E-Shram: ಕಾರ್ಮಿಕರು ಕೇಂದ್ರದಿಂದ E-Shram ಕಾರ್ಡ್ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

e-Shram ಕಾರ್ಡ್ ನ ಪ್ರಯೋಜನವೇನು...? ಅರ್ಜಿ ಸಲ್ಲಿಸುವುದು ಹೇಗೆ ನೋಡಿ

E-Shram Benefits: ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ e-Shram Card ಯೋಜನೆಯನ್ನು ಪರಿಚಯಿಸಿದೆ. ಇದಕ್ಕಾಗಿಯೇ ಸರ್ಕಾರ ಈ ಶ್ರಮ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರದ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು. ಈ ಯೋಜನೆಯನ್ನು 2021 ರಲ್ಲಿ ಜಾರಿಗೆ ತರಲಾಗಿದೆ.

ಕೇಂದ್ರ ಸರ್ಕಾರವು ಇ-ಶ್ರಮ್ ಯೋಜನೆ ಮೂಲಕ ದೇಶದ ಸುಮಾರು 38 ಕೋಟಿ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡುವ ಗುರಿ ಹೊಂದಿದೆ. ರಾಜ್ಯದಲ್ಲೂ ಇ-ಶ್ರಮ್ ಕಾರ್ಡ್ ವಿತರಿಸಲಾಗುತ್ತಿದೆ. ಕಾರ್ಮಿಕರು ಕೇಂದ್ರದಿಂದ E-Shram ಕಾರ್ಡ್ ಪಡೆಯುವುದು ಹೇಗೆ…? ಎನ್ನುವುದರ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

e-Shram Card Facility
Image Credit: Housing

ಕಾರ್ಮಿಕರು ಕೇಂದ್ರದಿಂದ E-Shram ಕಾರ್ಡ್ ಪಡೆಯುವುದು ಹೇಗೆ…?
ಇ-ಲೇಬರ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾ ಬೇಸ್ ಆಗಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಪ್ರಯೋಜನಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಡಿಜಿಟಲ್ ವೇದಿಕೆಯಾಗಿದೆ. ಇದು ವಿಶಿಷ್ಟವಾದ 12-ಅಂಕಿಯ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ. ಇದು ಕೆಲಸಗಾರನ ಹೆಸರು, ವಯಸ್ಸು, ಲಿಂಗ, ಉದ್ಯೋಗ ಮತ್ತು ಇತರ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರ ಗುರುತಿಸಿರುವ ಕಟ್ಟಡ ಮತ್ತು ಇತರೆ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಗೃಹ ಕಾರ್ಮಿಕರು, ಚಾಲಕರು, ಟೈಲರ್‌ಗಳು, ಬೀದಿ ವ್ಯಾಪಾರಿಗಳು, ಪತ್ರಿಕೆ ವ್ಯಾಪಾರಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಸುಮಾರು 379 ವರ್ಗದ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಈವರೆಗೆ ಇ- ಶ್ರಮ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು 59 ವರ್ಷ ಗರಿಷ್ಟ ವಯೋಮಿಯಿಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ವಯೋಮಿತಿಯನ್ನು ವಿಸ್ತರಿಸಿದೆ. ಹೌದ ಅಸಂಘಟಿತ ಕಾರ್ಮಿಕ ವಯೋಮಿತಿಯನ್ನು ಕೇಂದ್ರ ಸರ್ಕಾರ 59 ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಿದೆ. ಈ ಮೂಲಕ ಅಸಂಘಟಿತ ಕಾರ್ಮಿಕೆರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

Join Nadunudi News WhatsApp Group

e-Shram Card latest Update
Image Credit: Pratidintime

e-Shram ಕಾರ್ಡ್ ನ ಪ್ರಯೋಜನವೇನು…?
ಸರ್ಕಾರ ನೀಡುತ್ತಿರುವ e-Shram ಕಾರ್ಡ್ ನ ಮೂಲಕ ನೀವು ತಿಂಗಳ ಪಿಂಚಣಿಯೊಂದಿಗೆ ಅಪಘಾತದ ಸಮಯದಲ್ಲಿ ವಿಮಾ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಎಲ್ಲ ಯೋಜನೆಗಳ ಲಾಭವನ್ನು ಪಡೆಯಲು ನೀವು e-Shram Card ಹೊಂದುವುದು ಮುಖ್ಯ. ಇನ್ನು ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

e-Shram Card ನ ಮೂಲಕ 60 ವರ್ಷದ ನಂತರ 3,000 ಪಿಂಚಣಿ, ವಿಮೆ ಮತ್ತು ಅಂಗವೈಫಲ್ಯ ಸಮಯದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ಗಳ ಆರ್ಥಿಕ ನೆರವು ಹಾಗೂ ಸಾವಿನ ಸಂದರ್ಭದಲ್ಲಿ 2,00,000 ರೂ. ಗಳ ಹಣಕಾಸಿನ ಸಹಾಯವನ್ನು ಪಡೆಯಬಹುದು. ಯೋಜನೆಯ ಲಾಭವನ್ನು ಪಡೆಯಲು ಕಾರ್ಮಿಕರು e-Shram Card ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು https://register.eshram.gov.in/#/user/self ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ e-Shram ಕಾರ್ಡ್ಅನ್ನು ಪಡೆಯಬಹುದು.

e-Shram Card Benefits
Image Credit: Businessleague

Join Nadunudi News WhatsApp Group