Dwarkish Wives: ಪತ್ನಿ ಅಂಬುಜಾ ಅವರನ್ನ ಪ್ರಾಣಕ್ಕಿಂತ ಹೆಚ್ಚು ಪ್ರತಿಸುತ್ತಿದ್ದ ದ್ವಾರಕೀಶ್ ಎರಡನೇ ಮದುವೆ ಆಗಿದ್ದೇಕೆ ಗೊತ್ತಾ…?

ಅಂಬುಜಾ ಅವರನ್ನು ಹೆಚ್ಚು ಪ್ರೀತಿಸುವ ದ್ವಾರಕೀಶ್ ಎರಡನೇ ಮದುವೆ ಆಗಿದ್ದು ಏಕೆ..?

Dwarakish Life Story: ಕನ್ನಡದ ಖ್ಯಾತ ನಟರಾದ ದ್ವಾರಕೀಶ್ (dwarakish) ಅವರು ನಿನ್ನೆ ನಿಧನರಾಗಿದ್ದಾರೆ. ದ್ವಾರಕೀಶ್ ಅವರ ಅಗಲಿಕೆಯ ನೋವು ಎಲ್ಲರನ್ನು ಕಾಡುತ್ತಿದೆ ಎನ್ನಬಹುದು. ಕನ್ನಡ ಚಿತ್ರರಂಗದ ಇನ್ನೋರ್ವ ಪ್ರತಿಭಾವಂತ ನಟ, ನಿರ್ಮಾಪಕ, ನಿರ್ದೇಶಕ ಎಲ್ಲರನ್ನು ಆಗಲಿ ಇಹಲೋಕ ತ್ಯಜಿಸಿರುವುದು ನಿಜಕೂ ವಿಷಾದನೀಯ.

ದ್ವಾರಕೀಶ್ ಅವರ ಮರಣದ ನಂತರ ಅವರ ಬಗ್ಗೆ ಸಾಕಷ್ಟು ವಿಷಯಗಳು ಕೇಳಿಬರುತ್ತಿದೆ. ದ್ವಾರಕೀಶ್ ಅವರ ವಯಕ್ತಿಕ ಜೀವನದ ಬಗ್ಗೆ ಅಷ್ಟಾಗಿ ಹೊರಗೆ ಎಲ್ಲಿಯೂ ಅವರು ಹೇಳಿಕೊಂಡಿಲ್ಲ. ನಾವೀಗ ದ್ವಾರಕೀಶ್ ಅವರ ವೈವಾಹಿಕ ಜೀವನ ಹೇಗಿತ್ತು..? ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Dwarakish Life Story
Image Credit: News 18

ಖ್ಯಾತ ನಿರ್ದೇಶಕ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿ
ಖ್ಯಾತ ನಿರ್ದೇಶಕ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲ ಪತ್ನಿ ಅಂಬುಜಾ. ಎರಡನೇ ಪತ್ನಿ ಶೈಲಜಾ. ಮೊದಲ ಪತ್ನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ದ್ವಾರಕೀಶ್ ಎರಡನೇ ಮದುವೆಯಾಗಿದ್ದರು. ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ 2021 ರಲ್ಲಿ ನಿಧನರಾದರು. ದ್ವಾರಕೀಶ್, ಅವರ ಪತ್ನಿ ನಿಧನರಾದ ದಿನವೇ ಇಹಲೋಕ ತ್ಯಜಿಸಿದರು.

ದ್ವಾರಕೀಶ್ ಚಿತ್ರರಂಗಕ್ಕೆ ಬರುವ ಮುನ್ನ ಅಂಬುಜಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಚಿತ್ರದುರ್ಗದವರಾದ ಅಂಬುಜಾ ವಿದ್ಯಾವಂತರಾಗಿದ್ದರು. ಆ ಕಾಲಕ್ಕೆ Msc ವ್ಯಾಸಂಗ ಮಾಡಿದ್ದ ಅಂಬುಜಾ ಕಾಲೇಜ್‌ವೊಂದರಲ್ಲಿ ಲೆಕ್ಚರರ್ ಆಗಿದ್ದರು. ಮದುವೆಯ ನಂತರ ಅಂಬುಜಾ ವೃತ್ತಿಯನ್ನು ಮುಂದುವರಿಸಲು ದ್ವಾರಕೀಶ್ ಬಿಡಲಿಲ್ಲ. ಚಿತ್ರರಂಗಕ್ಕೆ ಕಾಲಿಡುವ ಸಮಯ ಬಂದಾಗ ದ್ವಾರಕೀಶ್ ಪತ್ನಿ ಅಂಬುಜಾಳನ್ನು ಕೇಳಿದರು. ಆಗ “ನೀವು ನನಗೆ ಇಷ್ಟ ನೀವೇ ನನಗೆ ಪ್ರಪಂಚ ನೀವು ಬಿಟ್ಟು ಬೇರೇನೂ ಬೇಡ ಎಂದು ಅಂಬುಜಾ ತನ್ನ ಗಂಡನಿಗೆ ಹೇಳಿದಳಂತೆ.

ಅಂದಹಾಗೆ ಅಂಬುಜಾ ದ್ವಾರಕೀಶ್‌ ಗಿಂತ 6 ತಿಂಗಳು ದೊಡ್ಡವರು. ಅಂಬುಜಾ ದ್ವಾರಕೀಶ್‌ ನನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅಂಬುಜಾ ತನ್ನ ಪತಿ ದ್ವಾರಕೀಶ್‌ ನನ್ನು ಒಮ್ಮೆಯೂ ಪ್ರಶ್ನಿಸಲೇ ಇಲ್ಲ. ದ್ವಾರಕೀಶ್ ಗೆ ಅಡುಗೆ ಮಾಡುವುದರಲ್ಲಿ ಅಂಬುಜಾ ಸದಾ ಮುಂದು. ದ್ವಾರಕೀಶ್ ಮತ್ತು ಅಂಬುಜಾ ಅವರಿಗೆ ಐದು ಮಕ್ಕಳಿದ್ದಾರೆ – ಸಂತೋಷ್, ಯೋಗೀಶ್, ಗಿರೀಶ್, ಸುಖೀಶ್ ಮತ್ತು ಅಭಿಲಾಷ್. ದ್ವಾರಕೀಶ್ ಮತ್ತು ಅಂಬುಜಾ 62 ವರ್ಷಗಳ ಸುದೀರ್ಘ ದಾಂಪತ್ಯವನ್ನು ಹೊಂದಿದ್ದರು.

Join Nadunudi News WhatsApp Group

Dwarakish Wife
Image Credit: Vijaykarnataka

ಅಂಬುಜಾ ಅವರನ್ನು ಹೆಚ್ಚು ಪ್ರೀತಿಸುವ ದ್ವಾರಕೀಶ್ ಎರಡನೇ ಮದುವೆ ಆಗಿದ್ದು ಏಕೆ..?
‘ನೀವು ಎರಡನೇ ಮದುವೆಯಾಗಿದ್ದೀರ?’ ಎಂದು ಯಾರಾದರೂ ಕೇಳಿದರೆ, ‘ನಾನು ಎರಡನೇ ಮದುವೆಯಾಗಿಲ್ಲ. ಆದಾಗಿಯೇ ಆಯಿತು. ದೇವರ ಇಚ್ಛೆ ಇರಬೇಕು,” ಎಂದು ದ್ವಾರಕೀಶ್ ಉತ್ತರಿಸುತ್ತಿದ್ದರು. ದ್ವಾರಕೀಶ್ ಮತ್ತು ಅಂಬುಜಾ ಅವರು ಅನ್ಯೋನ್ಯ ವಿವಾಹವನ್ನು ಹೊಂದಿದ್ದಾರೆ. ಅಂಬುಜಾ ಚಿತ್ರರಂಗದಿಂದ ದೂರವಿದ್ದರೂ ಪತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅಂಬುಜಾ ತನ್ನ ಗಂಡ, ಮನೆ ಮತ್ತು ಮಕ್ಕಳನ್ನು ಬಹಳವಾಗಿ ನೋಡಿಕೊಳ್ಳುತ್ತಿದ್ದಳು. ಹೀಗಿದ್ದರೂ ಎರಡನೇ ಮದುವೆ ಆಗಬೇಕಾದ ಪರಿಸ್ಥಿತಿ ದ್ವಾರಕೀಶ್ ಅವರಿಗೆ ಎದುರಾಯಿತು.

‘ಗೌರಿ ಕಲ್ಯಾಣ’ ಸಿನಿಮಾ ನಿರ್ಮಾಣದ ಸಂದರ್ಭ. ಈ ವೇಳೆ ಶೈಲಜಾ ಅವರು ದ್ವಾರಕೀಶ್ ಅವರನ್ನು ಭೇಟಿಯಾಗಿದ್ದು, ತಮ್ಮ ಸಹೋದರಿಯ ಮಗಳಿಗೆ ಸಿನಿಮಾದಲ್ಲಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ಅಲ್ಲಿಂದ ಶೈಲಜಾ ಮತ್ತು ದ್ವಾರಕೀಶ್ ನಡುವೆ ಸ್ನೇಹ ಬೆಳೆಯಿತು. ಶೈಲಜಾ ಬಿ.ಎಸ್ಸಿ ಪದವೀಧರೆ. ಆಗ ಶೈಲಜಾ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಶೈಲಜಾ ಮತ್ತು ದ್ವಾರಕೀಶ್ ನಡುವೆ ಆತ್ಮೀಯತೆ ಬೆಳೆಯಿತು. ಶೈಲಜಾ ಅವರ ಅಕ್ಕನ ಮಗಳಿಗೆ ದ್ವಾರಕೀಶ್ ಸಿನಿಮಾದಲ್ಲಿ ಅವಕಾಶ ಕೊಡಲಿಲ್ಲ. ಆದರೆ, ಶೈಲಜಾ ಅವರನ್ನು ಎರಡನೇ ಮದುವೆಯಾಗಿದ್ದರು.

Dwarakish Wife Ambuja
Image Credit: TV9kannada

Join Nadunudi News WhatsApp Group