Dynamo EV: ಸಿಂಗಲ್ ಚಾರ್ಜ್ ನಲ್ಲಿ 200 Km ಮೈಲೇಜ್, 55 ಸಾವಿರಕ್ಕೆ ಮನೆಗೆ ತನ್ನಿ ದೇಶದ ಅಗ್ಗದ Ev.

ಅಗ್ಗದ ಬೆಲೆಗೆ ಡೈನಮೊ ತನ್ನ ಮೈಲೇಜ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ.

Dynamo Electric Scooter: ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿಭಿನ್ನ ಮಾದರಿಯ Bike, Scooter ಗಳು ಎಂಟ್ರಿ ಕೊಡುತ್ತಿದೆ. ಮಾರುಕಟ್ಟೆಯಲ್ಲಿ Scoter ಗಳು ಕೊಡ್ಫಾ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ದೇಶದ ಪ್ರಸ್ತಿತ ಕಂಪನಿಗಳ ಜೊತೆಗೆ ಒಂದಿಷ್ಟು ಬೆಸ್ಟ್ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ನೂತನ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ನೆಲೆಯೂರುತ್ತಿವೆ.

ಇತ್ತೀಚೆಗೆ Greater ನೋಯಿಡಾದಲ್ಲಿ EV ಇಂಡಿಯಾ ಎಕ್ಸ್ಪೋ 2023 ನಡೆದಿದ್ದು, ಭಾರತದ ಇವಿ ದ್ವಿಚಕ್ರ ವಾಹನಗಳ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಕಂಪನಿಗಳಲ್ಲೊಂದಾದ Dynamo, ತನ್ನ ಹೊಸ ಆರು ಶ್ರೇಣಿಯ EV Scooter ಗಳನ್ನು ಪರಿಚಯಿಸಿದೆ. ಸದ್ಯದಲ್ಲೇ ಈ Dynamo Electric Scooter ಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. Dynamo Electric Scooter ಗ್ರಾಹಕರಿಗೆ ಹೆಚ್ಚಿನ ಆಯ್ಕೆಯಲ್ಲಿ ಲಭ್ಯವಾಗಲಿದೆ.

Dynamo Electric Scooter Feature
Image Credit: Indiamart

Dynamo Electric Scooter
ಸದ್ಯ Dynamo ಮಾರುಕಟ್ಟೆಯಲ್ಲಿ Infinity, Alpha, Smiley, Rx1, Rx4 and Vx1 ಎಂಬ ಸ್ಕೂಟರ್ ಗಳು ಇವಾಗಿದ್ದು, ಇನ್ಫಿನಿಟಿ, ಆಲ್ಫಾ, ಸ್ಮೈಲಿ ಮತ್ತು Vx1 Mid Range ಆಯ್ಕೆಯಲ್ಲಿದ್ದರೆ, Rx1 ಮತ್ತು Rx4 ಗಳು Long range ಆಯ್ಕೆಯ ಸ್ಕೂಟರ್ ಗಳಾಗಿವೆ. Dynamo ಉತ್ಪಾದಕ ಘಟಕವು ಗಾಜಿಯಾಬಾದ್ ಮತ್ತು ಮುಂಬೈಯಲ್ಲಿ ಇರುವುದು ಮತ್ತೊಂದು ವಿಶೇಷ.‌

Dynamo Electric Scooter Feature
ಈ ಹೊಸ ಶ್ರೇಣಿಯ ಸ್ಕೂಟರ್ ಗಳಲ್ಲಿ Bluetooth speakers, anti-theft alarm, IOT technology ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. RX1 ಮತ್ತು RX4 ಇವೆರಡೂ RTO- ನೋಂದಾಯಿತ ಮಾದರಿಗಳಾಗಿವೆ. ಈ ಇ- ಸ್ಕೂಟರ್‌ಗಳು ಗರಿಷ್ಠ 65 ಕಿಮೀ/ ಗಂ ವೇಗವನ್ನು ಸಾಧಿಸಬಲ್ಲವು ಮತ್ತು ವೇಗದ ಚಾರ್ಜಿಂಗ್ ಲಿಥಿಯಂ ಬ್ಯಾಟರಿಗಳೊಂದಿಗೆ ಅಳವಡಿಸಲಾಗಿದ್ದು, 2-3 kWh ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಅವು ಕ್ರಮವಾಗಿ ರೂ 82,000 ಮತ್ತು ರೂ 99,000 ಬೆಲೆಯಲ್ಲಿ ಲಭ್ಯವಿದೆ.

200 km mileage on a single charge
Image Credit: Business

ಸಿಂಗಲ್ ಚಾರ್ಜ್ ನಲ್ಲಿ 200 ಕಿಲೋಮೀಟರ್‌ ಮೈಲೇಜ್
ಆಲ್ಫಾ, ಸ್ಮೈಲಿ, ಇನ್ಫಿನಿಟಿ ಮತ್ತು VXI ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ಗಳವರೆಗೆ ಪ್ರಭಾವಶಾಲಿ ವ್ಯಾಪ್ತಿಯನ್ನು ಒದಗಿಸುತ್ತವೆ.ಈ ಮಾದರಿಗಳು ಮೂರರಿಂದ ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ.ಹಾಗೆಯೆ ಈ ಕಡಿಮೆ ವೇಗದ ಮಾದರಿ 2-3 kWh ಲಿಥಿಯಂ- ಐಯಾನ್ ಬ್ಯಾಟರಿಯಿಂದ ಚಾಲಿತವಾಗಿವೆ. ಸುಲಭ ನಿರ್ವಹಣೆಗಾಗಿ ಈ ಇ- ಸ್ಕೂಟರ್‌ಗಳಿಗೆ 10 ರಿಂದ 12 ಇಂಚಿನ ಟೈರ್‌ಗಳನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಲ್ಲ ಮಾದರಿಗಳು ಸುಮಾರು 55,000 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group