e- Challan: ರಾಜ್ಯದಲ್ಲಿ ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್, ಇನ್ನುಮುಂದೆ ದಂಡ ಈ ರೀತಿಯಲ್ಲಿ ವಸೂಲಿ

ರಾಜ್ಯದೆಲ್ಲೆಡೆ ಇನ್ನುಮುಂದೆ ಇ ಚಲನ್ ಮೂಲಕ ದಂಡ ಪಾವತಿ

e- Challan Fine: ಸದ್ಯ ದೇಶದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಹೊಸ ಸಂಚಾರಿ ನಿಯಮವನ್ನು ಪರಿಚಯಿಸುತ್ತಿದೆ. ಹೊಸ ನಿಯಮಗಳ ಅಡಿಯಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ದಂಡವನ್ನ ವಿಧಿಸಲಾಗುತ್ತಿದೆ.

ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನ ಸವರಾರವು ಕೂಡ ಟ್ರಾಫಿಕ್ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಪಾಲಿಸುವುದು ಅಗತ್ಯವಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಕೆಲವೊಮ್ಮೆ ರಸ್ತೆ ಅಪಘಾತಗಳನ್ನು ಉಂಟುಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ದೇಶದಲ್ಲಿ ಸಂಚಾರಿ ನಿಯಮ ಈಗ ಬಹಳ ಕಠಿಣ ಆಗಿದ್ದು ಪ್ರತಿನಿತ್ಯ ಕೋಟಿಗಟ್ಟಲೆ ಹಣ ಸಂಚಾರಿ ನಿಯಮ ಉಲ್ಲಂಘನೆಯಿಂದ ಬರುತ್ತಿದೆ ಎಂದರೆ ತಪ್ಪಾಗಲಾರದು.

e- Challan Fine
Image Credit: Paytm

ರಾಜ್ಯದಲ್ಲಿ ಇ- ಚಲನ್ ದಂಡ ವ್ಯವಸ್ಥೆ ಜಾರಿ
ಇನ್ನು ಟ್ರಾಫಿಕ್ ನಿಯಮ ಉಲ್ಲಂಘನೆಯಾದರೆ ಸಂಚಾರಿ ಪೊಲೀಸರು ಅದರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು. ಇನ್ನುಮುಂದೆ ಸಂಚಾರ ನಿಯಮ ಉಲ್ಲಂಘನೆಗೆ ಹೊಸ ದಂಡದ ವ್ಯವಸ್ಥೆ ಜಾರಿಯಾಗಲಿದೆ. ಈವರೆಗೆ ಪೆನ್ನು, ಪೇಪರ್ ಹಿಡಿದು ದಂಡ ವಸೂಲಿ ಮಾಡುತ್ತಿದ್ದ ಸಂಚಾರಿ ಪೊಲೀಸರು ಇನ್ನುಮುಂದೆ ಡಿಜಿಟಲ್ ಇ- ಚಲನ್ ನ ಮೂಲಕ ದಂಡ ವಸೂಲಿ ಮಾಡಲಿದ್ದಾರೆ.

ರಾಜ್ಯದೆಲ್ಲೆಡೆ ಇನ್ನುಮುಂದೆ ಇ ಚಲನ್ ಮೂಲಕ ದಂಡ
ಕರ್ನಾಟಕ ಸಾರಿಗೆ ಇಲಾಖೆ ಇದೀಗ ಹೈಟೆಕ್ ದಂಡ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದೆಲ್ಲೆಡೆ ಇನ್ನುಮುಂದೆ ಇ ಚಲನ್ ಮೂಲಕ ದಂಡ ಪಾವತಿಗೆ ಚಾಲನೆಗೆ ಅವಕಾಶ ಸಿಕ್ಕಿದೆ.

e- Challan Fine In Karnataka
Image Credit: Paytm

ರಾಜ್ಯದಲ್ಲಿ ಶೇ. 100 ರಷ್ಟು ಪೇಪರ್ ಲೆಸ್ ದಂಡ ಪಾವತಿ ಜಾರಿಯಾಗಲಿದೆ. ಈ ಹಿನ್ನಲೆ ರಾಜ್ಯ್ ಪೊಲೀಸ್ ಇಲಾಖೆ SBI ಜೊತೆ ಸಹಯೋಗ ಮಾಡಿಕೊಂಡಿದೆ. ಸಾರ್ವಜನಿಕರು ಕಟ್ಟುವ ದಂಡ ನೇರವಾಗಿ ಬ್ಯಾಂಕ್ ಖಾತೆಗೆ ಬಂದು ತಲುಪುತ್ತದೆ. ಜನರು ಪಾವತಿಸಿದ ದಂಡದ ಮೊತ್ತ ನೇರವಾಗಿ ಇಲಾಖಾ ಖಾತೆಗೆ ಬರುವುದರಿಂದ ಒಂದು ರೂ. ನ ಲೆಕ್ಕ ಕೂಡ ತಪ್ಪಿಹೋಗುವುದಿಲ್ಲ. UPI, ಡೆಬಿಟ್ ಕಾರ್ಡ್ ಅಥವಾ ಕ್ಯಾಶ್ ನ ಮೂಲಕ ದಂಡವನ್ನು ಪಾವತಿಸಬಹುದು.

Join Nadunudi News WhatsApp Group

Join Nadunudi News WhatsApp Group