಾರ್ಡ್ ಪಡೆದುಕೊಳ್ಳಿ.

ಪಾನ್ ಕಾರ್ಡ್ ಕಳೆದುಕೊಂಡರೆ ಈ ರೀತಿಯಲ್ಲಿ ನಕಲಿ ಪಾನ್ ಕಾರ್ಡ್ ಪಡೆದುಕೊಳ್ಳಿ.

Duplicate Pan Card Online Apply: ಸದ್ಯ ದೇಶದಲ್ಲಿ Aadhaar Card ನ ಜೊತೆಗೆ Pan Card ಕೂಡ ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಂದು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಆಧಾರ್ ಕಾರ್ಡ್ ನ ಸ್ಥಾನವನ್ನು ಪಾನ್ ಕಾರ್ಡ್ ತುಂಬುತ್ತಿದೆ ಎನ್ನಬಹುದು. ಭಾರತೀಯ ಪ್ರಜೆ ಆದವರಿಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಅದೇ ರೀತಿ ಪಾನ್ ಕಾರ್ಡ್ ಹೊಂದುವುದು ಕೂಡ ಅಷ್ಟೇ ಮುಖ್ಯವಾಗದೆ. ಪಾನ್ ಕಾರ್ಡ್ ಸದ್ಯ ವೈಯಕ್ತಿಕ ದಾಖಲೆಗಳಲ್ಲಿ ಮುಖ್ಯ ದಾಖಲೆಯಾಗಿದೆ ಎನ್ನಬಹುದು.

ಇನ್ನು ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು ಅನ್ನುವ ಗೊಂದಲಕ್ಕೆ ಎಲ್ಲರೂ ಕೂಡ ಒಳಲಾಗುತ್ತಾರೆ. ಹಾಗಾದರೆ ಪಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು ಮತ್ತು ಅದೇ ಪಾನ್ ಕಾರ್ಡ್ ಮರಳಿ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.

PAN Card Latest Update
Image Credit: Navi

ನಿಮ್ಮ ಪಾನ್ ಕಾರ್ಡ್ ಕಳೆದುಹೋಗಿದ್ಯಾ..? ಚಿಂತಿಸುವ ಅಗತ್ಯವಿಲ್ಲ
ಕೆಲವೊಮ್ಮೆ ಅನಿರೀಕ್ಷಿತವಾಗಿ Pan Card ಕಳೆದುಹೋಗುತ್ತದೆ. ಎಲ್ಲಿಯಾದರೂ ಬಿದ್ದು ಹೋಗುವುದು, ಅಥವಾ ಪಾನ್ ಕಾರ್ಡ್ ಅನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವ ಬಗ್ಗೆ ನೆನಪಿಲ್ಲದೆ ಇರುವುದು ಹೀಗೆ ಸಾಕಷ್ಟು ಕಾರಣಗಳಿಂದ ಜನರು ತಮ್ಮ ಒರಿಜಿನಲ್ ಪಾನ್ ಕಾರ್ಡ್ ಅನ್ನು ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

ಆದಾಯ ತೆರಿಗೆ ಪಾವತಿದಾರರಿಗಂತೂ ಪಾನ್ ಕಾರ್ಡ್ ಮುಖ್ಯ ದಾಖಲೆಯಾಗಿದೆ. ಇನ್ನುಮುಂದೆ ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಕಳೆದುಕೊಂಡ್ರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಡೂಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ನೀವು ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ನಕಲಿ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

PAN Card Latest Update
Image Credit: Rightsofemployees

ಪಾನ್ ಕಾರ್ಡ್ ಡೂಪ್ಲಿಕೇಟ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
*ಮೊದಲು PAN ಸೇವಾ ಪೋರ್ಟಲ್ ನ ಅಧಿಕೃತ ವೆಬ್ ಸೈಟ್ www.pan.utiitsl.com ಭೇಟಿನೀಡಿ.

Join Nadunudi News WhatsApp Group

*ನಂತರ ತೆರೆಯುವ ಪುಟದಲ್ಲಿ ಕಂಡುಬರುವ ನಿಯಮಗಳು ಮತ್ತು ಷರತ್ತುಗಳನ್ನು ಗಮನಿಸಿ.

*ನಂತರ ನಕಲು ಪ್ಯಾನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ

*ಇದಕ್ಕಾಗಿ ನಿಮ್ಮ ಪ್ಯಾನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

*ಎಲ್ಲ ಮಾಹಿತಿಯನ್ನು ಭಾರ್ತಿ ಮಾಡಿದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

*ನಂತರ ನಿಮ್ಮನ್ನು ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

*ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ

*ನಂತರ ನೀವು PAN ಕಾರ್ಡ್ ಮರುಮುದ್ರಣಕ್ಕಾಗಿ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.

Pan Card Latest Update
Image Credit: Krishijagran

ನಕಲಿ ಪಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು
•ಆಧಾರ್ ಕಾರ್ಡ್
•ಮತದಾರರ ಗುರುತಿನ ಚೀಟಿ
•ಚಾಲನಾ ಪರವಾನಿಗೆ
•ಪಾಸ್ಪೋರ್ಟ್
•ಪಡಿತರ ಚೀಟಿ
•ಜನ್ಮ ದಿನಾಂಕದ ಪುರಾವೆಗಾಗಿ ಸ್ವಯಂ ದೃಢೀಕರಿಸಿದ ಪ್ರತಿ
•ಮೂಲ PAN ಕಾರ್ಡ್‌ ನ ಸ್ವಯಂ ದೃಢೀಕರಿಸಿದ ಪ್ರತಿ

Join Nadunudi News WhatsApp Group