Gruha Lakshmi 2024: ಗೃಹಲಕ್ಷ್ಮಿ ಯೋಜನೆಯ 5 ನೇ ಕಂತಿನ ಹಣ ಬೇಕು ಅಂದರೆ ಈ ಕೆಲಸ ಮಾಡುವುದು ಕಡ್ಡಾಯ, ನಿಯಮ ಬದಲಾವಣೆ

ಗೃಹಲಕ್ಷ್ಮಿ 5 ನೇ ಕಂತಿನ ಹಣ ಪಡೆಯುವ ಎಲ್ಲಾ ಮಹಿಳೆಯರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ

e-kyc Mandatory For Gruha Lakshmi Money: ಗೃಹಲಕ್ಷ್ಮಿ ಯೋಜನೆ (Gruha Lakshmi) ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಪ್ರತಿಯೊಬ್ಬ ಅರ್ಹ ಮಹಿಳೆಯರಿಗೂ ಸಿಗಬೇಕು ಎನ್ನುವುದು ಸರ್ಕಾರದ ಗುರಿಯಾಗಿದ್ದು, ಈಗಾಗಲೇ ಒಂದು ಕಂತಿನ ಹಣ ಪಡೆಯದ ಮಹಿಳೆಯರಿಗಾಗಿ ಅದಾಲತ್ ಹಾಗು ಕ್ಯಾಂಪ್ ಗಳನ್ನೂ ಆಯೋಜಿಸಲಾಗಿದೆ.

ಈ ವ್ಯವಸ್ಥೆಯಿಂದ ಹಲವು ಮಹಿಳೆಯರು ತಮ್ಮ ದಾಖಲೆಯ ತಪ್ಪುಗಳನ್ನು ಸರಿಮಾಡಿಸಿಕೊಂಡು ಹಣ ಪಡೆಯಲು ಪ್ರಾರಂಭಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದೂ, ಕೋಟ್ಯಂತರ ಮಹಿಳೆಯರ ಖಾತೆಯನ್ನು ತಲುಪಿದೆ.

e-kyc Mandatory For Gruha Lakshmi Money
Image Credit: The Economic Times

ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯಲು E-KYC ಕಡ್ಡಾಯ

ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆ ಸೇರಲು ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ಅವುಗಳಲ್ಲಿ ಬಹಳ ಪ್ರಮುಖ ಆಗಿರುವುದು E-KYC. ಮಹಿಳೆಯರಿಗೆ ಐದನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಕೊಳ್ಳತಕ್ಕದ್ದು. ಸರ್ಕಾರ ಹೊರಡಿಸಿದ ಇನ್ನೊಂದು ನಿಯಮವೇನೆಂದರೆ ಅರ್ಜಿ ನೀಡಿದ ಮಹಿಳೆಯ ಹೊರತಾಗಿ ಇನ್ನಿತರ ಉಳಿದ ಕುಟುಂಬದ ಸದಸ್ಯರ E-KYC ಮಾಡಿಸುವುದು ಕೂಡ ಕಡ್ಡಾಯ ಆಗಿದೆ.

ಬ್ಯಾಂಕ್ ಖಾತೆಯ E-KYC ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ

Join Nadunudi News WhatsApp Group

ಬ್ಯಾಂಕ್ ಖಾತೆಯ E-KYC ಆಗಿದೆಯೇ ಎಂದು ತಿಳಿಯಲು ಮೊದಲು https://ahar.kar.nic.in/Home/EServices ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ನಂತರ ಮೂರೂ ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ತದನಂತರ ಹೊಸ ಅಥವಾ ಚಲತಿಯಲ್ಲಿರುವ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಎನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

Gruha Lakshmi 5th Installment
Image Credit: Original Source

ಇದರ ನಂತರ ಹೊಸ ಪುಟ ಕಾಣಿಸುತ್ತದೆ ಅಲ್ಲಿ ಮೂರೂ ಲಿಂಕ್ ಕಾಣಬಹುದು ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ ಅದರ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಪುಟ ತೆರೆದುಕೊಳ್ಳುತ್ತದೆ ಆಗ ವಿತ್ ಒಟಿಪಿ ಅಥವಾ ವಿಥೌಟ್ OTP ಎನ್ನುವ ಆಯ್ಕೆ ಕಾಣಿಸುತ್ತದೆ ಆಗ ವಿಥ್ ಒಟಿಪಿ ಮೇಲೆ ಕ್ಲಿಕ್ ಮಾಡಿ, ಆಗ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿದರೆ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ.

ನಂತರ ಮೊಬೈಲ್ ಗೆ ಬಂದ ಒಟಿಪಿ ಯನ್ನು ನಮೂದಿಸಿ ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಯಾವ ಸದಸ್ಯರ E-KYC ಆಗಬೇಕು ಆ ಹೆಸರನ್ನು ಆಯ್ಕೆ ಮಾಡಿ ಹಾಗು ಇನ್ನಿತರ ಸದಸ್ಯರ E-KYC ಆಗಿದ್ದರೆ ಎಸ್ ಎಂದು ನಿಮಗೆ ಕಾಣಿಸುತ್ತದೆ.

Join Nadunudi News WhatsApp Group